ಬಳ್ಳಾರಿ

ಆಶಾ ಕಾರ್ಯಕತರ್ೆಯರ ಮಾಸಿಕ ವೇತನ ಹೆಚ್ಚಿಗೆೆ ಮಾಡುವಂತೆ ಆಗ್ರಹಿಸಿ ಮನವಿ

ಆಶಾ ಕಾರ್ಯಕತರ್ೆಯರ ಮಾಸಿಕ ವೇತನ ಹೆಚ್ಚಿಗೆೆ ಮಾಡುವಂತೆ ಆಗ್ರಹಿಸಿ ಮನವಿ

ಲೋಕದರ್ಶನವರದಿ

ಕಂಪ್ಲಿ21: ಕೊರೊನಾ ವಾರಿಯಸರ್್ ಆಶಾ ಕಾರ್ಯಕತರ್ೆಯರ ಮಾಸಿಕ ವೇತನವನ್ನು ಕೂಡಲೇ ರಾಜ್ಯ ಸಕರ್ಾರ 12ಸಾವಿರ ರೂಪಾಯಿಗಳಿಗೆ  ಹೆಚ್ಚಿಗೆ  ಮಾಡಬೇಕು ಆಗ್ರಹಿಸಿ ಎಂದು ಕನರ್ಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ್ರು ಬಣ)ಕಂಪ್ಲಿ ಹೋಬಳಿ ಯುವ ಘಟಕ ಅಧ್ಯಕ್ಷ ಬಳೆ ಮಲ್ಲಿಕಾಜರ್ುನ ತಹಸೀಲ್ದಾರ್ ಎಂ.ರೇಣುಕಾ ಅವರಿಗೆ ಮಂಗಳವಾರ ಕರವೇಯಿಂದ ಮನವಿ ಸಲ್ಲಿಸಿ, ಕೊರೊನಾ ಸಂದರ್ಭದಲ್ಲಿ ಆಶಾ ಕಾರ್ಯಕತರ್ೆಯರು ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. 

        ಈ ಹೋರಾಟದ ಸೇವೆಯಲ್ಲಿ ಅನೇಕ ಆಶಾರಿಗೆ ಕರೊನಾ ಸೋಂಕು ತಗುಲಿದೆ. ಚಪ್ಪಾಳೆ, ದೀಪ ಬೆಳಗಿಸುವುದು, ಗಂಟೆ ಬಾರಿಸುವ ಗೌರವಕ್ಕೆ ಸೀಮಿತಗೊಳಿಸದೆ, ಅವರು ಉತ್ತಮ ಜೀವನ ನಡೆಸಲು, ಸಮರ್ಥವಾಗಿ ಸೇವೆ ಸಲ್ಲಿಸಲು ಮುಖ್ಯಮಂತ್ರಿಗಳು ಕೂಡಲೇ ಆಶಾ ಕಾರ್ಯಕತರ್ೆಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. 

        ಆಶಾ ಸುಗಮಗಾರ್ತಿ ಎಚ್.ಚಂದ್ರಲೇಖಾ ಮಾತನಾಡಿ, ಆಶಾರಿಗೆ ಮಾಸಿಕ 12ಸಾವಿರ ವೇತನ ನೀಡಬೇಕು ಹಾಗೂ ಕರೊನಾ ಸೇವೆಯಲ್ಲಿ ಸುರಕ್ಷ ಸಾಮಾಗ್ರಿ ವಿತರಿಸಬೇಕು ಎಂದು ಒತ್ತಾಯಿಸಿದರು. 

   ಮನವಿ ಸಲ್ಲಿಸುವಲ್ಲಿ ಕರವೇ ತಾಲೂಕು ಅಧ್ಯಕ್ಷ ಮೆಟ್ರಿ ಜಿ.ದೊಡ್ಡ ಯರ್ರಿಸ್ವಾಮಿ, ತಾಲೂಕು ಯುವ ಘಟಕ ಅಧ್ಯಕ್ಷ ಬಿ.ವಿ.ಗೌಡ, ವಿದ್ಯಾಥರ್ಿ ತಾಲೂಕು ಅಧ್ಯಕ್ಷ ಎಂ.ಎಸ್.ಮುನ್ನಾ, ಪದಾಧಿಕಾರಿಗಳಾದ ಕೊಮಾರಿ, ವೀರೇಶ್, ಬಸವರಾಜ, ಆಶಾ ಕಾರ್ಯಕತರ್ೆಯರಾದ ಸುಜಾತಾ, ಕೆ.ಜಯಮ್ಮ, ಶಾರದಾ, ಗಂಗಮ್ಮ, ಗೀತಾ, ಆಯಿಷಾ, ಎಚ್.ರೇಣುಕಾ, ಸುರಯ್ಯ, ವಿಜಯಕಲಾ ಸೇರಿ ಇತರರಿದ್ದರು. 


ಸುದ್ದಿ ಓದಿ