ಮುಂದಗೋಡ

ಮುಂಡಗೋಡ ತಾಲೂಕಿನ 23 ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಸಿರಿ ಪ್ರಶಸ್ತಿ ಪ್ರದಾನ

ಮುಂಡಗೋಡ ತಾಲೂಕಿನ 23 ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಸಿರಿ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ 

ಮುಂಡಗೋಡ:ಕರ್ನಾಟಕ ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿ(ರಿ.) ಬೆಂಗಳೂರು ವತಿಯಿಂದ ನೀಡುವ ರಾಜ್ಯ ಮಟ್ಟದ ಶಿಕ್ಷಣ ಸಿರಿ ಪ್ರಶಸ್ತಿಗೆ ತಾಲೂಕಿನ 23 ಪ್ರೌಢಶಾಲಾ ಶಿಕ್ಷಕರು ಆಯ್ಕೆಯಾಗಿದ್ದು ಶಿರಸಿಯ ಶಾಸಕರ ಸರಕಾರಿ ಮಾದರಿ ಶಾಲೆಯಲ್ಲಿ ರವಿವಾರ ಜರುಗಿದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಪಟ್ಟಣದ ರೋಟರಿ ಪ್ರೌಢಶಾಲೆಯ ಸಿದ್ಧಾರೂಡ ಅಂಗಡಿ, ಗೀರೀಶಕುಮಾರ ಕುಲಕರ್ಣಿ, ಲೊಯೋಲ ಪ್ರೌಢಶಾಲೆಯ ರಶ್ಮಿ ಎನ್‌.ಆರ್, ಸರಕಾರಿ ಪದವಿ ಪೂರ್ವ ಕಾಲೇಜ್‌ನ ತನುಜಾಬಾಯಿ ನಾಯ್ಕ, ಮಳಗಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪೂರ್ಣಿಮಾ ಗೌಡ, ಕಾತೂರ ಸರಕಾರಿ ಪ್ರೌಢಶಾಲೆಯ ಅಶೋಕ ಸಂಕಿಕೊಪ್ಪ, ಮೈನಳ್ಳಿ ಸರಕಾರಿ ಪ್ರೌಢಶಾಲೆಯ ಗೋಪಾಲ ಕನಸಿ, ಹುನಗುಂದ ಸರಕಾರಿ ಪ್ರೌಢಶಾಲೆಯ ಸಿದ್ಧಾರೂಡ ಶಾಬಾನಿ, ಚಿಗಳ್ಳಿ ಸರಕಾರಿ ಪ್ರೌಢಶಾಲೆಯ ದಾಸಪ್ಪ ಎ., ಇಂದೂರ ಪ್ರೌಢಶಾಲೆಯ ಶಿವಯೋಗಿ ಸವದತ್ತಿ, ಹುನಗುಂದ ಸರಕಾರಿ ಪ್ರೌಢಶಾಲೆಯ ಡಾ.ರಮೇಶ ಅಂಬಿಗೇರ, ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ಮಂಜುಳಾ ಪೂಜಾರ, ಅಂದಲಗಿ ಸರಕಾರಿ ಪ್ರೌಢಶಾಲೆಯ ವಿನಾಯಕ ನಾಯ್ಕ, ಸರಕಾರಿ ಪದವಿ ಪೂರ್ವ ಕಾಲೇಜ್‌ನ ಮಾಲತೇಶ ತಿಪ್ಪಣ್ಣನವರ, ಸರಕಾರಿ ಪದವಿ ಪೂರ್ವ ಕಾಲೇಜ್‌ನ ನವೀನಕುಮಾರ ಕೆ.ಎಮ್‌., ಮುರಾರ್ಜಿ ಪ್ರೌಢಶಾಲೆಯ ಚಂದ್ರ​‍್ಪ ಬಿ.ಕೆ., ನ್ಯಾಸರ್ಗಿ ಸರಕಾರಿ ಐಟಿಐ ಕಾಲೇಜ್‌ನ ರವಿ ಕಮಡೊಳ್ಳಿ, ಪಾಳಾ ಸರಕಾರಿ ಉರ್ದು ಪ್ರೌಢಶಾಲೆಯ ಬೀಬಿ ಅಮೀನಾ ಮುಜಾವರ, ಪಾಳಾ ಮಹಾತ್ಮಾಜಿ ಪ್ರೌಢಶಾಲೆಯ ಸಂತೋಷ ಪಿ.ಎಚ್‌., ಆದಿಜಾಂಭವ ಪ್ರೌಢಶಾಲೆಯ ರಮೇಶ ಚವ್ಹಾಣ, ಹುನಗುಂದ ಪ್ರೌಢಶಾಲೆಯ ಫಾತಿಮಾ ದೊಡ್ಡಮನಿ, ಲೋಟಸ್ ಪ್ರೌಢಶಾಲೆಯ ಮಂಜು ನಾಯ್ಕ ಮತ್ತು ಮಳಗಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಅರವಿಂದ ನಾಯ್ಕ ಇವರಿಗೆ ಶಿಕ್ಷಣ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 


ಸುದ್ದಿ ಓದಿ