ಅಟಲ್ ಬಿಹಾರಿ ವಾಜಪೇಯಿ ಜಯಂತೋತ್ಸವ
ಬಳ್ಳಾರಿ 25: ಬಿಜೆಪಿಯ ಅಸಂಖ್ಯಾತ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತಶತ್ರು, ಭಾರತರತ್ನ, ಮಾಜಿ ಪ್ರಧಾನಿಗಳಾದ ಶ್ರದ್ಧೆಯ ಅಟಲ್ ಬಿಹಾರಿ ವಾಜಪೇಯಿ ಜೀ ರವರ 97ನೇ ಜಯಂತೋತ್ಸವ ಅಂಗವಾಗಿ ಓಬಿಸಿ ಮೋರ್ಚ ಬಳ್ಳಾರಿ ನಗರ ಘಟಕ ವತಿಯಿಂದ ಬಳ್ಳಾರಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅಣ್ಣನವರ ಹಾಗೂ ವಿಧಾನಪರಿಷತ್ ಸದಸ್ಯ ವೈ.ಎಂಸತೀಶ್ ರವರ ಸಮ್ಮುಖದಲ್ಲಿ ಮುಕ್ಕೋಟಿ ದೇವ ಸ್ವರೂಪರಾದ ನೂರಾರು ಗೋಮಾತೆಗಳಿಗೆ ಮೇವು ಮತ್ತು ಸೇವೆಯನ್ನು ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯರು ಮೋತ್ಕರ್ ಶ್ರೀನಿವಾಸ್, ವೀರಶೇಖರರೆಡ್ಡಿ, ವೆಂಕಟೇಶ್, ಪಾಲಣ್ಣ ಹಾಗೂ ಬಿಜೆಪಿ ಓಬಿಸಿ ಮೋರ್ಚ ವತಿಯಿಂದ ಹುಂಡೇಕರ್ ರಾಜೇಶ್, ಅನಿಲ್, ಮಂಜು ಹಾಗೂ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.