ಬಾಲ್ಯವಿವಾಹ ತಡೆಯಲು ಜನರಲ್ಲಿ ಜಾಗೃತಿ: ನಾಗರಾಳ
ಹುನಗುಂದ 05: ಕಂದಾಯ ಶಿಕ್ಷಣ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಸಹಯೋಗದಲ್ಲಿ ಬಾಲ್ಯ ವಿವಾಹವನ್ನು ತಡೆಗಟ್ಟಲು ಸಮಿತಿ ರಚಿಸಲಾಗಿದ್ದು ನಗರ ಮತ್ತು ಗ್ರಾಮಿಣ ಪ್ರದೇಶಗಳಲ್ಲಿ ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಹಸೀಲ್ದಾರ ಬಸವರಾಜ ನಾಗರಾಳ ಹೇಳಿದರು.
ನಗರದ ತಾಲ್ಲೂಕು ಆಡಳಿತ ಕಚೇರಿಯ ವಿಡಿಯೋ ಕಾನ್ಪೇರನ್ಸ ಹಾಲ್ನಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ತ್ರೈಮಾಸಿಕ ಪ್ರಗತಿ ಪರೀಶಿಲನಾ ಸಭೆಯ ಅಧಕ್ಷತೆವಹಿಸಿ ಅವರು ಮಾತನಾಡುತ್ತ ಕಾರ್ಯನಿರ್ವಹಿಸುವ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದರು. ತಾಲ್ಲೂಕಿನಾದ್ಯಂತ ಇಲ್ಲಿಯವರೆಗೆ ಭ್ಯಾಗ್ಯಲಕ್ಷ್ಮೀ ಬಾಂಡ್ಗೆ 10013 ಜನರು ಅರ್ಜಿ ಸಲ್ಲಿಸಿದ್ದಾರೆ. ಅವುಗಳಲ್ಲಿ 8653 ಬಾಂಡ್ಗಳನ್ನು ವಿತರಿಸಲಾಗಿದ್ದು ಇನ್ನುಳಿದ ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ ಎಂದರು. ಸಿಪಿಐ ಅಯ್ಯನಗೌಡ ಪಾಟೀಲ ಮಾತನಾಡಿ ಕೌಟುಂಬಿಕ ದೌರ್ಜನ್ಯ, ಬಾಲ್ಯವಿವಾಹ, ಅಪರಾಧ ಚಟುವಟಿಕಾ ಕೃತ್ಯಗಳು ಕಂಡುಬಂದಲ್ಲಿ ಸಾರ್ವಜನಿಕರು ಪೆÇೀಲಿಸ್ ಇಲಾಖೆಯ ಹೊಯ್ಸಳ ವಾಹನ 112 ನಂ.ಗೆ ಫೋನ್ಮಾಡಿ ತಿಳಿಸಿಬಹುದು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಧವನಂದ ಮಾತನಾಡಿದರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು ಉಪಸ್ಥಿತರಿದ್ದರು.