ಶಿಗ್ಗಾವ್

ಮರಗಳ ರಕ್ಷಣೆಗೆ ಜಾಗೃತಿ: ಸೈಕಲ್ ಯಾತ್ರೆ

ಮರಗಳ ರಕ್ಷಣೆಗೆ ಜಾಗೃತಿ: ಸೈಕಲ್ ಯಾತ್ರೆ


ಲೋಕದರ್ಶನ ವರದಿ 

ಶಿಗ್ಗಾವಿ 10: ಹೆಣ್ಣು ಮಕ್ಕಳ ರಕ್ಷಣೆ, ಶಿಕ್ಷಣ ಹಾಗೂ ಪರಿಸರ ರಕ್ಷಣೆ, ಮರಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಲು 10 ವರ್ಷದ ಬಾಲಕಿಯೊಬ್ಬಳು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾಳೆ ಜೊತೆಗೆ ಸೈಕಲ್ ಬಳಸಿ ಪೆಟ್ರೋಲ್ ಉಳಿಸಿ ಎಂದು ಹಲವಾರು ಸಂದೇಶ ಸಾರುತ್ತಾ ಯಾತ್ರೆ ಹೋರಟಿದ್ದಾಳೆ. 

ಮಹಾರಾಷ್ಟ್ರದ ಥಾಣೆ ಮೂಲದ ಸಯಿ ಆಶಿಸ್ ಪಾಟೀಲ್ ಸೈಕಲ್ ಯಾತ್ರೆ ಕೈಗೊಂಡ ಬಾಲಕಿ, ಕಾಶ್ಮೀರದ ಸಿಯಾಚಿನ್‌ನಿಂದ ಡಿ. 14 ರಂದು ಸೈಕಲ್ ಯಾತ್ರೆ ಆರಂಭಿಸಿದ ಬಾಲಕಿ ಸುಮಾರು 4,000 ಕಿ, ಮೀ ದೂರವನ್ನು 60 ದಿನಗಳಲ್ಲಿ ತಲುಪಲು ನಿರ್ಧರಿಸಿದ್ದಾಳೆ, ಬಾಲಕಿಗೆ ಅವಳ ತಂದೆ ಆಶೀಸ್, ತಾಯಿ ವಿದ್ಯಾ ಹಾಗೂ 5 ವರ್ಷದ ಸಹೋದರ ಸಾಯಿ ಕೂಡಾ ಸಾಥ್ ನಿಡಿದ್ದಾರೆ, ಬಾಲಕಿ ತಂದೆ ಕೂಡಾ ಸೈಕಲ್ ಸವಾರಿ ಮಾಡುತ್ತಿದ್ದು ಉಳಿದವರು ವಾಹನದಲ್ಲಿ ಹಿಂಬಾಲಿಸುತ್ತಿದ್ದಾರೆ, ದಾರಿಯುದ್ದಕ್ಕೂ ತಂಡ ಜಾಗೃತಿ ಮೂಡಿಸುತ್ತಾ ಸಾಗುತ್ತಿದ್ದು ಪ್ರತಿದಿನ 120 ರಿಂದ 130 ಕಿ ಮೀ ಸೈಕಲ್ ಸವಾರಿ ಮಾಡುತ್ತಾ ಎಲ್ಲಿ ಅನುಕೂಲವಾಗುತ್ತದೆ ಅಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. 

ಪಟ್ಟಣಕ್ಕೆ ರವಿವಾರ ಆಗಮಿಸಿದ ತಂಡವನ್ನು ಮಾಜಿ ಸಂಸದ ಮಂಜುನಾಥ ಕುನ್ನೂರ ದಂಪತಿ ಸಮೇತರಾಗಿ ಬೆಂಬಲಿಗರೊಂದಿಗೆ ಭೇಟಿ ಕುಷಲೋಪರಿ ವಿಚಾರಿಸಿ ಸಾದನೆ ಮಾಡಲು ಹೊರಟ ಬಾಲಕಿಯನ್ನು ಸನ್ಮಾನಿಸಿ ಮುಂದಿನ ಯಾತ್ರೆ ಶುಭ ಹಾರೈಸಿದರು. 

ನಂತರ ತಂಡವನ್ನು ಉದ್ದೇಶೀಸಿ ಮಾತನಾಡಿ ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಲು ಹೋರಟ ಸಯಿ ಆಶೀಸ್  ಪಾಟೀಲ್ ಅವಳು 10 ವರ್ಷದ ಒಳಗಿದ್ದು 5ನೇ ತರಗತಿಯಲ್ಲಿ ಮುಂಬೈಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾಳೆ, ಈಗಾಗಲೇ ಇವಳು 8 ವರ್ಷದವಳಿದ್ದಾಗ ಮುಂಬೈಯಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಲ್ಲಿಯ ಶಾಸಕರ, ಸಮಾಜ ಸುಧಾರಕರು, ಕೇಂದ್ರ ಸಚಿವರ ಹಾಗೂ ರಾಜ್ಯ ಸಚಿವರ ಜೊತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಮುಂಬೈ ದಿಂದ ಲೂನಾವರ್ ವರೆಗೆ  120 ಕಿಲೋಮೀಟರ್ ಕ್ರಮಿಸಿದ್ದು, 100 ರಿಂದ 120 ಕಿ.ಮೀ ಈಜೂವ ಸಾಹಸವನ್ನು ಮಾಡಿದ್ದಾಳೆ ಹೀಗೆ ಹತ್ತು ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಡು ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ ಇದರ ಜೊತೆಗೆ ಪಾಟೀಲ್ ಅವಳು ಪ್ರವಾಸವನ್ನು ಕೈಗೊಂಡಿದ್ದಾಳೆ ಡಿಸೆಂಬರ್ 14 ರಂದು ಕಾಶ್ಮೀರದ ಕಥ್ರಾದಿಂದ ಸೈಕಲ್ ಯಾತ್ರ ಪ್ರಾರಂಭ ಮಾಡಿ ಇಂದು ಪಟ್ಟಣಕ್ಕೆ ಪ್ರವೇಶ ಮಾಡಿದ್ದಾರೆ ಈ ವಿಷಯ ತಿಳಿದು ನಾನು ನನ್ನ ಸಂಗಡಿಗರು ಆ ಬಾಲಕಿಗೆ ಸ್ವಾಗತ ಕೋರುತ್ತಿದ್ದೇವೆ ಇಂದಿನಿಂದ ಅಂದಾಜು 1000 ಕಿಲೋಮೀಟರ್ ಕನ್ಯಾಕುಮಾರಿವರೆಗೆ ಪ್ರವಾಸವನ್ನು ಕೈಗೊಂಡಿದ್ದಾಳೆ ಅವಳ ಪ್ರವಾಸ ಯಶಸ್ವಿಯಾಗಲಿ ಎಂದು ಹಾರಿಸುವುದರ ಜೊತೆಗೆ ಯಾತ್ರೆ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ ತಾಳ್ಮೆ ಮತ್ತು ಜಾಣ್ಮೆಯಿಂದ ಆಶಿಸ್ ಪಾಟೀಲ್ ಮಾತನಾಡಿದ್ದಾಳೆ ಹಲವಾರು ಉದ್ದೇಶಗಳನ್ನಿಟ್ಟುಕೊಂಡು ಅವರು ಕೈಗೊಂಡಿರುವ ಕಾರ್ಯಗಳು ಶ್ಲಾಘನೀಯವಾಗಿದೆ ಅವಳ ಕಾರ್ಯಕ್ಕೆ ವಿಶ್ವದಾಖಲೆ ಸಿಗಲಿ ಎಂದು ಆಶಿಸುತ್ತೇನೆ ಅವರ ತಂದೆ ಇವಳ ಎಲ್ಲ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಅವರ ಸಾಧನೆ ಮೆಚ್ಚುವಂಥದ್ದು ಅವಳಿಗೆ ಸ್ಫೂರ್ತಿಯನ್ನು ತುಂಬಿದ್ದಾರೆ ಕುಮಾರಿ ಆಶಿಸ್‌ಳಂತೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮನೋಭಾವನೆಗಳು ಬರಬೇಕಾಗಿದೆ ಅವಳು ಆರ್ಮಿ ಸೇರುವ ಆಸೆಯನ್ನಿಟ್ಟುಕೊಂಡಿದ್ದಾಳೆ ದೇವರು ಅವರಿಗೆ ಯಶಸ್ಸನ್ನು ಕೊಡಲಿ ಎಂದರು 

ಈ ಸಂಧರ್ಭದಲ್ಲಿ ಸ್ನೇಹಲತಾ ಕುನ್ನೂರ, ಶಿವಪೂರ್ತೆಪ್ಪ ಜಕ್ಕಣ್ಣವರ, ಈರಣ್ಣ ಬಡ್ಡಿ, ಶಶಾಂಕ ಮೆಳ್ಳಾಗಟ್ಟಿ ಇದ್ದರು. 


ಸುದ್ದಿ ಓದಿ