ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಿ: ಶಿವಾನಂದ ಮ್ಯಾಗೇರಿ
ಶಿಗ್ಗಾವಿ 18: ಜೀವನದಲ್ಲಿ ಸಾಧನೆ ಮಾಡಲು ಸದೃಢ ಆರೋಗ್ಯ ಬಹಳ ಮುಖ್ಯ, ದೇಹವು ರೋಗಗಳ ನೆಲೆಯಾಗದಂತೆಎಚ್ಚರ ವಹಿಸಬೇಕು ಹಾಗೂ ದುಶ್ಚಟಗಳಿಂದ ದೂರವಿರಬೇಕು. ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಭಾಜಪ ಆದ್ಯಕ್ಷ ಶಿವಾನಂದ ಮ್ಯಾಗೇರಿ ಅಭಿಪ್ರಾಯಪಟ್ಟರು.
ತಾಲೂಕಿನ ಹುನಗುಂದಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತಕ್ಷಮತಾ ಸೇವಾ ಸಂಸ್ಥೆ ಹಾಗೂ ಗಂಗಮ್ಮಎಸ್. ಬೊಮ್ಮಾಯಿಟ್ರಸ್ಟ್, ಮೃತ್ಯುಂಜಯಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿಗ್ಗಾಂವ, ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿಇವರ ಸಂಯುಕ್ತ ಆಶ್ರಯದಲ್ಲಿ ತಜ್ಞ ವೈದ್ಯರುಗಳಿಂದ ಏರಿ್ಡಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ದುಬಾರಿ ವೈದ್ಯಕೀಯ ವೆಚ್ಚದಲ್ಲಿ ಸಾಮಾನ್ಯಜನರಿಗೆ ಅನುಕೂಲವಾಗಲು ಆರೋಗ್ಯಉಚಿತತಪಾಸಣಾ ಶಿಬಿರಗಳು ಎಲ್ಲೆಡೆಯೂ ನಡೆಯಬೇಕುಗ್ರಾಮೀಣ ಭಾಗದಜನರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಒಟ್ಟು 400 ಕ್ಕೂ ಹೆಚ್ಚು ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.ಈ ಸಂದರ್ಭದಲ್ಲಿಮುಖ್ಯ ಅಥಿತಿಗಳಾಗಿ ಅಂದಲಗಿಗ್ರಾಮ ಪಂಚಾಯತಅಧ್ಯಕ್ಷೆ ಲಕ್ಷ್ಮವ್ವ ತಳವಾರ, ಜೆ.ಸಿ.ಐ. ಆದ್ಯಕ್ಷೆರಂಜನಾ ಪ್ರಕಾಶಓಂದಕರ, ಮೃತ್ಯುಂಜಯ ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷಡಾ. ಎಂ.ಎಂ.ತಿರ್ಲಾಪೂರ, ಮುಖಂಡರುಗಳಾದ ನಾಗರಾಜ ಮೂಲಿಮನಿ, ಗಂಗಾಧರ ಆವಳಿ, ಖಾಸಿಮಸಾಬ ಮುಲ್ಲಾನವರ, ಪ್ರೇಮಾ ಬಡಿಗೇರ, ಶಿವಾನಂದ ಬಾಡದ, ರವಿ ಕೊಟ್ಟಿಗೇರಿ, ಗಣೇಶಜನ್ನಾಪೂರ, ಪರಶುರಾಂ ನೆಲ್ಲೂರ, ವೈ.ಗಂಗಾಧರ, ಗದಿಗೆಪ್ಪ ಹೆಳವರ, ಫಕ್ಕೀರೇಶ ಹರಪನಹಳ್ಳಿ, ಅನಿಸಾ ಖಾ. ತೋಟದ, ಸಣ್ಣರಾಮಪ್ಪಕುರುಬರ, ಬಸವರಾಜಕೊಟ್ಟಿಗೇರಿ, ಖಾದರಗೌಸ ಅ. ಸಾಣಿ, ಮೋಹನ ಬಳಗಲಿ,ರವಿ ತುಕ್ಕೋಟಿ, ಸಂತೋಷ ವಡ್ಡಮ್ಮನವರ, ಅಬ್ದುಲಸಾಬ ಹಂಚಿನಮನಿ ಹಾಗೂ ಗ್ರಾಮದ ಇನ್ನಿತರೆ ಮುಖಂಡರುಗಳು ಉಪಸ್ಥಿತರಿದ್ದರು. ಗದಿಗೆಪ್ಪ ಹೆಳವರ ಸ್ವಾಗತಿಸಿದರು, ನಾಗರಾಜ ಮೂಲಿಮನಿ ಕಾರ್ಯಕ್ರಮ ನಿರೂಪಿಸಿದರು.