ಸರ್ಕಾರದ ವಿರುದ್ಧ ಮತ್ತೆ ಹೋರಾಟಕ್ಕೆ ಆಶಾ ಕಾರ್ಯಕರ್ತೆಯರ ನಿರ್ಧಾರ
ಬಳ್ಳಾರಿ ಸಪ್ಟೆಂಬರ್ 19: ಕೊರೋನ ವಾರಿಯರ್ಸ್ ಎಂದೇ ಹೆಸರಾದ ರಾಜ್ಯದ 42,000 ಆಶಾ ಕಾರ್ಯಕತರ್ೆಯರು ಎರಡು ತಿಂಗಳ ಹಿಂದೆ 20 ದಿನಗಳ ನಿರಂತರ ಹೋರಾಟ ಮಾಡಿದ ಸಂದರ್ಭದಲ್ಲಿ 'ವೇತನ ಹೆಚ್ಚಳ ಮಾಡಲಾಗುವುದು ಎಂಬ ಭರವಸೆ ಈಡೇರಿಸದ ನಿಮಿತ್ತ ಕನರ್ಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕತರ್ೆಯರ ಸಂಘವು ಮತ್ತೇ ರಾಜ್ಯದಾದ್ಯಂತ ಹೋರಾಟಕ್ಕಿಳಿಯಲು ನಿರ್ಧರಿಸಿದೆ.
ಈ ಕುರಿತು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ರಾಜ್ಯ ಸಂಯುಕ್ತ ಆಶಾ ಕಾರ್ಯಕತರ್ೆಯರ ಸಂಘದ ಪದಾಧಿಕಾರಿಗಳು ರಾಜ್ಯದಾದ್ಯಂತ ಎಲ್ಲಾ ಶಾಸಕರು, ಸಂಸದರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಆಶಾ ಪರ ಧ್ವನಿಯೆತ್ತುವಂತೆ ಆಗ್ರಹಿಸಲಾಗುವುದು, ದಿ.21 ರಿಂದ 10 ದಿನಗಳ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವಿವಿಧ ರೀತಿಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದೆ.
ಸಧ್ಯದ ಕೋವಿಡ್ ಹೆಮ್ಮಾರಿಯ ಪಿಡುಗಿನ ಕಾಲದಲ್ಲಂತೂ ಅವರ ಅವಿರತ ಶ್ರಮದ ಸೇವೆಯನ್ನು ಪ್ರಶಂಸೆ ಮಾಡದವರೆ ಇಲ್ಲ. ಆದರೆ ಇಂತಹ ಅಸಾಮಾನ್ಯ ಸೇವೆಗಾಗಿ ಅವರಿಗೆ ದೊರಕುವ ಸಂಭಾವನೆಯಂತೂ ಅತಿ ನಿಕೃಷ್ಟ. ಆದ್ದರಿಂದ ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಸಂಬಳ ರೂ. 12000 ಕೂಡಲೇ ಘೋಷಿಸಿ. ಬಾಕಿ ಇರುವ ಪ್ರೋತ್ಸಾಹಧನ ಆಶಾಗೆ ಒದಗಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಘೋಷಿಸಿದ 3000 ಕೋವಿಡ್ ಪ್ರೋತ್ಸಾಹ ಧನವನ್ನು ಇನ್ನೂ ತಲುಪದಿರುವ ಆಶಾಗಳಿಗೆ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದೆ.
ಆಗಸ್ಟ್ 29 ರಂದು ರಾಜ್ಯಾದ್ಯಂತ ಮುತ್ತಿಗೆ ಕಾರ್ಯಕ್ರಮ ಜರುಗಿದಾಗ ಮುಖ್ಯಮಂತ್ರಿಗಳು ಸಹ ಆಶಾ ಮುಖಂಡರಿಗೆ ಸಕರ್ಾರ ಆಶಾ ಜೊತೆಗಿದೆ, ಶೀಘ್ರ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿ, ಸಚಿವರಿಗೆ ಹಾಗೂ ಅಧಿಕಾರಿಗಳಿಗೂ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಆಗ ಬೆಂಗಳೂರಿನಲ್ಲಿ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಸಚಿವ ಶ್ರೀರಾಮುಲುರವರು 2-3 ದಿನಗಳಲ್ಲೇ ಬೇಡಿಕೆಗಳನ್ನು ಈಡೇರಿಸುವುದಾಗಿ ವಚನವಿತ್ತ ನಂತರ ಆಶಾ ಕಾರ್ಯಕತರ್ೆಯರು ತಮ್ಮ 20 ದಿನಗಳ ಐತಿಹಾಸಿಕ ಹೋರಾಟವನ್ನು ತತ್ ಕ್ಷಣಕ್ಕೆ ಸ್ಥಗಿತಗೊಳಿಸಿದರು. ಆದರೆ ಮುಷ್ಕರ ಸ್ಥಗಿತಗೊಳಿಸಿ ಒಂದೂವರೆತಿಂಗಳು ಕಳೆದರೂ ಸರ್ಕಾರದ ಕಡೆಯಿಂದ ಯಾವ ಅಧಿಕೃತ ಘೋಷಣೆಯೂ ಬಂದಿಲ್ಲ. ಆದ್ದರಿಂದಲೇ ಇದೀಗ ಅನಿವಾರ್ಯವಾಗಿ ಆಶಾ ಕಾರ್ಯಕತರ್ೆಯರು ಮತ್ತೊಮ್ಮೆ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಿದೆ. ಎಂದು ತಿಳಿಸಿದೆ.
ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕತರ್ೆಯರ ಸಂಘದ ರಾಜ್ಯ ಉಪಾಧ್ಯಕ್ಷ ಎ ದೇವದಾಸ್, ಜಿಲ್ಲಾ ಗೌರವಾಧ್ಯಕ್ಷ ಎ.ಶಾಂತಾ, ನಗರ ಅಧ್ಯಕ್ಷ ರಾಮಕ್ಕ, ನಗರ ಕಾರ್ಯದಶರ್ಿ ರೇಷ್ಮಾ ಉಪಸ್ಥಿತರಿದ್ದರು.