ಬಳ್ಳಾರಿ

ಅರಣ್ಯ ಇಲಾಖೆ ಅಧಿಕಾರಿಗಳಿಂದ ಬೇಟೆಗಾರರ ಬಂಧನ

ಅರಣ್ಯ ಇಲಾಖೆ ಅಧಿಕಾರಿಗಳಿಂದ ಬೇಟೆಗಾರರ ಬಂಧನ

ಬಳ್ಳಾರಿ: ತಾಲೂಕಿನ ಹಲಕುಂದಿ ಗ್ರಾಮದ ಬಳಿ ಅರಣ್ಯ ಇಲಾಖೆಯಿಂದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಯುಗಾದಿ ಹಬ್ಬದ ಮಾ.23ರಂದು ಕರಿ ಹಿನ್ನೆಲೆಯಲ್ಲಿ ಅರಣ್ಯಕ್ಕೆ ಬೇಟೆಯಾಡಲು ಬಂದಿದ್ದ ಮೂವರು ಆರೋಪಿಗಳನ್ನು ಅತ್ಯಂತ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಭೇಟೆ ಯಾಡಲು ಬಂದಿದ್ದು ಚಿತ್ರದುರ್ಗ ಜಿಲ್ಲಾಯ  ಮೊಣಕ್ಮಾಲೂರು ತಾಲೂಕಿನ ಕೊನಪುರ ಗ್ರಾಮದ ರಮೇಶ, ರಾಮಾಂಜಿನಿ, ಪಾಪಣ್ಣ, ಸೇರಿದಂತ ನಾಲ್ಕು ಜನ ಬೇಟಗಾರರನ್ನು ಮತ್ತು ಬೇಟೆಯಾಡಿದ್ದ ನಾಲ್ಕು ಮೊಲಗಳು ಹಾಗೂ ಬೇಟೆಗೆ ಬಳಸಿದ್ದ 51 ಬಲೆಗಳ ಮತ್ತು ಇತರ ವಸ್ತುಗಳ ಸಮೇತವಾಗಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅರಣ್ಯಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅರಣ್ಯ ಆಧಿಕಾರಿಗಳಾದ ಡಿಸಿಎಫ್ ಸೂರ್ಯವಂಶಿ ಹಿಂದುರಾವ್, ಎಸಿಫ್ ಅಧಿಕಾರಿಗಳಾದ  ಫಯಾಜುಧ್ದಿನ್ ಮಾರ್ಗದರ್ಶನದ ಮೇರೆಗೆ ವಲಯ  ಅರಣ್ಯ ಆಧಿಕಾರಿಗಳಾದ ರಾಘವೇಂದ್ರ ಇವರ  ನೇತೃದದಲ್ಲಿ ಇಲಾಖೆಯ ಸಿಬ್ಬಂದ್ದಿಗಳಾದ ನಾಗರಾಜ ಗೌಡ, ಗೀರಿಶ್, ರಾಜಶೇಖರ್, ಆಶೋಕ್ ಪುಜಾರಿ, ಇವರುಗಳು ದಾಳಿಮಾಡಿ ಆರೋಪಿ ಬೇಟೆಗಾರರನ್ನು ವಶಕ್ಕೆ ಪಡೆದಿದ್ದಾರೆ. ಸಿಬ್ಬಂದಿಯ ಕಾರ್ಯವೈಖರಿಗೆ ಮೇಲಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ 

ಸುದ್ದಿ ಓದಿ