ಬಳ್ಳಾರಿ

ಒಂದು ದಿನದ ವಿಶೇಷ ಕಾರ್ಯಾಗಾರ

ಒಂದು ದಿನದ ವಿಶೇಷ ಕಾರ್ಯಾಗಾರ

ಬಳ್ಳಾರಿ 24: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ, ವಲ್ಡ್ ವಿಷಣ್ ಮತ್ತು ಅಗ್ನಿಶಾಮಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಫೆ. 23ರಂದು ಅಗ್ನಿ ದುರಂತಗಳ ಬಗ್ಗೆ ಅರಿವು ಮತ್ತು ಅಗ್ನಿ ಅನಾಹುತಗಳು ತಡೆಯುವ ದಿನಾಚಾರಣೆ ನಿಮಿತ್ತ ಒಂದು ದಿನದ ವಿಶೇಷ ಕಾರ್ಯಗಾರವನ್ನು ರೆಡ್ ಕ್ರಾಸ್ ಕಛೇರಿಯ ಸಭಾಂಗಣದಲ್ಲಿ ನಡೆಸಲಾಯಿತು. 

ದಿ. 23ರಂದು ಬೆಂಗಳೂರು ನಗರದ ಕಾಲ್ಟನ್ ಟೋವರ್‍ನಲ್ಲಿ ನಡೆದ ಅಗ್ನಿದುಂರತದಲ್ಲಿ ಅನೇಕ ಜನರ ಪ್ರಾಣವನ್ನು ಕಳೆದುಕೊಂಡವರ ನನಪಿನಲ್ಲಿ ಈ ದಿನಚಾರಣೆಯನ್ನು ಆಚರಿಸಲಾಗುತ್ತಿದೆ.

ಕಾರ್ಯಗಾರದಲ್ಲಿ ಬಳ್ಳಾರಿ ತಾಲೂಕಿನ ಸುಮಾರು 27 ಹಳ್ಳಿಗಳಿಂದ ಗ್ರಾಮ ಪಂಚಾಯತಿ ಸದಸ್ಯರುಗಳು ತರಬೇತಿಯನ್ನು ಪಡೆಯಲು ಹಾಜರಿದ್ದರು. ಇವರಿಗೆ ಪ್ರಥಮ ಚಿಕಿತ್ಸೆ, ಅಗ್ನಿ ದುರಂತಗಳ ಬಗ್ಗೆ ವಿಷೇಶವಾಗಿ ಅರಿವು ಮೂಡಿಸಿ ಮತ್ತು ಈ 27ಗ್ರಾಮಗಳಿಂದ ಬಂದಿದ್ದ ಜವರು ತರಬೇತಿಯನ್ನು ಪಡೆದು ಅವರ ರಾಮದಲ್ಲಿ ಅವರು ಫಸ್ಟ್ ರೆಂಪಾಂಡ್‍ಆಗಿ ಕಾರ್ಯ ನಿರ್ವಹಿಸುವ ಉದ್ದೇಶದಿಂದ ಈ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಗಾರಕ್ಕೆ ಮುಖ್ಯ ಅತಿಥಿಗಳಾಗಿ ಶಿಎಂ.ಎ.ಷಕೀಬ್, ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಮುಖ್ಯ ತರಬೇತುದಾರರು ಇವರು ವಿಷೇಶ ಉಪನ್ಯಾಸವನ್ನು ನಡೆಸಿದ್ದರು. ಇದೇ ಸಂದರ್ಭದಲ್ಲಿ ಶ್ರೀ.ಬೇಪಾರ್ ಮಹಮ್ಮದ್ ಇಜಾಜ್, ಸರ್ವ್ ತರಬೇತುದಾರರು ಇವರು ಪ್ರಥಮ ಚಿಕಿತ್ಸೆ ಕುರಿತು ಉಪನ್ಯಾಸವನ್ನು ನಡೆಸಲಾಯಿತು. ಈ ಕಾರ್ಯಗಾರದಲ್ಲಿ ಬಸವರಾಜ್, ಅಗ್ನಿಶಾಮಕ ಅಧಿಕಾರಿಗಳು, ವಲ್ಡ್ ವಿಷಣ್‍ದ ಪ್ರೇಮಲತ, ಪ್ರೋಜೆಕ್ಟ್ ಆಫೀಸರ್ ಮತ್ತು ಸುಮಾರು 60 ಜನ ವಿವಿಧ ಗ್ರಾಮಗಳ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ