ಹಾಲು ಉತ್ಪಾದಕರ ಸಂಘದಿಂದ ಕಲಾವಿದರಿಗೆ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ : ಸಾಧನೆ ಸತತವಿದ್ದಾಗ ಸಾಧಕರ ಸೇವೆ ಜನಮಾನಸದಲ್ಲಿ ನೆಲೆಉರಲು ಸಾಧ್ಯ ತಾಲೂಕಿನ ಕಲಾವಿದರು ರಾಜ್ಯ ಅಂತರಾಜ್ಯದಲ್ಲಿ ತಮ್ಮ ಕಾಯಕ ಮುಖೇನ ತಾಲೂಕಿಗೆ ಹೆಸರು ತಂದಿದ್ದಾರೆ, ತಮ್ಮ ಮಾರ್ಗದರ್ಶನದಲ್ಲಿ ಕಲಾಕ್ಷೇತ್ರವನ್ನು ಇನ್ನೂ ಹೆಚ್ಚು ಉಜ್ವಲ ಗೋಳಿಸಲಿ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಬಸನಗೌಡ ಶಿ. ಮೇಲಿನಮನಿ ಹೇಳಿದರು.
ತಾಲೂಕಿನ ಹನುಮರಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಕೊಟ್ರೇಶಮಾಸ್ತರ ಬೆಳಗಲಿ, ಫಕ್ಕೀರೇಶ ಮಾಸ್ತರ ಕೊಂಡಾಯಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಶಂಕರ ಅರ್ಕಸಾಲಿಯವರನ್ನು ಸನ್ಮಾನಿಸಿ ಮಾತನಾಡಿದ ಅವರು ಹನುಮರಹಳ್ಳಿಯ ಯುವ ಜನತೆ ಕಲೆ ಸಂಸ್ಕೃತಿಗಳೆಡೆಗೆ ಗಮನಹರಿಸಿದ್ದಾದರೆ ರಂಗ ಕಲೆಗಳ ಬಗ್ಗೆ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿ ಕಲಾವಿದರನ್ನಾಗಿ ಮಾಡುವುದಾಗಿ ಹೇಳಿದರು,
ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಫಕ್ಕೀರೇಶ ಮಾಸ್ತರ ಮಾತನಾಡಿ ಜನಮಾನಸದಿಂದ ದೂರವಾಗುತ್ತಿರುವ ನಾಟಕ, ಬಯಲಾಟ, ಜಾನಪದ ಕಲೆಗಳನ್ನು ಮಕ್ಕಳಿಗೆ ಪರಿಚಯಿಸಿ ಕಲಿಸಿಕೊಡುವುದು ಅಷ್ಟೇ ಅವಶ್ಯವಿದೆ, ನನ್ನ ಪ್ರಶಸ್ತಿಗಾಗಿ ಆನ್ಲೈನ ಮೂಲಕ ಈ ಗ್ರಾಮದ ಸಮಾನಮನಸ್ಕರು ಬೆಂಬಲಿಸಿದ್ದಾರೆ ಅವರೆಲ್ಲರನ್ನು ಸ್ಮರಿಸಿದರು,
ಸಂಘದ ಅಧ್ಯಕ್ಷ ಎನ್.ಬಿ. ಯಲಿವಾಳ, ಉಪಾಧ್ಯಕ್ಷ ಸಿದ್ದಪ್ಪ ರು. ಪೂಜಾರ, ನಿರ್ದೇಶಕರಾದ ಶೇಖಪ್ಪ ಜೋಳದ, ನಾಗಪ್ಪ ತುಪ್ಪದ, ರಾಜು ದೊಡ್ಮನಿ, ಮಾರುತಿ ಕಬ್ಬೇರ, ಬಸವರಾಜ ನೀರಲಗಿ, ಶಿವಪ್ಪ ಆಡೀನ, ಸಿಬ್ಬಂದಿ ಮಾರುತಿ ಹಡಪದ, ಫಕ್ಕೀರಗೌಡ ಪಾಟೀಲ ಉಪಸ್ಥಿತರಿದ್ದರು ಕಾರ್ಯದರ್ಶಿ ಎಸ್.ಎಸ್. ಹಿರೇಮಠ ನಿರೂಪಿಸಿದರು.