ಬಳ್ಳಾರಿ

ಪಿಹೆಚ್‌ಡಿ ಪದವಿ ಪ್ರದಾನ

ಪಿಹೆಚ್‌ಡಿ ಪದವಿ ಪ್ರದಾನ

ಬಳ್ಳಾರಿ 30: ಕಂಪ್ಲಿ ತಾಲ್ಲೂಕಿನ ಮಹಮ್ಮದ್ ಗೌಸ್ ಇವರ ಪುತ್ರ ರಿಯಾಜುದ್ದೀನ್ .ಕೆ. ಇವರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಡಾಕ್ಟರೇಟ್ (ಪಿಹೆಚ್‌ಡಿ) ಪದವಿ ನೀಡಿದೆ. ರಿಯಾಜುದ್ದೀನ್‌.ಕೆ ಅವರು ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪದ್ಮನಾಭರೆಡ್ಡಿ ಇವರ ಮಾರ್ಗದರ್ಶನದಲ್ಲಿ ಎ ಸ್ಟಡಿ ಆನ್ ವೇವ್‌ಲೆಟ್ಸ್‌ ಅಂಡ್ ಇಟ್ಸ್‌ ಅಪ್ಲಿಕೇಷನ್ಸ್‌ ಇನ್ ಇಮೇಜ್ ಅಂಡ್ ಸಿಗ್ನಲ್ ಪ್ರೊಸೆಸಿಂಗ್ ಎಂಬ ವಿಷಯದ ಕುರಿತು ವಿಶ್ವವಿದ್ಯಾಲಯಕ್ಕೆ ಮಹಾ ಪ್ರಬಂಧವನ್ನು ಮಂಡಿಸಿದ್ದಕ್ಕಾಗಿ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ರಿಯಾಜುದ್ದೀನ್ ರವರು ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಕೂಡಾ ಮಂಡಿಸಿರುತ್ತಾರೆ. 


ಸುದ್ದಿ ಓದಿ