ರಾಷ್ಟ್ರೀಯ

ಸಾರ್ವಜನಿಕ ಬೋರ್ ವೆಲ್ ಬಳಸಿದ ದಲಿತ ವ್ಯಕ್ತಿಗೆ ಹಲ್ಲೆ

ಸಾರ್ವಜನಿಕ ಬೋರ್ ವೆಲ್ ಬಳಸಿದ ದಲಿತ ವ್ಯಕ್ತಿಗೆ ಹಲ್ಲೆ

ಲಕ್ನೋ, ಡಿಸೆಂಬರ್.25: ಸರ್ಕಾರಿ ಬೋರ್ ವೆಲ್ ಬಳಸಿದ್ದಕ್ಕೆ ಆಕ್ಷೇಪಿಸಿದ ಜನರ ಗುಂಪೊಂದು 45 ವರ್ಷ ಪ್ರಾಯದ ದಲಿತ ವ್ಯಕ್ತಿಯೊಬ್ಬರನ್ನು ತೀವ್ರವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯ ಹಳ್ಳಿಯಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಬಿಸಂದಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇಂದು ಬೆಳಗ್ಗೆ ತಾವು ತೆಂದೂರ ಗ್ರಾಮದಲ್ಲಿ ಬೋರ್ ವೆಲ್ ನಿಂದ ನೀರು ತೆಗೆದುಕೊಳ್ಳಲು ಹೋದಾಗ ರಾಮ್ ದಯಾಳ್ ಯಾದವ್ ಅವರ ಕುಟುಂಬ ಸದಸ್ಯರು ತಮ್ಮ ಮೇಲೆ  ಕೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ರಾಮಚಂದ್ರ ರೈದಾಸ್ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ನರೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ದಾಳಿಯಲ್ಲಿ ರಾಮಚಂದ್ರ ಗಾಯಗೊಂಡಿದ್ದು, ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಎರಡು ತಿಂಗಳ ಹಿಂದೆ ಕೂಡ ಈ ಪ್ರದೇಶದಲ್ಲಿ ಸ್ಥಾಪಿಸಲಾದ ಹ್ಯಾಂಡ್‌ ಪಂಪ್‌ನಿಂದ ನೀರನ್ನು ತೆಗೆದುಕೊಳ್ಳದಂತೆ ಯಾದವ್ ಎಚ್ಚರಿಕೆ ನೀಡಿದ್ದರು ಎಂದು ರಾಮಚಂದ್ರ ಆರೋಪಿಸಿದ್ದಾರೆ ಎಂದು ಎಸ್‌ ಎಚ್‌ ಒ ತಿಳಿಸಿದಾರೆ. ಆದರೆ ಅಟಾರಾದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮಧ್ಯಪ್ರವೇಶದಿಂದ  ಈ ವಿಷಯವನ್ನು ಬಗೆಹರಿಸಲಾಗಿತ್ತು.

ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿ ಓದಿ