ತಾಳಿಕೋಟಿ

ಅರಸು ನಾಡು ಕಂಡ ಧೀಮಂತ, ಮೇಧಾವಿ ರಾಜಕಾರಣಿ : ನಾಯಕ

ಅರಸು ನಾಡು ಕಂಡ ಧೀಮಂತ, ಮೇಧಾವಿ ರಾಜಕಾರಣಿ : ನಾಯಕ

ತಾಳಿಕೋಟೆ 21: ಅರಸು ನಾಡು ಕಂಡ ಧೀಮಂತ, ಮೇಧಾವಿ ರಾಜಕಾರಣಿ. ಹಿಂದುಳಿದ ವರ್ಗಗಳ ಪರವಾಗಿ ಕಾಳಜಿ ಹೊಂದಿದ್ದ ಅವರು, ಸಮಾಜಕ್ಕೆ ಮಾಡಿರುವ ಕಾರ್ಯಗಳು ಅಚ್ಚಳಿಯದೆ ಉಳಿದಿವೆ.  ಪ್ರಮುಖವಾಗಿ ಭೂ ಸುಧಾರಣಾ ಕಾಯ್ದೆ , ಕರ್ನಾಟಕ ಋಣಮುಕ್ತ ಕಾಯ್ದೆ ತಂದು ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಅವರು ಈ ನಾಡಿಗೆ ಕೊಟ್ಟಂತಹ ಸೇವೆ, ಜಾರಿಗೆ ತಂದ ಕಾರ್ಯಕ್ರಮ ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್‌.ಡಿ.ನಾಯಕ ಹೇಳಿದರು. 

ಅವರು ಪಟ್ಠಣದ ಪುರಸಭೆ ಸಭಾ ಭವನದಲ್ಲಿ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಅರಸು ಅವರು ಜೀತದಾಳು ಹಾಗೂ ಮಲಹೊರುವ ಪದ್ಧತಿಯನ್ನು ನಿಷೇಧಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅರ್ಥ ಕಲ್ಪಿಸಿದವರು. ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬಂತೆ ಎಲ್ಲಾ ಬಡವರಿಗೂ ವಸತಿ ಸೌಲಭ್ಯ, ಶಿಕ್ಷಣದಲ್ಲಿ ಸಮಾನತೆ ಕಲ್ಪಿಸುವ ಮೂಲಕ ಸಮಾಜಮುಖಿಯಾಗಿ ಶ್ರಮಿಸಿದವರು. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕಲ್ಪಿಸಿ ಸಹಾಯಧನ ನೆರವು ನೀಡಿದರಲ್ಲದೇ ಸಾಮಾನ್ಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ ಸಾಮಾಜಿಕ ಹರಿಕಾರ ಅರಸು, ಇವರು ಉಳುವವನಿಗೆ ಭೂಮಿ ಯೋಜನೆ ಜಾರಿಗೊಳಿಸಿ ಪ್ರತಿಯೊಬ್ಬ ರೈತರು ಇಂದು ಸ್ವತಂತ್ರವಾಗಿ ದುಡಿಮೆ ಮಾಡುವಂತೆ ಮಾಡಿದ ಧೀಮಂತ ನಾಯಕ, ಜಗತ್ತಿನಲ್ಲಿಯೇ ಮೊದಲ ಬಾರಿಗೆ ವೃಕ್ಷಾ ಸಂರಕ್ಷಣಾ ಕಾಯ್ದೆಯನ್ನು ಜಾರಿಗಳಿಸಿದ ಏಕೈಕ ನಾಯಕ ದೇವರಾಜ ಅರಸು. ಇವರ ಆಡಳಿತವಾಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಬಡ ಜನರಿಗಾಗಿ ಶ್ರಮಿಸಿದವರು. ರಾಜಕಾರಣಿಗಳಾದರು ಓದಿನ ಮೇಲೆ ಅಪಾರ ಆಸಕ್ತಿ ಹೊಂದಿದವರು ಎಂದರು. 

ಪುರಸಭೆ ಕಂದಾಯ ನೀರಿಕ್ಷಕ ಸಿದ್ದರಾಯ ಕಟ್ಟಿಮನಿ, ಶ್ರೀಪಾದ ಜೋಶಿ, ಶ್ರೀಧರ ಚೊಂಡಿಪಾಟೀಲ, ಪ್ರಬು ನಾಲತವಾಡ, ಶ್ರಿಲಾಧರ ಗತ್ತರಗಿ, ಡಿ.ಬಿ.ಜಾನ್ವೇಕರ, ಶಶಿಕುಮಾರ ಚಲವಾದಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ