ರಜನಿಕಾಂತ್ ಆರೋಗ್ಯ ಸ್ಥಿತಿ ಉತ್ತಮವಾಗಿದೆ; ಆಸ್ಪತ್ರೆ
ಹೈದರಾಬಾದ್, ಡಿಸೆಂಬರ್ 26: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ತಮಿಳು ನಟ ಮೆಗಾಸ್ಟಾರ್ ರಜಿನಿಕಾಂತ್
ಅವರು ಚೇತರಿಕೆ ಕಾಣುತ್ತಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ಶನಿವಾರ ಆಸ್ಪತ್ರೆ ಹೊರಡಿಸಿರುವ ಪ್ರಕಟಣೆಯಲ್ಲಿ, ರಜನಿಕಾಂತ್ ಅವರ ರಕ್ತದೊತ್ತಡ ಈಗಲೂ ಹೆಚ್ಚಿದೆ. ಆದರೆ, ನಿನ್ನೆಗೆ ಹೋಲಿಸಿದರೆ ನಿಯಂತ್ರಣದಲ್ಲಿದೆ ಎಂದು ತಿಳಿಸಿದೆ.
ಅವರ ದೇಹಸ್ಥಿತಿಯಲ್ಲಿ ಯಾವುದೇ ಅಪಾಯಕಾರಿ ಬೆಳವಣಿಗೆಯಿಲ್ಲ. ಸಂಜೆಯ ವೇಳೆ ಇನ್ನಷ್ಟು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ. ಅವರ ಸ್ಥಿತಿಯನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.