ಆಶಾ ಕಾರ್ಯಕರ್ತೆಯರ ಪ್ರತಿಭಟನೆ: ವೈದ್ಯಾಧಿಕಾರಿಗೆ ಮನವಿ
ಲೋಕದರ್ಶನವರದಿ
ಕುರುಗೋಡು16 :ಮಾಸಿಕ ಗೌರವಧನ 12000.ರೂ ಖಾತರಿ ಪಡಿಸಬೇಕು ಮತ್ತು ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕೆಂದು ಸಕರ್ಾರಕ್ಕೆ ಒತ್ತಾಯಿಸಿ ನಡೆಸುತ್ತಿರುವ ಆಶಾ ಕಾರ್ಯಕತರ್ೆಯರ ಸಂಘದ ಅನಿದರ್ಿಷ್ಟಾವಧಿ ಮುಷ್ಕರಗುರುವಾರ 7ನೇ ದಿನ ಪಟ್ಟಣದ ಆರೋಗ್ಯ ಸಮುದಾಯ ಕೇಂದ್ರದ ಆವರಣದಲ್ಲಿ ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಸಮಿತಿ ಅಧ್ಯಕ್ಷೆ ಎಂ.ರಾಜೇಶ್ವರಿ ಮಾತನಾಡಿ, ರಾಜ್ಯಾದ್ಯಂತ ಆಶಾ ಕಾರ್ಯಕತರ್ೆಯರು ಅನಿದರ್ಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ, ಆದರೂ ಸಕರ್ಾರವು ಮಾತ್ರ ನಿರ್ಲಕ್ಷ್ಯ ವಹಿಸುತ್ತಿರುವುದು ವಿಷಾದನೀಯವಾಗಿದೆ.
ಆರೋಗ್ಯ ಇಲಾಖೆಯ ನಾನಾ ಕಾರ್ಯಕ್ರಮಗಳಲ್ಲಿ ಸೇವೆಯನ್ನು ಸಲ್ಲಿಸಿದ್ದೇವೆ. ಸೇವೆಗೆ ತಕ್ಕಂತೆ ಗೌರವಧನ ನೀಡಬೇಕೆಂದು 10 ಸಾರಿ ಮನವಿ ಪತ್ರ ನೀಡಿದ್ದೇವೆ ಮತ್ತು ಈಗ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದರು ಸ್ಪಂದನೆ ನೀಡುತ್ತಿಲ್ಲ, ನ್ಯಾಯ ನೀಡುವವರೆಗೂ ಮುಷ್ಕರ ಮುಂದುವರೆಯುತ್ತದೆ ಎಂದು ಆಗ್ರಹಿಸಿದರು.
ಆರೋಗ್ಯ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಮಂಜುನಾಥ ಜವಳಿ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಕಳುಹಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯಕತರ್ೆಯರು ಎಂ.ಅಂಬಿಕಾ, ಪಿ.ನೀಲಾವತಿ, ಕೆ.ಹಂಪಮ್ಮ, ಡಿ.ನೀಲಮ್ಮ, ಎಂ.ನಾಗರತ್ನ, ಎನ್.ಕೆ.ನಾಗರತ್ನ, ಹೆಚ್.ಎಮ್.ಉಮಾದೇವಿ, ಎಂ.ಗೀತಾ, ಎನ್.ನಾಗವೇಣಿ, ಎಂ.ಮಹಾಲಕ್ಷ್ಮಿ, ಕೆ.ಎಂ.ರಾಜೇಶ್ವರಿ, ಶಿವಮ್ಮ, ದೇವಮ್ಮ, ಎಂ.ವೀಣಾ, ಬಿ.ಲಕ್ಷ್ಮಿ, ಎಸ್.ಸರೋಜದೇವಿ, ಸುಧಾ, ವಿಎಮ್.ರಾಜೇಶ್ವರಿ, ಮುಮ್ತಾಜ್, ತ್ರಿಪುರ, ನೀಲಾವತಿ, ಮೀನಾಕ್ಷಿ, ಸುಮಾಲತ ಹಾಗೂ ಇನ್ನಿತರಕಾರ್ಯಕತರ್ೆಯರು ಇದ್ದರು.