ಏಪ್ರಿಲ್ 7 ರಂದು ಉಚಿತ ನೇತ್ರ ತಪಾಸಣಾ ಶಿಬಿರ
ಲೋಕದರ್ಶನ ವರದಿ
ಬಳ್ಳಾರಿ 05: ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಬಳ್ಳಾರಿ ಆರೋಗ್ಯ ಇಲಾಖೆಯ ಸಹಯೋಗ ಮತ್ತು ಬಿಜೆಪಿ ಮುಖಂಡ ವಿ. ಅನೂಪ್ ಕುಮಾರ್ ಮತ್ತು ಭೀಮಲಿಂಗ ರವರ ನೇತೃತ್ವದಲ್ಲಿ ಎಲ್ಲಾ ವಯೋಮಾನದವರಿಗೂ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏಪ್ರಿಲ್ 7 ರಂದು ಬೆ. 9ರಿಂದ ಮ. 1:30 ರವೆರೆಗೆ ನಗರದ 38ನೇ ವಾರ್ಡಿನ ದೇವಿನಗರದ ಮೇದಾರವಾಡಿ ಶಾಲೆಯಲ್ಲಿ ಆಯೋಜಿಸಲಾಗಿದೆ.
ಕಣ್ಣಿಗೆ ಸಂಬಂಧಪಟ್ಟ ಖಾಯಿಲೆಗಳಿಂದ ಬಳಲುತ್ತಿರುವ ಜನರಿಗೆ, ಮುಖ್ಯವಾಗಿ, ಕಣ್ಣಿನ ಪೊರೆ, ಕಡಿಮೆ ದೃಷ್ಟಿ, ಡಯಾಬೆಟಿಕ್ ರೆಟಿನೋಪತಿ, ಗ್ಲುಕೋಮಾದಂತಹ ಅಪಾಯಕಾರಿ ಖಾಯಿಲೆಗೆ ತುತ್ತಾದವರಿಗೆ ವೈದ್ಯಕೀಯ ನೆರವು ನೀಡುವ ನಿಟ್ಟಿನಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಪಾಲ್ಗೊಳ್ಳುವ ಎಲ್ಲಾ ರೋಗಿಗಳಿಗೆ ಉಚಿತವಾಗಿ ನೇತ್ರ ತಪಾಸಣೆ ಮಾಡಿ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಕಂಡುಬಂದಲ್ಲ್ಲಿ ಸರ್ಕಾರದ ವತಿಯಿಂದ ಉಚಿತವಾಗಿ ಕಣ್ಣಿನ ಶಸ್ತೊ ಚಿಕಿತ್ಸೆಯನ್ನು ಸಹ ನೀಡಲಾಗುತ್ತದೆ.
ಆದ್ದರಿಂದ ಸಾರ್ವಜನಿಕರು ತಪ್ಪದೆ ಈ ಶಿಬಿರದಲ್ಲಿ ಪಾಲ್ಗೊಂಡು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಬಿಜೆಪಿ ಮುಖಂಡರಾದ ಅನೂಪ್ ಕುಮಾರ್ ರವರು ಮನವಿ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ವೀರೇಶ್ (7411637511)ರವರನ್ನು ಸಂಪರ್ಕಿಸಬಹುದು.