ಕೋವಿಡ್ ಸಂದರ್ಭದಲ್ಲಿ ಗಂಭೀರವಾದ ಕಲಾವಿದರ ಸ್ಥಿತಿ
ಶಿಗ್ಗಾವಿ 08: ಕೇವಲ ಬದಲಾವಣೆಯ ನೀರೀಕ್ಷೆಯಲ್ಲಿ ಇಂದಿನ ಕಲಾವಿದರಿದ್ದು, ಗಾಯದ ಮೇಲೆ ಬರೆಯೆಂಬಂತೆ ಈ ಕೋವಿಡ್ ಸಂದರ್ಭದಲ್ಲಿ ಕಲಾವಿದರ ಪರಿಸ್ಥಿತಿಯು ಇನ್ನೂ ಸರಿಯಾಗಿಲ್ಲ ಎಂದು ಸಾಹಿತಿ ಹಾಗೂ ನಿವೃತ್ತ ಪ್ರಾಚಾರ್ಯ ಭ ಪ ಯಲಿಗಾರ ವಿಷಾದಿಸಿದರು.
ಪಟ್ಟಣದ ಗಾನಯೋಗಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಕಲಾ ಸಂಸ್ಥೆಯಲ್ಲಿ ರಾಮಚಂದ್ರ್ಪ ನೇಪತ್ಯ ವೇಷಭೂಷಣ ಕಲಾ ಸಂಸ್ಥೆ ಶಿಗ್ಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ ಇವರ ಸಹಯೋಗದಲ್ಲಿ ನಡೆದ ಜಾನಪದ ಸಂಕ್ರಾಂತಿ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು ಕಲಾವಿಧರನ್ನು ಅನುಮಾನದಿಂದ ನೋಡುವ ಸ್ಥಿತಿ ಇದೆ ಎಂದ ಅವರು ಕಲಾವಿಧರನ್ನು ಆರಾಧಿಸಬೇಕಾದ ನಮ್ಮಲ್ಲೇ ಇರುವ ಜಾನಪದ ವಿ.ವಿಯು ನಮಗೇ ಬೇಕೆ ? ಎಂದು ಪ್ರಶ್ನಿಸಿದರು, 31 ದೊಡ್ಡಾಟ ಕಲಾ ತಂಡಗಳನ್ನ ಆರಿಸಿದ್ದ ದಿ. ಟಿ ಬಿ ಸೊಲಬಕ್ಕನವರ ಅವರು ಕಲಾವಿದರಿಗೆ ಮತ್ತು ಕಲೆಯನ್ನು ಉಳಿಸುವಲ್ಲಿ ಶ್ರಮಿಸಿದವರು ಅದೇ ರೀತಿ ತೆರೆಯ ಹಿಂದಿನ ಕಾರ್ಯ ಮಾಡಿ ನೇಪತ್ಯ ಕಲೆಯ ಮೂಲಕ ಕಲಾ ಸೇವೆಯಲ್ಲಿ ಶಂಕರ್ ಅರ್ಕಸಾಲಿ ನಿರತರಾಗಿದ್ದಾರೆ ಎಂದರು.
ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ ನೋವಿನಲ್ಲಿಯೂ ಸಂತೋಷ ನೀಡುವ ಕಾರ್ಯಕ್ರಮ ಇದಾಗಿದೆ, ಇಂದು ಕಲಾವಿಧರಿಗೆ ಬೆಂಬಲ ಇಲ್ಲವಾಗಿ ಕೇವಲ ನಂಬಿಕೆಯಲ್ಲಿಯೇ ಕಲಾವಿದರ ಜೀವನ ಸಾಗುತ್ತಿದೆ ಆ ಕಲಾವಿದರ ಶಕ್ತಿಯನ್ನು ಯಾರೂ ಕಸಿದು ಕೊಳ್ಳಲು ಸಾದ್ಯವಿಲ್ಲ ಎಂದರು.
ಸಾಹಿತಿ ಶಿವಾನಂದ ಮ್ಯಾಗೇರಿ ಮಾತನಾಡಿ ಕಷ್ಟಗಳನ್ನು ಅರಿತು, ಬೆರೆತು ಬೇರೆಯವರಿಗೆ ರಂಜಿಸುವ ಮನೋಭಾವ ಕಲಾವಿದರಿಗೆ ಮಾತ್ರ ಇದೆ, ಕಲೆ, ಸಂಗೀತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಶಿಗ್ಗಾವಿಯ ಪುಟ್ಟರಾಜರ ಕಲಾ ಸಂಸ್ಥೆ ಮತ್ತು ನೇಪತ್ಯ ಕಲಾವಿದರ ಸಂಸ್ಥೆ ಹೆಜ್ಜೆ ಇಟ್ಟಿದೆ ಎಂದರು.
ನೇಪತ್ಯ ವೇಷಭೂಷಣ ಸಂಸ್ಥೆಯ ಶಂಕರ್ ಅರ್ಕಸಾಲಿ ಮಾತನಾಡಿ ಮಾಡುವ ಕಾಯಕದಲ್ಲಿಯೇ ತೃಪ್ತಿ ಕಾಣುವ ಸಂಸ್ಥೆ ಇದಾಗಿದ್ದು ಇನ್ನು 10 ವರ್ಷಗಳಲ್ಲಿ ನಮ್ಮ ಕಲಾವಿಧರ ಬದುಕು ಹೇಗೆ ಇರುತ್ತದಯೋ ಗೊತ್ತಿಲ್ಲ ಕಲೆ ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಮ್ಮದು ಇಂದಿನ ಯುವ ಪೀಳಿಗೆ ಇದನ್ನ ಅರ್ಥಮಾಡಿಕೊಳ್ಳಬೇಕು ಮೂಲ ಕಲೆಗೆ ಒತ್ತು ನೀಡಬೇಕಿದೆ ಎಂದು ತೀರ್ವ ನೋವಿನಿಂದ ನುಡಿದರು.
ಕಾರ್ಯಕ್ರಮದಲ್ಲಿ ನೂತನ ಕಸಾಪ ಅದ್ಯಕ್ಷ ಎಸ್ ಎನ್ ಮುಗಳಿ ಹಾಗೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಷ್ಕೃತ ಜಿ ಎಸ್ ಉಂಕಿಯವರನ್ನು ನೇಪತ್ಯ ವೇಷಭೂಷಣ ಸಂಸ್ಥೆಯಿಂದ ಸನ್ಮಾನಿಸಲಾಯಿತು ನಂತರ ವಿದ್ಯಾರ್ಥಿನಿಯರಿಂದ ಯಶೋಧರ ಚರಿತೆ ದೊಡ್ಡಾಟ, ಸುಗಮ ಸಂಗೀತ ಕಲಾ ಪ್ರದರ್ಶನಗಳು ಮೂಡಿ ಬಂದವು.
ಪ.ಪು ಕಲಾ ಸಂಸ್ಥೆಯ ಅದ್ಯಕ್ಷ ಫಕ್ಕೀರೇಶ ಕೊಂಡಾಯಿ, ಗೌರವಾದ್ಯಕ್ಷ ಕೊಟ್ರೇಶ ಮಾಸ್ತರ್ ಬೆಳಗಲಿ, ಸದಸ್ಯರಾದ ಎಸ್ ಬಿ ಅಯ್ಯಣ್ಣವರ, ರಮೇಶ ಸಾತಣ್ಣವರ, ಶಿವಾನಂದ ಹೊಸಮನಿ ಸೇರಿದಂತೆ ನೇಪತ್ಯ ವೇಷಭೂಷಣ ಸಂಸ್ಥೆ, ಪ.ಪು ಕವಿ ಗವಾಯಿಗಳ ಸಂಸ್ಥೆಯ ಉಳಿದ ಸದಸ್ಯರು ಕಲಾಭಿಮಾನಿಗಳು ಇದ್ದರು.