26ರಂದು ಅನ್ನದಾನೀಶ್ವರ ಮಹಾತ್ಮೆ ಚಿತ್ರಕರಣದ ಆಡಿಷನ್
ಮುಂಡರಗಿ 24: ಮುಂಡರಗಿ ತಾಲೂಕಿನ ನಡೆದಾಡುವ ದೇವರು ಎಂದೇ ಹೆಸರುವಾಸಿಯಾಗಿರುವ ಶ್ರೀ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳವರ ಚರಿತ್ರೆಯನ್ನು ಒಳಗೊಂಡಿರುವ “ಅನ್ನದಾನೀಶ್ವರ ಮಹಾತ್ಮೆ” ಎನ್ನುವಂತ ಭಕ್ತಿಪ್ರಧಾನವಾದ ಸಿನಿಮಾ ಚಿತ್ರೀಕರಣ ಜೂನ್-20ರೊಳಗೆ ಪ್ರಾರಂಭವಾಗುವ ನಿಮಿತ್ಯ ಮೇ.26 ರಂದು ರವಿವಾರ ದಿವಸ ಆಡಿಷನ್ ನಡೆಯಲಿದೆ ಎಂದು ಚಿತ್ರಕಥೆ ಹಾಗೂ ಸಂಭಾಷಣೆಕಾರ ಸಂಜಯ ಬೇವಿನಾಳ ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಅನೇಕ ಜನರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆ ನೀಡಿದ ಶ್ರೀ ಅನ್ನದಾನೀಶ್ವರ ಮಠದ ಸೇವೆಯ ಪ್ರತೀಕವಾಗಿ ಈ ಮಠದಲ್ಲಿ ಆದ ಎಲ್ಲಾ ಪವಾಡ, 10 ಪೀಠಾಧಿಪತಿಗಳು ಹಾಗೂ ಅವರ ಚರೀತ್ರೆಯನ್ನು ಒಳಗೊಂಡಿರುವ “ಅನ್ನದಾನೀಶ್ವರ ಮಹಾತ್ಮೆ” ಎನ್ನುವಂತ ಸಿನಿಮಾ ಚಿತ್ರೀಕರಣದ ಮೂಲಕ ನಾವು ಈ ನಾಡಿಗೆ ಶ್ರೀ ಅನ್ನದಾನೀಶ್ವರ ಮಠದ ಚರೀತ್ರೆಯನ್ನು ಗುರುತಿಸುವ ಉದ್ದೇಶವನ್ನು ಈ ಕಥೆಯನ್ನು ನಿರ್ಮಿಸಲಾಗಿದೆ. ಈ ನಿಟ್ಟಿನಲ್ಲಿ ಅನ್ನದಾನೀಶ್ವರ ಮಾಹಾತ್ಮೆ ಚಿತ್ರೀಕರಣಕ್ಕೆ ಕಲಾವಿಧರ ಅವಶ್ಯಕತೆ ಇರುವುದರಿಂದ ಇದೇ ಮೇ.20 ರಂದು ರವಿವಾದ ದಿವಸ ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ಕಲಾವಿದರಿಗೆ ಆಡಿಷನ್ ನಡೆಸಲಾಗುವುದು.
ಈ ಸಂದರ್ಭದಲ್ಲಿ ತಾವರಗೇರಿ ಮಠದ ಶರಣರಾದ ಶ್ರೀ ಮಹೇಶ್ವರ ಶರಣರು ಮಾತನಾಡಿ, ಈ ಭಾಗದಲ್ಲಿ ಸಾಹಿತ್ಯ, ಸಂಸ್ಕೃತಿ ಕುರಿತು ಹಲವಾರು ಕಾದಂಬರಿ ಹಾಗೂ ಪುಸ್ತಕಗಳನ್ನು ಹೊರ ತಂದಿರುವ ಶ್ರೀ ಮಠದ ಚರಿತ್ರೆಯನ್ನ ಒಳಗೊಂಡು ಚಿತ್ರಿಕರಣ ಮಾಡುತ್ತಿರುವ ಈ ಚಿತ್ರತಂಡವು ಒಳ್ಳೆಯ ಕಥೆಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಇದನ್ನು ಬಹಳ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಚಿತ್ರಿಕರಣ ಮಾಡಲು ಸಲಹೆ ನೀಡಿದರು.
ಈ ವೇಳೆ ನಿರ್ದೇಶಕಿ ಗೀತಶ್ರೀಯವರು ಮಾತನಾಡಿ, ಈ ನಾಡಿನಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿರುವ ಈ ಮಠದ ಚರೀತ್ರೆ ಅಪಾರವಾಗಿದೆ. ಅಷ್ಟೇ ವಿಶೇಷವಾಗಿದೆ. ಸುಮಾರು ವರ್ಷಗಳ ಚರೀತ್ರೆಯನ್ನು ನಾವು ಈ ಕಥೆಯಲ್ಲಿ ಕಂಡಿದ್ದೇವೆ. ನಾವು ಈ ಸಿನೆಮಾ ನಿರ್ಮಾಣ ಮಾಡುವಲ್ಲಿ ತುಂಬಾ ಸಂತೋಷದಿಂದ ಮಾಡುತ್ತಿದ್ದೇವೆ. ಒಳ್ಳೆಯ ಭಕ್ತಿಪ್ರಧಾನವಾದ ಕಥೆ ಇದಾಗಿದೆ. ಹೀಗಾಗಿ ರವಿವಾರ ನಡೆಯುವ ಆಡಿಷನ್ನಲ್ಲಿ ಹೆಚ್ಚಿನ ಪ್ರಾಶಸ್ತ್ಯವನ್ನು ಸ್ಥಳಿಯ ಕಲಾವಿದರಿಗೆ ಕೊಡಬೇಕೆನ್ನುವ ವಿಚಾರದಲ್ಲಿದ್ದೇವೆ. ಹೀಗಾಗಿ ಆಸಕ್ತ ಕಲಾವಿದರು ಮೇ.20 ರವಿವಾರ ರಂದು ನಡೆಯುವ ಆಡಿಷನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅನ್ನದಾನೀಶ್ವರ ಮಹಾತ್ಮೆ ಚಿತ್ರ ತಂಡಕ್ಕೆ ಸಹಕರಿಸಬೇಕೆಂದು ಎಂದು ಹೇಳಿದರು.
ಈ ವೇಳೆ ಕ್ಯಾಮರಾಮನ್ ಶರಣು ಸುಗ್ನಳ್ಳಿ, ಪ್ರಕಾಶ ಹೂಗಾರ, ರವಿಗೌಡ ಪಾಟೀಲ್. ಶರಣಪ್ಪ ಹೊಂಬಳಗಟ್ಟಿ ಹಾಲೇಶ ಹೀರೇಮಠ ಇದ್ದರು.