ಮುಂದಗೋಡ

ಭರವಸೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರಿಂದ ಮನವಿ

ಭರವಸೆಗಳನ್ನು ಈಡೇರಿಸುವಂತೆ ಆಶಾ ಕಾರ್ಯಕರ್ತೆಯರಿಂದ ಮನವಿ


ಲೋಕದರ್ಶನ ವರದಿ 

ಮುಂಡಗೋಡ:ಪ್ರಮುಖ ಬೇಡಿಕೆಗಳ ಕುರಿತು ಇಲಾಖೆಯ ಪೂರ್ವದಲ್ಲಿ ಆಶಾ ಕಾರ್ಯಕರ್ತೆಯರ ಸಂಘಕ್ಕೆ ನೀಡಿರುವ ಭರವಸೆಗಳನ್ನು ಈಡೇರಿಸುವಂತೆ ಇಲ್ಲಿನ ಆಶಾ ಕಾರ್ಯಕರ್ತೆಯರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು. 

2021ರ ನ.16ರಂದು ಮತ್ತು 2022ರ ಸೆ.2ರಂದು ಸರಕಾರಕ್ಕೆ ಆಶಾ ಕಾರ್ಯಕರ್ತೆಯರ ಸಂಘವು ನೀಡಿದ ಮನವಿಯಂತೆ ಈ ಸಾಲಿನ ರಾಜ್ಯ ಬಜೆಟ್‌ನಲ್ಲಿ ನಿಶ್ಚಿತ ಗೌರವಧನದಲ್ಲಿ ಹೆಚ್ಚಳ ಮಾಡಿರುವುದನ್ನು ಹೊರತುಪಡಿಸಿದರೆ ಪ್ರಮುಖ ಎಲ್ಲಾ ಬೇಡಿಕೆಗಳನ್ನು ಕಡೆಗಣಿಸಿರುವುದಕ್ಕೆ ಸಂಘವು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತದೆ. ಬಜೆಟ್ ಪೂರ್ವದಲ್ಲಿ ಸಲ್ಲಿಸಿರುವ ಬೇಡಿಕೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಆಶಾ ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಸಭೆ ಕರೆಯಬೇಕು ಹಾಗೂ ಸೂಕ್ತ ಪರಿಹಾರದ ಕ್ರಮಗಳನ್ನು ಪ್ರಕಟಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.  

ಗ್ರೇಡ್‌-2 ತಹಶೀಲ್ದಾರ ಜಿ.ಬಿ.ಭಟ್ ಮನವಿ ಸ್ವೀಕರಿಸಿದರು. ಇದಕ್ಕೂ ಮುನ್ನ ಆಶಾ ಕಾರ್ಯಕರ್ತೆಯರು ಆಯಾ ಗ್ರಾ.ಪಂ.ಪಿಡಿಒ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಈರಮ್ಮಾ ವಿರಕ್ತಮಠ, ಕಸ್ತೂರಿ ಸಂಗಮೇಶ್ವರ, ಗೀತಾ ಶೇಟ್, ಮೇಘಾ ದೇವಿಕೊಪ್ಪ, ಫಾತಿಮಾ ಹಲಗಿರಿ ಹಾಗೂ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ