ಮನರಂಜನೆ

ಪೊಸಾನಿ ನಿವಾಸದ ಮೇಲೆ ದಾಳಿ

ಪೊಸಾನಿ ನಿವಾಸದ ಮೇಲೆ ದಾಳಿ

ಹೈದ್ರಾಬಾದ್, ಸೆ ೩೦   ಟಾಲಿವುಡ್ ನಟ  ಪೊಸಾನಿ ಕೃಷ್ಣ ಮುರಳಿ  ನಿವಾಸದ ಮೇಲೆ  ಕಲ್ಲಿನ ದಾಳಿ ನಡೆದಿದೆ. ಗುರುತು ಸಿಗದ ವ್ಯಕ್ತಿಗಳು ಅಮೀರ ಪೇಟೆಯ ಸಮೀಪ ಎಲ್ಲಾರೆಡ್ಡಿ ಗೂಡದಲ್ಲಿರುವ ಪೊಸಾನಿ  ಮನೆಯ ಮೇಲೆ ಕಲ್ಲಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಬುಧವಾರ ಮಧ್ಯರಾತ್ರಿ  ಸುಮಾರು ಐದು ಮಂದಿ  ಗುರುತು ಸಿಗದ ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಲ್ಲಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ದಾಳಿಯಲ್ಲಿ ಪೊಸಾನಿ ಮನೆಯ ಬಾಗಿಲು ಹಾಗೂ ಗಾಜುಗಳಿಗೆ ಹಾನಿಯಾಗಿದೆ. ಇದರಿಂದ ಪೊಸಾನಿ ಮನೆಯ ಕಾವಲು ಗಾರ ಕುಟುಂಬ  ಭಯಭೀತಗೊಂಡಿದೆ. ಆದರೆ  ಆ  ಸಮಯದಲ್ಲಿ ಪೊಸಾನಿ ಹಾಗೂ  ಕುಟುಂಬ ಸದಸ್ಯರು ಮನೆಯಲ್ಲಿರದ ಕಾರಣ  ಅಪಾಯ ತಪ್ಪಿದೆ. ಪವನ್ ಕಲ್ಯಾಣ್ ಅಭಿಮಾನಿಗಳೇ ಈ ಕೃತ್ಯ ಎಸಗಿದ್ದಾರೆ ಎಂದು  ಸುತ್ತಮುತ್ತಲ ನಿವಾಸಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಪೊಸಾನಿ ಮನೆ ವಾಚ್ ಮನ್  ಎಸ್ ಆರ್ ನಗರ ಪೊಲೀಸರಿಗೆ ದೂರ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು  ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಸ್ಯಾವಳಿ ಪರಿಶೀಲಿಸುತ್ತಿದ್ದಾರೆ.

ಸುದ್ದಿ ಓದಿ