ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ
ತಾಳಿಕೋಟೆ06: ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿ ರಾಜ್ಯ ಅಧ್ಯಕ್ಷ ಅಮರೇಶ ಕಾಮನಕೇರಿ ಅವರ ಮೇಲೆ ಹುಣಸಗಿ ತಹಶೀಲ್ದಾರ ಕಚೇರಿಯಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ಹಾಗೂ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಆಗ್ರಹಿಸಿ ತಾಲೂಕು ತಳವಾರ ಸಮಾಜದ ವತಿಯಿಂದ ಸೋಮವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ತಳವಾರ ಸಮಾಜದ ಮುಖಂಡರು, ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿಯ ರಾಜ್ಯ ಅಧ್ಯಕ್ಷರು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಆದ ಅಮರೇಶ ಕಾಮನಕೇರಿ ಅವರ ಮೇಲೆ ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದ ತಹಶೀಲದಾರ ಕಛೇರಿ ಆವರಣದಲ್ಲಿ ಅನ್ಯ ಸಮಾಜದ ಕೆಲವು ಕಿಡಿಗೇಡಿಗಳು, ಮರಿ ರೌಡಿಗಳು ಅವರ ಮೇಲೆ ವಿನಾಕಾರಣ ಮಾರಣಾಂತಿಕವಾಗಿ ಹಲ್ಲೆ ಮಾಡಿರುತ್ತಾರೆ. ಸದರಿಯವರು ತಳವಾರ ಸಮಾಜದ ಒಳತಿಗಾಗಿ ದಿನದ 24 ಗಂಟೆಯು ಹೋರಾಟ ಮಾಡುವಂತಹವರು, ಸರ್ಕಾರದ ಆದೇಶದ ಅನುಸಾರ ತಳವಾರ ಜಾತಿಗೆ ಎಸ್.ಟಿ ಪ್ರಮಾಣ ಪತ್ರವನ್ನು ಕೊಡಿಸಲು ಅಂದಿನ ದಿವಸ ತಹಶೀಲದಾರ ಕಛೇರಿಗೆ ಬಂದಿದ್ದರು. ಅಲ್ಲಿ ಅನ್ಯ ಜನಾಂಗದ ಕಿಡಿಗೇಡಿಗಳು ಪುಂಡಾಟಿಕೆ ಮಾಡಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆಯನ್ನು ಮಾಡಿರುತ್ತಾರೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರವೇ ಕಾನೂನುಬದ್ಧವಾಗಿ ತಳವಾರ ಜಾತಿಯನ್ನು ಎಸ್.ಟಿ ಗೆ ಸೇರಿಸಿ ಸುತ್ತೋಲೆಯನ್ನು ಹೊರಡಿಸಿ ಆದೇಶಸಿರುವಾಗ ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರುವದಿಲ್ಲ. ಅದನ್ನು ಪಡೆಯುವ ಹಕ್ಕು ನಮಗಿದೆ. ಅನ್ಯ ಜನಾಂಗದವರಿಗೆ ಯಾವುದೇ ತಕರಾರು ಇದ್ದರೂ ಕಾನೂನಾತ್ಮಕವಾಗಿ ಹೋರಾಟ ಮಾಡಲಿ. ಆದರೆ ಈ ರೀತಿ ಅಮಾನುಷವಾಗಿ ಹಲ್ಲೆ ಮಾಡುವುದು ಸರಿಯಲ್ಲ. ಈ ವಿಚಾರವಾಗಿ ಸಕರ್ಾರವು ಪೋಲೀಸ್ ಇಲಾಖೆಗೆ ಕಟ್ಟು ನಿಟ್ಟಿನ ಆದೇಶಮಾಡಬೇಕು. ವಿನಾಕಾರಣ ರಾಜ್ಯದಲ್ಲಿ ತಳವಾರ ಸಮಾಜದ ಮೇಲೆ ಹಲ್ಲೆ ಮಾಡುತ್ತಿರುವ ಕಿಡಿಗೇಡಿಗಳಿಗೆ ಬಂಧಿಸಿ ಕಾನೂನು ರೀತಿ ಶಿಕ್ಷೆ ನೀಡಬೇಕು. ತಳವಾರ ಸಮುದಾಯದ ರಕ್ಷಣೆಗೆ ಮುಂದಾಗುವಂತೆ ನಿದರ್ೇಶನ ನೀಡಬೇಕು.
ಒಂದು ವೇಳೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು.
ಮನವಿ ಸವಿಕರಿಸಿದ ತಹಶೀಲ್ದಾರ ಶ್ರೀಧರ ಗೋಟುರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಕಳುಹಿಸಲಾಗುವದು ಎಂದರು.
ತಾಲೂಕು ತಳವಾರ ಸಮಾಜದ ಅಧ್ಯಕ್ಷ ಪರಶುರಾಮ ತಂಗಡಗಿ, ಮುಖಂಡರಾದ ವಿಶ್ವನಾಥ ತಳವಾರ, ಶ್ರೀಶೈಲ ಬಿರಾದಾರ, ಶಾಂತಪ್ಪ ಇಣಚಗಲ್ಲ, ಸಂಗನಬಸಪ್ಪ ತಳವಾರ, ಭಿಮಣ್ಣ ತಳವಾರ, ಸಂಗಮೇಶ ಯಕ್ತಾಪೂರ, ಬಸವರಾಜ ತಳವಾರ, ಸಿದ್ದಲಿಂಗ ವಾಲಿಕಾರ, ರಾಜು ವಾಲಿಕಾರ, ಮಹಾಂತೇಶ ತಳವಾರ, ತಿರುತಿ ಗುಡ್ಡಕಾಯಿ, ನಾಗಪ್ಪ ತಳವಾರ, ಸಂದೀಪ ತಳವಾರ, ಕಾಶಿನಾಥ ಮದರಿ, ಚನ್ನಪ್ಪ ನಾಟಿಕಾರ, ರಾಹುಲ ತಳವಾರ, ಕಾಶಿನಾಥ ಹಗರಟಗಿ, ನಾಗೇಶ ಹೊಸಕೇರಿ, ಸಿದ್ದಣ್ಣ ಜಾಲಹಳ್ಳಿ, ರವಿ ಯಳಮೇಲಿ, ಮುತ್ತು ಬಾಗೇವಾಡಿ, ಆನಂದ ತಳವಾರ, ಚನ್ನಬಸಪ್ಪ ಶೆಂಬೇವಾಡ, ದತ್ತಾ ಕೋಲ್ಕಾರ, ದಂಡಪ್ಪ ಇಣಜಗಲ್ಲ ಸೇರಿದಂತೆ ಇತರರು ಇದ್ದರು.