ಬಳ್ಳಾರಿ

ಕಲೆ ಇಂದಿಗೂ ಹಳ್ಳಿಗಳಲ್ಲಿ ಜೀವಂತ: ರಾಘವೇಂದ್ರ

ಕಲೆ ಇಂದಿಗೂ ಹಳ್ಳಿಗಳಲ್ಲಿ ಜೀವಂತ: ರಾಘವೇಂದ್ರ

ಲೋಕದರ್ಶನ ವರದಿ 

ಬಳ್ಳಾರಿ 23: ಕಲೆ ಇಂದಿಗೂ ಹಳ್ಳಿಗಳಲ್ಲಿ  ಜೀವಂತವಾಗಿ ಉಳಿದಿದೆ. ಯಾಕೆಂದರೆ ಕಲೆಗಳನ್ನ ಹಳ್ಳಿಗಳು ಈಗಲೂ ಬೆಳೆಸುತ್ತಾ ಪ್ರೋತ್ಸಾಹಿಸುತ್ತಾ ಬಂದಿದೆ ಎಂದು ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ಹೇಳಿದರು.  


ರಂಗ ನೇಸರ ಸಾಂಸ್ಕೃತಿಕ ಕಲಾ ಸಂಘ ಎಂ. ಬಸಾಪುರ ಹಾಗೂ ರಂಗಕಹಳೆ  ಸಾಂಸ್ಕೃತಿಕ ಸಂಘ ಸಂಜೀವರಾಯನ ಕೋಟೆ ಇವರು ಆಯೋಜನೆ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಗ್ರಾಮದಲ್ಲಿ ರಂಗಗೀತೆ ಮತ್ತು ನಾಟಕ ಪ್ರದರ್ಶನ ಯಶಸ್ವಿಯಾಗಿ ಜನಮನ ಸೆಳೆದಿದೆ.  



 ಮಂಗಳವಾರ ಸಂಜೆ ನಡೆದ "ರಂಗಗೀತೆ ಮತ್ತು ನಾಟಕ" ಮುದ್ದಣ್ಣ ಪ್ರಮೋಷನ್ ಪ್ರಸಂಗ, ಧಾತ್ರಿರಂಗ ಸಂಸ್ಥೆಯು  ನಡೆಸಿ ಕೊಟ್ಟಿತು. ಹಾಗೆಯೇ  ರಂಗ ನೇಸರ ಸಾಂಸ್ಕೃತಿಕ ಕಲಾ ಸಂಘ ಹಾಗೂ ರಂಗಕಹಳೆ  ಸಾಂಸ್ಕೃತಿಕ ಸಂಘಗಳಿಂದ  ಮಾಜಿ ಯೋಧ ರಾಜಶೇಖರ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸನ್ಮಾನಿತರು ದೇಶಾಭಿಮಾನ ಅಂದರೆ ದೇಶದ ಕಲೆ ಸಂಸ್ಕೃತಿ ಆಚಾರ ವಿಚಾರ ಮತ್ತು ರಾಷ್ಟ್ರದ ಮೇಲಿನ ಭಕ್ತಿ ಮತ್ತು ಗೌರವ ಎಂದು ಹೇಳಿದರು.  


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದಂತ ವಸಿಗೆರ​‍್ಪ ಕೆ.ಬಿ. ರವರು ಮಾತನಾಡಿ ಮೊದಲು ಹಿರಿಯರು ಕಲೆಗಳನ್ನು ಗೌರವಿಸುತ್ತಾ ಬರುತ್ತಿದ್ದರು. ಆದರೆ ಇಂತಹ ಆಧುನಿಕ ಕಾಲದಲ್ಲಿ ಹೆಚ್ಚು ಮೊಬೈಲ್ ನಲ್ಲಿ  ಎಲ್ಲಾರೂ ಮುಳುಗಿದ್ದಾರೆ ಆದರೆ ರಂಗ ಕಲೆಗಳನ್ನು ಯುವಕರು ಎಲ್ಲರೂ ಮೈದುಂಬಿಸಿಕೊಳ್ಳಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿಯ ಸದಸ್ಯರು, ಬಸಾಪುರ ಗ್ರಾಮದ ಹಿರಿಯ ಮುಖಂಡರು,  ಹಾಗೂ ನಾಗರಾಜ.ಕೆ ಕಾರ್ಯದರ್ಶಿಗಳು ರಂಗಕಹಳೆ  ಸಾಂಸ್ಕೃತಿಕ ಸಂಘ ಇವರು  ಭಾಗಿಯಾಗಿದ್ದರು. ಕಾರ್ಯಕ್ರಮದ ನಿರೂಪಣೆ ಶಿಲಪ್ಪ, ಸ್ವಾಗತ ಚಂದ್ರಶೇಖರ್ ಬಸಾಪುರ, ಹಾಗೆಯೇ ಬೀ. ಆರ್‌. ಸಿದ್ದಪ್ಪ ವಂದಿಸಿದರು. 


ಸುದ್ದಿ ಓದಿ