ಬಿಜೆಪಿಯ ಅಭೂತಪೂರ್ವ ವಿಜಯ: ವಿಜಯೋತ್ಸವ
ಶಿಗ್ಗಾವಿ 04 : ಭಾರತೀಯ ಜನತಾ ಪಕ್ಷವು ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸಗಡ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿದ್ದಕ್ಕಾಗಿ ತಾಲೂಕಿನ ಬಾಜಪ ಮಂಡಳದ ವತಿಯಿಂದ ಪಟಾಕಿ ಸಿಡಿಸಿ ಮತ್ತು ಸಿಹಿ ಹಂಚುವುದರ ಮೂಲಕ ವಿಜಯೋತ್ಸವವನ್ನು ಭಾಜಪ ಮುಖಂಡರು ಮತ್ತು ಕಾರ್ಯಕರ್ತರು ಆಚರಿಸಿದರು.
ಈ ಸಂದರ್ಭದಲ್ಲಿ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಯುವ ಮೋರ್ಚಾ ರಾಜ್ಯ ಸಮಿತಿ ಸದಸ್ಯ ನರಹರಿ ಕಟ್ಟಿ, ಪ್ರಧಾನ ಕಾರ್ಯದರ್ಶಿ ರೇಣುಕನಗೌಡ ಪಾಟೀಲ, ಪುರಸಭೆ ಸದಸ್ಯರಾದ ದಯಾನಂದ ಅಕ್ಕಿ, ರಮೇಶ ವನಹಳ್ಳಿ, ಮಂಜುನಾಥ ಬ್ಯಾಹಟ್ಟಿ, ಕೆ.ಎಂ.ಎಫ್ ನಿರ್ದೇಶಕ ಬಸನಗೌಡ ಮೇಲಿನಮನಿ, ಡಾ. ಮಲ್ಲೇಶಪ್ಪ ಹರಿಜನ, ಹನುಮಂತಪ್ಪ ಹರಿಜನ, ಬಸವರಾಜ ಗೊಬ್ಬಿ, ಪ್ರತೀಕ ಕೊಳೇಕರ, ಕಾಶೀನಾಥ ಕಳ್ಳಿಮನಿ, ಅನಿಲ ಸಾತಣ್ಣವರ, ಸಚೀನ ಮಡಿವಾಳರ, ಪ್ರಶಾಂತ ಬಡ್ಡಿ, ಕಿರಣ ಬಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.