ಆಧುನಿಕ ಭಾರತಕ್ಕೆ ಸ್ವಾಮಿ ವಿವೇಕಾನಂದರ ಬೋಧನೆ ಹೆಚ್ಚು ಪ್ರಸ್ತುತ: ಅಮಿತ್ ಶಾ
ಕೋಲ್ಕತಾ, ಡಿ 19: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ ಸ್ವಾಮಿ ವಿವೇಕಾನಂದರ ಬೋಧನೆ ಹೆಚ್ಚು ಪ್ರಸ್ತುತವಾಗಿದೆ. ಅವರ ಮಾರ್ಗವನ್ನು ಅನುಸರಿಸಿದರೆ, ಜಗತ್ತು ಅದರಲ್ಲೂ ವಿಶೇಷವಾಗಿ ಭಾರತ ಮುಂಬರುವ ಕಾಲದಲ್ಲಿ ಭಾರಿ ಲಾಭವನ್ನು ಗಳಿಸುತ್ತದೆ” ಎಂದಿದ್ದಾರೆ. ಉತ್ತರ ಕೋಲ್ಕತ್ತಾದ ಶಿಮ್ಲಾ ಸ್ಟ್ರೀಟ್ ನಲ್ಲಿ ಸ್ವಾಮಿ ವಿವೇಕಾನಂದರಿಗೆ ಪುಷ್ಪಾಂಜಲಿ ಸಲ್ಲಿಸಿದ ಅಮಿತ್ ಶಾ, "ಅಧ್ವೈತಿಕ ಚೇತನವನ್ನು ಆಧುನಿಕ ಚಿಂತನೆಯೊಂದಿಗೆ ಸಂಪರ್ಕಿಸಿದ ಇದು ವಿವೇಕಾನಂದರು ಜನಿಸಿದ ಸ್ಥಳ. ಆಧುನಿಕತೆ, ಆಧ್ಯಾತ್ಮಿಕತೆಯ ಕೊಂಡಿ. ಅವರು ನಮಗೆ ತೋರಿಸಿದ ಹಾದಿಯಲ್ಲಿ ನಾವು ನಡೆಯಬೇಕೆಂದು ಪ್ರಾರ್ಥಿಸುತ್ತೇನೆ " ಎಂದು ಸ್ವಾಮೀಜಿಯ ಪೂರ್ವಜರ ಮನೆಗೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ವಿವೇಕಾನಂದರ ಪೂರ್ವಜರ ಈ ಮನೆಯನ್ನು ರಾಮಕೃಷ್ಣ ಮಿಷನ್ ನವೀಕರಿಸಿ ಬಳಿಕ ಮ್ಯೂಸಿಯಂ ಆಗಿ ಪರಿವರ್ತಿಸಿತು. ಈ ಮನೆಗೆ ಭೇಟಿ ನೀಡಿದ್ದು ನಿಜಕ್ಕೂ ಅದೃಷ್ಟ. "ಸ್ವಾಮೀಜಿ ಭಾರತದ ಸನಾತನ ಧರ್ಮವನ್ನು ಪಾಶ್ಚಿಮಾತ್ಯರಿಗೆ ತಿಳಿಸಿದರು ಅವರ ಅಮೇರಿಕಾ ಭೇಟಿ ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡಿತು” ಎಂದು ಹೇಳಿದರು.
ಎರಡು ದಿನಗಳ ಭೇಟಿಗಾಗಿ ಗುರುವಾರ ತಡರಾತ್ರಿ ಕೋಲ್ಕತಾಗೆ ಆಗಮಿಸಿದ ಕೂಡಲೇ “ತಲುಪಿದೆ” ಕೋಲ್ಕತಾ! ಗುರುದೇವ್ ಟ್ಯಾಗೋರ್, ಈಶ್ವರ್ ಚಂದ್ರ ವಿದ್ಯಾಸಾಗರ್ ಮತ್ತು ಶ್ಯಾಮಾ ಪ್ರಸಾದ್ ಮುಖರ್ಜಿ ಅವರಂತಹ ಶ್ರೇಷ್ಠರ ಈ ಪೂಜ್ಯ ಭೂಮಿಗೆ ನಾನು ನಮಸ್ಕರಿಸುತ್ತೇನೆ, '' ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ,
ಅಮಿತ್ ಸಾ ಅವರು ಮೇದಿನಿಪುರಕ್ಕೆ ತೆರಳಿದ್ದು, ರೈತರನ್ನು ಭೇಟಿಯಾಗಲಿದ್ದು, ಅವರ ಕುಟುಂಬದವರೊಡನೆ ಭೋಜನ ಸ್ವೀಕರಿಸಲಿದ್ದಾರೆ. ಎರಡು ದಿನಗಳ ಈ ಭೇಟಿಯಲ್ಲಿ ಪಶ್ಚಿಮ ಮೇದಿನೀಪುರದ ಮಿಡ್ನಾಪೋರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.