ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ಬುರೆ ವಿರುಪಾಕ್ಷಿ ಆಯ್ಕೆ
ಲೋಕದರ್ಶನ ವರದಿ
ಕಂಪ್ಲಿ 31: ತಾಲೂಕಿನ ನಂ.10ಮುದ್ದಾಪುರ ಗ್ರಾಮದ ಬುರೆ ವಿರುಪಾಕ್ಷಿ ಯಾಧವ ಇವರು ನವ ಕರ್ನಾಟಕ ಯುವಶಕ್ತಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ಮತ್ತು ದೇವಸಮುದ್ರ ಗ್ರಾಮದ ಡಿ.ಎನ್.ಗೌರೀಶ್ ಇವರು ತಾಲೂಕು ಅಧ್ಯಕ್ಷರಾಗಿ ಮಂಗಳವಾರ ನೇಮಕಗೊಂಡಿದ್ದಾರೆ. ನವ ಕರ್ನಾಟಕ ಯುವ ಶಕ್ತಿಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ, ಜಿಲ್ಲಾಧ್ಯಕ್ಷ ಕೆ.ರಮೇಶ್, ಬಳ್ಳಾರಿ ನಗರ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ನಂ.10ಮುದ್ದಾಪುರ ಗ್ರಾಮ ಘಟಕ ಅಧ್ಯಕ್ಷ ಉಪ್ಪಾರ ಹೊನ್ನೂರಸ್ವಾಮಿ ಸೇರಿ ಅನೇಕರಿದ್ದರು.