ಕನ್ನಡಿಗರ ಮೇಲೆ ಹಲ್ಲೆ: ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮನವಿ
ಹುನಗುಂದ 19: ಬೆಳಗಾವಿಯ ರಾಜಹಂಸಗಡಕೋಟಿಯಲ್ಲಿ ಕನ್ನಡಿಗರು ಕನ್ನಡ ಮಾತನಾಡಿದ್ದಕ್ಕೆ ಮಹಾರಾಷ್ಟ್ರದ ಎಮ್.ಇ.ಎಸ್ ಕಾರ್ಯಕರ್ತರು ಕನ್ನಡಿಗರ ಮೇಲೆ ಹಲ್ಲೆ ಮಾಡಿರುವುದ್ದನ್ನು ಖಂಡಿಸಿ ಹಲ್ಲೆ ಮಾಡಿರುವ ಎಮ್.ಇ.ಎಸ್ ಕಾರ್ಯಕರ್ತರ ಮೇಲೆ ತಕ್ಷಣವೇ ಕ್ರಮ ಕೈಕೊಳ್ಳುಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಘಟಕದಿಂದ ಶನಿವಾರ ತಹಶೀಲ್ದಾರ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿದರು.
ಕರವೇ ನಗರ ಘಟಕದ ಅಧ್ಯಕ್ಷ ಶರಣಪ್ಪ ಗಾಣಗೇರ ಮಾತನಾಡಿ ಗಡಿಭಾಗ ಬೆಳಗಾವಿಯಲ್ಲಿ ಮಹಾರಾಷ್ಟ್ರದ ಎಮ್.ಇ.ಎಸ್ ಕಾರ್ಯಕರ್ತರ ಪುಂಡಾಟಿಕ್ಕೆ ಮತ್ತೇ ಮುಂದುವರೆದಿದ್ದು ಶುಕ್ರವಾರ ಬೆಳಗಾವಿಯ ರಾಜಹಂಸಗಡಕೋಟಿಯಲ್ಲಿ ಕನ್ನಡಗರು ಕನ್ನಡ ಮಾತನಾಡಿದರು ಎನ್ನುವ ಕಾರಣಕ್ಕೆ ಅವರ ಮೇಲೆ ಹಲ್ಲೆ ಮಾಡಿ ಎಮ್.ಇ.ಎಸ್ ಕಾರ್ಯಕರ್ತರು ಪುಂಡಾಟಿಕೆ ತೋರಿದ್ದು.ಇದು ಕನ್ನಡ ನಾಡಿನಲ್ಲಿಯೇ ಮರಾಠಿಗರ ದೌರ್ಜನ್ಯ ದಬ್ಬಾಳಿಕೆ ಹೆಚ್ಚಾಗುತ್ತಿದ್ದು.ಇದ್ದಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸಬೇಕು.ಸರ್ಕಾರ ಈ ಘಟನೆಯನ್ನು ಗಂಭಿರವಾಗಿ ಪರಗಣಿಸಿ ಹಲ್ಲೆಯಲ್ಲಿ ಭಾಗಿಯಾಗಿರುವ ಎಮ್.ಇ.ಎಸ್ ಪುಢಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ತಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಶರಣು ಕುರಿ ಮಾತನಾಡಿ ಬೆಳಗಾವಿಯಲ್ಲಿ ಕನ್ನಡ ನೆಲ,ಜಲ,ಭಾಷೆಗೆ ನಿರಂತರ ಧಕ್ಕೆಯಾಗುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿಗಳು ಯಾವದೇ ಕ್ರಮ ತಗೆದುಕೊಳ್ಳುತ್ತಿಲ್ಲ. ಕೂಡಲೇ ರಾಜಹಂಸಗಡ ಕೋಟಿಯಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆಯಲ್ಲಿ ತೊಡಿಗಿದ ಎಮ್.ಇ.ಎಸ್ ಪುಂಡರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಕರವೇ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಲೀಂ ಹತ್ತರಕಿಹಾಳ, ಹುಸೇನಸಾಬ ಸಂದಿಮನಿ, ಮೌಲಪ್ಪ ಮಾದರ, ಸಂಗಣ್ಣ ನೇಗಲಿ, ಮಹ್ಮದ ನದಾಫ್, ಅಪ್ಪು ಕೌಜಗನೂರ, ಚಂದ್ರಶೇಖರ ಆನೇಹೊಸೂರ, ಮಂಜು ಗುಳದಕಾಯಿ, ಸಂಗಮೇಶ ಹಿರೇಮನಿ, ನಜೀರ ಪಠಾಣ, ದಾದಾ ಖಾಜಿ, ಅಂಬರೀಶ ವಾಲಿಕಾರ, ಬಾಬು ವಾಲೀಕಾರ, ರಾಜೇಸಾಬ ತಾಳಿಕೋಟಿ ಸೇರಿದಂತೆ ಅನೇಕರು ಇದ್ದರು.