ಅಂತರ ಜಿಲ್ಲಾ ಆರೋಪಿ ಬಂಧನ
ಲೋಕದರ್ಶನ ವರದಿ
ಮುಂಡಗೋಡ:ಬೈಕ್ ಕಳ್ಳತನಕ್ಕೆ ಸಂಬಂಧಿಸಿದ ಓರ್ವ ಅಂತರ ಜಿಲ್ಲಾ ಆರೋಪಿಯನ್ನು ಇಲ್ಲಿನ ಪೋಲಿಸರು ಮಂಗಳವಾರ ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಹುಲಗಿನಕೊಪ್ಪ ಗ್ರಾಮದ ಅನಿಲ ಬಂಡಿವಡ್ಡರ ಆರೋಪಿ. ತಾಲೂಕಿನ ಕಾತೂರ ಗ್ರಾಮದ ಸಿರಾಜ ಬೊಮ್ಮನಳ್ಳಿ ಎಂಬುವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಸ್ಪೆ-್ಲಂಡರ್ ಪ್ರೋ ಬೈಕ್ ಜೂ.6ರಂದು ಕಳವು ಆದ ಬಗ್ಗೆ ಜೂ.10ರಂದು ಇಲ್ಲಿನ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ಭೇದಿಸಲು ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಪೆನ್ನೇಕರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಬದರಿನಾಥ, ಡಿಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಎಸ್.ಸಿಮಾನಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿ ಅನಿಲ ಬಂಡಿವಡ್ಡರ ಈತನನ್ನು ಬಂಧಿಸಲಾಗಿದ್ದು ಪ್ರಕರಣದಲ್ಲಿ ಭಾಗಿಯಾದ ಮತ್ತೊಬ್ಬ ಆರೋಪಿ ಪತ್ತೆಗೆ ಪೋಲಿಸರು ಜಾಲ ಬೀಸಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ಎಸ್.ಎಸ್.ಸಿಮಾನಿ, ಪಿಎಸ್ಐ ಬಸವರಾಜ ಮಬನೂರ, ಎನ್.ಡಿ.ಜಕ್ಕಣ್ಣವರ, ಮಣಿಮಾಲನ್ ಮೇಸ್ತ್ರಿ, ಎಎಸ್ಐ ಹಾಗೂ ಸಿಬ್ಬಂದಿ ಸಲೀಮ್, ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಬಸವರಾಜ ಲಮಾಣಿ, ವಿವೇಕ ಪಟಗಾರ, ಸಹದೇವ, ಶರತ ದೇವಳಿ ಇವರನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.