ಬಳ್ಳಾರಿ

ಆಮ್ ಆದ್ಮಿ ಪಕ್ಷದ ಗ್ರಾಮೀಣ ಭಾಗದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಅಸುಂಡಿ ಶೇಕ್ಷಾವಲಿ ಅವರನ್ನು

ಆಮ್ ಆದ್ಮಿ ಪಕ್ಷದ ಗ್ರಾಮೀಣ ಭಾಗದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಅಸುಂಡಿ ಶೇಕ್ಷಾವಲಿ ಅವರನ್ನು

ಬಳ್ಳಾರಿ 02: ಆಮ್ ಆದ್ಮಿ ಪಕ್ಷದ ಗ್ರಾಮೀಣ ಭಾಗದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಅಸುಂಡಿ ಶೇಕ್ಷಾವಲಿ ಅವರನ್ನು ಜಿಲ್ಲಾಧ್ಯಕ್ಷರ ಮಲ್ಲಪ್ಪನವರ ಸಮಕ್ಷಮದಲ್ಲಿ ನೇಮಕ ಮಾಡಿ ಆದೇಶಪತ್ರವನ್ನು ನೀಡಲಾಯಿತು.  

ಗುರುವಾರದಂದು ನಗರದ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ಪಕ್ಷದ ರಾಜ್ಯ ಅಧ್ಯಕ್ಷರಾದ ಪ್ರಥ್ವಿರೆಡ್ಡಿ ಮತ್ತು ರಾಜ್ಯ ಯುವ ಘಟಕದ ಮುಕುಂದಗೌಡ ಇವರ ಆದೇಶದ ಮೇರೆಗೆ ಜಿಲ್ಲಾಪದಾಧಿಕಾರಿಗಳ ಸಮ್ಮುಖದಲ್ಲಿ ಆದೇಶಪತ್ರವನ್ನು ಕೊಟ್ಟು ಪಕ್ಷಕ್ಕೆ ಸೇರೆ​‍್ಡಗೊಂಡರು.  


ಈ ಸಂದರ್ಭದಲ್ಲಿ ಶೇಕ್ಷಾವಲಿ ಇವರು ಮಾತನಾಡಿ ನನಗೆ ಕೊಟ್ಟ ಜವಬ್ಧಾರಿಯನ್ನು ಅತ್ಯಂತ ಪ್ರಮಾಣಿಕವಾಗಿ ನಿರ್ವಹಿಸಿ ಪಕ್ಷದ ಏಳಿಗೆಗಾಗಿ ದುಡಿಯುವನೆಂದು ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸೈಯದ್‌ಪಟೆಲ್, ಗ್ರಾಮಿಣಾಧ್ಯಕ್ಷರಾದ ಕಿರಣ್‌ಕುಮಾರ್, ಖಲಂದರ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಮುಖಂಡರು ಇದ್ದರು. 


ಸುದ್ದಿ ಓದಿ