ಶೀಘ್ರ ಹೈಟೆಕ್ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ
ಎರಡನೆ ಬಾರಿಗೆ ಅಧ್ಯಕ್ಷರಾದ ನಾಗೇಶ ಕಿವಡ ಹೇಳಿಕೆ: ನೂತನ ಪದಾಧಿಕಾರಿಗಳ ಪದಗ್ರಹಣ
ಚಿಕ್ಕೋಡಿ 31: ಬರುವ ಎರಡು ವರ್ಷದಲ್ಲಿ 32 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಲಿದೆ ಎಂದು ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಕಲ್ಮೇಶ ಕಿವಡ ಹೇಳಿದರು.
ಇಲ್ಲಿನ ನ್ಯಾಯವಾದಿಗಳ ಸಂಘದ ಸಭಾ ಭವನದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಡಾ, ಅಂಬೇಡ್ಕರ ವಾದ ಮಂಡಿಸಿ ಹೋಗಿರುವ ಚಿಕ್ಕೊಡಿ ನ್ಯಾಯಾಲಯದಲ್ಲಿ ಗುಣಮಟ್ಟದ ಕಟ್ಟಡ ನಿರ್ಮಾಣವಾಗುವುದು ಅಗತ್ಯವಾಗಿದೆ. ಈಗಾಗಲೇ ರಾಜ್ಯ ಸರಕಾರ 32 ಕೋಟಿ ರೂ ಅನುದಾನ ಮಂಜೂರು ಮಾಡಿದೆ ಎಂದರು.
ಗುಣಮಟ್ಟದ ನ್ಯಾಯಾಲಯ ಕಟ್ಟಡ ನಿರ್ಮಾಣವಾದರೇ ಇಡೀ ರಾಜ್ಯದಲ್ಲಿ ಮಾದರಿಯಾಗಲಿದೆ. ಕಟ್ಟಡಕ್ಕೆ ಅನುದಾನ ಮಂಜೂರು ಸಿಗಲು ಅನೇಕ ಹೈಕೋರ್ಟ ನ್ಯಾಯಮೂರ್ತಿಗಳು ಮತ್ತು ಸಚಿವರಾದ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಪ್ರಯತ್ನ ದೊಡ್ಡದಿದೆ. ನ್ಯಾಯವಾದಿಗಳಿಗೆ ಭರವಸೆ ಕೊಟ್ಟಂತೆ ಶೀಘ್ರವಾಗಿ ನ್ಯಾಯಾಲಯ ಕಟ್ಟಡ ಪೂರ್ಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು.
ನ್ಯಾಯವಾದಿಗಳಿಗೆ ಅನುಕೂಲವಾಗಲು ಈ ಗ್ರಂಥಾಲಯಕ್ಕೆ 1.80 ಕೋಟಿ ರೂ ಅನುದಾನ ಈಗಾಗಲೇ ಅನುದಾನ ಬಂದಿದೆ. ಸೂಕ್ತ ಸ್ಥಳಾವಕಾಶ ಇಲ್ಲದೇ ಇರುವ ಕಾರಣದಿಂದ ಇ-ಗ್ರಂಥಾಲಯ ನಿರ್ಮಾಣವಾಗಿಲ್ಲ ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾಗೇಶ ಕಿವಡ ಮಾತನಾಡಿ, ನ್ಯಾಯವಾದಿಗಳ ಸಂಘಕ್ಕೆ ಯಾವುದೇ ಚ್ಯುತಿ ಬರದ ಹಾಗೇ ಕೆಲಸ ಮಾಡಲಾಗುತ್ತದೆ. ಸಂಘದ ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.
ಹಿರಿಯ ನ್ಯಾಯವಾದಿಗಳಾದ ಧನ್ಯಕುಮಾರ ಗುಂಡೆ, ಸತೀಶ ಕುಲಕರ್ಣಿ ಮಾತನಾಡಿದರು.
ಅಧ್ಯಕ್ಷತೆಯನ್ನು ಎಸ್.ವೈ.ಪಾಟೀಲ ವಹಿಸಿದ್ದರು.
ಸರ್ಕಾರಿ ಅಭಿಯೋಜಕ ಆರ್.ಐ.ಖೋತ, ನ್ಯಾಯವಾದಿ ಎಚ್.ಎಸ್.ನಸಲಾಪೂರೆ, ಬಸವರಾಜ ಅಮಾತೆ, ಮಾಣಿಕಮ್ಮ ಕಬಾಡಗೆ, ಸುದರ್ಶನ ತಮ್ಮನ್ನವರ, ಎಸ್.ಆರ್.ಹರಕೆ ಮುಂತಾದವರು ಇದ್ದರು.
ನೂತನ ಪದಾಧಿಕಾರಿಗಳು:
ಅಧ್ಯಕ್ಷರಾಗಿ ನಾಗೇಶ ಕಿವಡ, ಪ್ರಧಾನ ಕಾರ್ಯದರ್ಶಿ ಎಲ್.ವ್ಹಿ.ಬೋರನ್ನವರ, ಖಜಾಂಚಿ ಎಂ.ಎಸ್.ಲಕ್ಷ್ಮೀಕಟ್ಟಿ, ಸಂಘದ ಹಿರಿಯ ಪ್ರತಿನಿಧಿಗಳಾಗಿ ವ್ಹಿ.ಜೆ.ಗಾಂಧೀ, ಬಿ.ಪಿ.ದೇಶಿಂಗೆ, ಎಸ್.ಎ.ಜಾಡವಾಲೆ, ಕುಮಾರ ಖೋತ, ಬಿ.ಆರ್.ಮಠಪತಿ ಆಯ್ಕೆಯಾದರು. ಯುವ ನ್ಯಾಯವಾದಿ ಪ್ರತಿನಿಧಿಯಾಗಿ ಎಸ್.ಆರ್.ಪಾಟೀಲ, ಪಿ.ಪಿ.ಜನಾಜ, ವಿವೇಕ ಪಾಟೀಲ, ಎಸ್.ಎಂ.ಬಾಮನೆ ಆಯ್ಕೆಯಾದರು. ಮಹಿಳಾ ಪ್ರತಿನಿಧಿಯಾಗಿ ಶೋಭಾ ತಳವಾರ ಆಯ್ಕೆಯಾದರು.