ಮನರಂಜನೆ

ಆರ್ಯನ್​ ಖಾನ್​ಗೆ ಇಂದೂ ಸಿಗದ ಜಾಮೀನು: ವಿಚಾರಣೆ ನಾಳೆಗೆ ಮುಂದೂಡಿಕೆ

ಆರ್ಯನ್​ ಖಾನ್​ಗೆ ಇಂದೂ ಸಿಗದ ಜಾಮೀನು: ವಿಚಾರಣೆ ನಾಳೆಗೆ ಮುಂದೂಡಿಕೆ

ಮುಂಬೈ:ಅ, 27: ಆರ್ಯನ್​ ಖಾನ್​ ಜಾಮೀನು ಅರ್ಜಿ ವಿಚಾರಣೆ ಇಂದು ಬಾಂಬೆ ಹೈಕೋರ್ಟ್​ನಲ್ಲಿ ನಡೆದಿದ್ದು, ದೀರ್ಘ ವಿಚಾರಣೆ ಬಳಿಕ ನಾಳೆಗೆ ಮುಂದೂಡಲಾಗಿದೆ.

ಹೀಗಾಗಿ ಆರ್ಯನ್​ ಖಾನ್​ ಮತ್ತೊಂದು ದಿನ ಜೈಲಿನಲ್ಲೇ ಇರಬೇಕಾಗಿದೆ. ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಆರ್ಯನ್ ಖಾನ್ ಚಿಕ್ಕ ವಯಸ್ಸಿನ ಹುಡುಗನಾಗಿದ್ದಾನೆ. ಹಾಗಾಗಿ ಅವನನ್ನು ಜೈಲಿಗೆ ಕಳುಹಿಸುವ ಬದಲು ಪುನರ್ವಸತಿ ನಿಲಯಕ್ಕೆ ಕಳುಹಿಸಬೇಕು ಎಂದು ವಾದ ಮಾಡಿದರು.

ಅಲ್ಲದೇ ಆರ್ಯನ್ ಖಾನ್‌ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಬಂಧನಕ್ಕೂ ಮುನ್ನ ಸೂಕ್ತ ಕಾರಣ ತಿಳಿಸಬೇಕಿತ್ತು. ಬಂಧನಕ್ಕೆ ಸೂಕ್ತ ಕಾರಣ ನೀಡದೆ ಎನ್‌ಸಿಬಿ ದಾರಿ ತಪ್ಪಿಸಿದೆ ಎಂದು ಮುಕುಲ್‌ ರೋಹ್ಟಗಿ ವಾದ ಮಾಡಿದರು.

ಮುಂಬೈನ ಕ್ರೂಸ್​ ಹಡಗಿನಲ್ಲಿ ಡ್ರಗ್ಸ್​​ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, 23 ವರ್ಷದ ಆರ್ಯನ್​​ ಖಾನ್​​ನನ್ನು ಮಾರುವೇಷದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಅಕ್ಟೋಬರ್ 3 ರಂದು ಬಂಧಿಸಿದ್ದರು. ಆರ್ಯನ್​ ಖಾನ್​​ ಅಕ್ಟೋಬರ್ 8 ರಿಂದ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ. 


ಸುದ್ದಿ ಓದಿ