ಸರ್ಕಾರಿ ಯೋಜನೆಗಳ ಅರಿವು ಕಾರ್ಯಾಗಾರ
ಮುಂಡಗೋಡ:ಪಟ್ಟಣದ ಕರಗಿನಕೊಪ್ಪದಲ್ಲಿ ಸೋಮವಾರ ಸರ್ಕಾರಿ ಯೋಜನೆಗಳ ಕುರಿತು ಅರಿವು ಕಾರ್ಯಾಗಾರ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಶ್ಯಾಮಲಾ ನಾಯ್ಕ ಸಂಜೀವಿನಿ ಒಕ್ಕೂಟದಲ್ಲಿ ಇರುವ ಸುತ್ತು ನಿಧಿ, ಎಸ್ಸಿ ಸಹಾಯಧನದ ಯೋಜನೆಗಳು, ಫಾರ್ಮರ್ಸ್ ಗ್ರುಪ್ ರಚನೆ, ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಘಟಕ, ಪ್ರಧಾನಮಂತ್ರಿ ಭೀಮಾ ಸುರಕ್ಷಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಯೋಜನೆ ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಬಿಡಿಆರ್ಸೆಟಿ ಯೋಜನಾ ಅಧಿಕಾರಿ ಮಹಾಬಲೇಶ್ವರ ನಾಯ್ಕ ಸಂಸ್ಥೆಯಲ್ಲಿ ನಡೆಯುವ ತರಬೇತಿಗಳು ಮತ್ತು ಪಡೆಯುವ ವಿಧಾನಗಳ ಬಗ್ಗೆ ತಿಳಿಸಿದರು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದೊರಕುವ ಸ್ಕಾಲರ್ಶಿಪ್ ಬಗ್ಗೆ, ಜಿಲ್ಲಾ ಪಂಚಾಯತ, ಕೈಗಾರಿಕಾ ವಿಭಾಗದಿಂದ ಹೊಲಿಗೆ, ಕುಂಬಾರಿಕೆ, ಬಡಿಗತನ, ಇತ್ಯಾದಿ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕೊಂಡು ಕೊಕರೆ ಉಪಸ್ಥಿತರಿದ್ದರು. ಶಾಂತಕುಮಾರ ಕೀರ್ತೆಪ್ಪನವರ ಕಾರ್ಯಕ್ರಮ ನಿರೂಪಣೆ ಮಾಡಿದರು.