ಬಳ್ಳಾರಿ

ವಿಮ್ಸ್ ನಿಂದ ಕೋವಿಡ್-19 ಲಸಿಕೆ ಕುರಿತು ಜಾಗೃತಿ ಜಾಥಾ

ವಿಮ್ಸ್  ನಿಂದ ಕೋವಿಡ್-19 ಲಸಿಕೆ ಕುರಿತು ಜಾಗೃತಿ ಜಾಥಾ

ಬಳ್ಳಾರಿ 20: ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ವಿಮ್ಸ್ ), ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಂತ ವೈದ್ಯಕೀಯ ಕಾಲೇಜು ಹಾಗು ಶುಶ್ರೂಷಕರ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಜಾಥಾ ಹಮ್ಮಿಕೊಳ್ಳಲಾಗಿತ್ತು. 

ವಿಜಯನಗರ ವೈದ್ಯಕೀಯ ಕಾಲೇಜಿನಿಂದ ಆರಂಭವಾದ ಸುಮಾರು 100 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ಈ ಜಾಥಾಕ್ಕೆ ವಿಮ್ಸ್  ನಿರ್ದೇಶಕ ಡಾ.ಟಿ.ಗಂಗಧಾರಗೌಡ ಅವರು ಚಾಲನೆ ನೀಡಿ ಮಾತಾನಾಡಿದರು. ವಿಮ್ಸ್  ಆಡಳಿತ ಕಛೇರಿಯ ಮುಂಭಾಗದಿಂದ ಪ್ರಾರಂಭವಾದ ಜಾಥಾ, ಸುಧಾವೃತ್ತ, ಇಂದಿರಾನಗರ, ಗುರುಕಾಲೋನಿ, ವಿದ್ಯಾನಗರದ ಮೂಲಕ ಮತ್ತೆ ವಿಮ್ಸ್  ನಿರ್ದೇಶಕರ ಕಛೇರಿಯ ಮುಂದೆ ಮುಕ್ತಾಯವಾಯಿತು.

ಸಮುದಾಯ ವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಬೆಲ್ಲಾರ ರಾಘವೇಂದ್ರ, ಡಾ.ಸುರೇಶ್.ಸಿ.ಎಂ, ದಂತ ವೈದ್ಯಕೀಯ ಕಾಲೇಜಿನ ಸಮುದಾಯ ದಂತ ವೈದ್ಯಶಾಸ್ತ್ರದ ಸಹಪ್ರಾಧ್ಯಾಪಕಿ ಡಾ.ಪೂರ್ಣಿಮಾ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿಗಳಾದ ಈಶ್ವರ್ ದಾಸಪ್ಪನವರ್, ಶುಶ್ರೂಷ ಮಹಾವಿದ್ಯಾಲಯದ ಬೋಧಕರಾದ ಗುರುಪ್ರಸಾದ್, ಫರ್ಜಾನ ಮತ್ತಿತರರು ಉಪಸ್ಥಿತರಿದ್ದರು.

ಕೋವಿಡ್-19 ಲಸಿಕೆಯನ್ನು ವಿಮ್ಸ್  ಆವರಣದಲ್ಲಿರುವ ಬಿ.ಸಿ.ರಾಯ್ ಸಭಾಂಗಣದಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಹಾಗು 45 ರಿಂದ 59ವರ್ಷದೊಳಗಿನ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರೆಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದ್ದು, ಈ ಲಸಿಕೆ ಕಾರ್ಯಕ್ರಮದ ಸದುಪಯೋಗ ಪಡೆಯಲು ಬಳ್ಳಾರಿ ನಾಗರಿಕರಲ್ಲಿ ಈ ಮೂಲಕ ಕೋರಲಾಗಿದೆ ಎಂದು ವಿಮ್ಸ್  ನಿರ್ದೇಶಕ ಡಾ.ಗಂಗಾಧರಗೌಡ ಅವರು ತಿಳಿಸಿದ್ದಾರೆ.

ಸುದ್ದಿ ಓದಿ