ಬಳ್ಳಾರಿ

ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ವಿರಪಾಕ್ಷಗೌಡ

ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ವಿರಪಾಕ್ಷಗೌಡ

ಲೋಕದರ್ಶನ ವರದಿ 

ಬಳ್ಳಾರಿ 16: ಬಯಲಾಟ ಗಂಡುಮೆಟ್ಟಿನ ಕಲೆ. ಇದನ್ನು ನಾವು ನೀವೆಲ್ಲರೂ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ. ಬಯಲಾಟ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದಿದೆ. ಗ್ರಾಮೀಣ ಪ್ರದೇಶಗಳಲ್ಲೂ ಬಯಲಾಟ ಕಲಾವಿದರು ಇದ್ದಾರೆ. ಅವರನ್ನು ಗುರುತಿಸುವ ಕೆಲಸ ಆಗಬೇಕಿದೆ ಎಂದರು ಮಾಜಿ ಜಿ.ಪಂ ಸದಸ್ಯ ಗೋನಾಳ್ ವಿರುಪಾಕ್ಷಗೌಡ ಹೇಳಿದರು.  

ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣದಲ್ಲಿ ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಗಿರಿಜನ ಉಪ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲೆಯನ್ನು ಉಳಿಸುವ ಜೊತೆಗೆ ಕಲಾವಿದರನ್ನು ಸಹ ಸರಕಾರ ಉಳಿಸಬೇಕು. ಅವರಿಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು. ಬಣ್ಣದ ಬದುಕಿನ ನೋಡಲು ಚಂದ. ಅದರೆ, ಜೀವನ ನಡೆಸುವುದು ಕಷ್ಟಕರವಾಗಿದೆ. ಬಹಳಷ್ಟು ಕಲಾವಿದರ ಬದುಕು ಇಂದು ಬೀದಿ ಪಾಲಾಗಿದೆ. ಅಂತವರನ್ನು ಗುರುತಿಸುವ ಕಾರ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸರಕಾರ ಮಾಡಬೇಕಿದೆ ಎಂದರು.  

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ರಮೇಶ್ ಗೌಡ ಮಾತನಾಡಿ, ಕಲೆಗೆ ಸಾವಿಲ್ಲ ಕಲಾವಿದರಿಗೆ ಸುಖವಿಲ್ಲ. ಕಲೆಯನ್ನು ಉಳಿಸಿ ಬೆಳೆಸಲು ಕಲಾವಿದರು ಸಹ ಬದುಕಬೇಕು. ಕಲಾವಿದರಿಗೂ ಆಸರೆ ಬೇಕು. ಕಲಾವಿದರನ್ನು ಎಲ್ಲ ರೀತಿಯಿಂದ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದರು.  

ಹಿರಿಯ ಪತ್ರಕರ್ತ ಸಿದ್ದರಾಮಪ್ಪ ಸಿರಿಗೇರಿ, ಕರ್ನಾಟಕ ಜಾನಪದ ಪರಿಷತ್ ಕುರುಗೋಡು ಅಧ್ಯಕ್ಷ ಚಾನಾಳ್ ಅಮರೇಶ್ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಸಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.  

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಹೆಚ್‌. ಪಾಂಡುರಂಗಪ್ಪ, ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್‌ನ ಅಧ್ಯಕ್ಷೆ ಸುಜಾತಮ್ಮ, ಕಲಾವಿದರಾದ ವೀಣಾಕುಮಾರಿ, ಉಷಾರಾಣಿ, ರಂಗಾರೆಡ್ಡಿ, ಹನುಮಾವಧೂತಪ್ಪ, ಎರಗುಡಿ ಮುಖಂಡ ಎ.ಗೋಪಾಲ್, ಎರಗುಡಿ ಗ್ರಾ.ಪಂ ಸದಸ್ಯ ಎನ್‌.ಗಾದಿಲಿಗಪ್ಪ, ಜಿ. ಮುದ್ದಪ್ಪ, ಹೆಚ್‌. ಚಂದ್ರಶೇಖರ, ಜಿ. ಭೀಮಪ್ಪ, ಷಣ್ಮುಖಪ್ಪ, ಪಾಮಣ್ಣ,  ಎರಗುಡಿ ಗ್ರಾ.ಪಂ ಅಧ್ಯಕ್ಷ ಈರಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  

ಬಿ. ವೀಣಾಕುಮಾರಿ, ಕುಸುಮಾ ತಂಡದವರಿಂದ ರಂಗಗೀತೆಗಳ ಗಾಯನ ನಡೆಯಿತು. ಉಷಾರಾಣಿ ಮತ್ತು ಸುಜಾತಮ್ಮ ಅವರಿಂದ ಬಯಲಾಟ ಪದಗಳ ಕಾರ್ಯಕ್ರಮ ನಡೆಯಿತು. ಚಿನ್ನಕ್ಷೀರ ವಿಂದೇಶ್ವರಿ  ಮತ್ತು ಬಿ. ಸುರೇಶ್ ಕುಮಾರ್ ತಂಡದವರಿಂದ ಸಮೂಹ ನೃತ ಪ್ರದರ್ಶನ ನಡೆಯಿತು. ವಾಲ್ಮೀಕಿ ದೊಡ್ಡ ಚಿಕ್ಕಣ್ಣ ತೊಲಮಾಮಿಡಿ ಕಲಾ ತಂಡದವರಿಂದ ರಾಮಾಯಣ ಬಯಲಾಟ ಪ್ರದೇರ್ಶನ ನಡೆಯಿತು. ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಲಕ್ಷ್ಮೀ ನಾರಾಯಣ ಸ್ವಾಗತಿಸಿದರು. ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷಾ ಕಾರ್ಯಕ್ರಮ ನಿರೂಪಿಸಿದರು. ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್‌ನ ಖಜಾಂಚಿ ಬಿ.ಸುರೇಶ್ ಕುಮಾರ್  ವಂದಿಸಿದರು. 


ಸುದ್ದಿ ಓದಿ