ಬಳ್ಳಾರಿ

40ಕೆಜಿ ಕೇಕ್ ಕತ್ತರಿಸುವ ಮೂಲಕ ಅಪ್ಪು ಹುಟ್ಟು ಹಬ್ಬ ಆಚರಣೆ

40ಕೆಜಿ ಕೇಕ್ ಕತ್ತರಿಸುವ ಮೂಲಕ ಅಪ್ಪು ಹುಟ್ಟು ಹಬ್ಬ ಆಚರಣೆ

ಲೋಕದರ್ಶನ ವರದಿ 

ಬಳ್ಳಾರಿ 17: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಕರುನಾಡ ಕಣ್ಮಣಿ, ರಾಜರತ್ನ, ನಗುವಿನ ಒಡೆಯ, ಕರ್ನಾಟಕ ರತ್ನ ಡಾ. ಪುನೀತ ರಾಜಕುಮಾರ್ ರವರ ಅಗಲಿಕೆಯ ನೋವಿನಲ್ಲೂ 47ನೇ ವರ್ಷದ ಹುಟ್ಟು ಹಬ್ಬ ಹಾಗೂ ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್‌ ಬಿಡುಗಡೆಯ ಪ್ರಯುಕ್ತ ರಾಜ್‌ವಂಶದ ಅಭಿಮಾನಿ, ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕ  ಹೆಚ್‌.ಎನ್‌. ಎಫ್‌. ಮಹಮ್ಮದ್ ಇಮಾಮ್ ನಿಯಾಜಿರವರು ಸಾವಿರಾರು ಅಪ್ಪು ಅಭಿಮಾನಿಗಳೊಂದಿಗೆ ತಮ್ಮ ಪರ್ವಾಜ್ ಪ್ಲಾಜಾ ಕಚೇರಿಯಿಂದ ಹಂಪಿ ರಸ್ತೆಯಲ್ಲಿರುವ ಬಾಲಾ ಟಾಕೀಸ್‌ವರೆಗೂ ಅಪ್ಪು ಘೋಷಣೆಗಳೊಂದಿಗೆ ಮೆರವಣಿಗೆ ಹೊರಟು ಬಾಲಾ ಟಾಕೀಸ್ ಹತ್ತಿರ ಅಪ್ಪು ಅವರ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಹೆಚ್‌.ಎನ್‌.ಎಫ್‌. ಇಮಾಮ್ ನಿಯಾಜಿ ರವರು  ಸುಮಾರು 40ಕೆ.ಜಿ. ಕೇಕ್ ಕತ್ತರಿಸುವ ಮೂಲಕ ಅಪ್ಪು ಅಗಲಿಕೆಯ ನೋವಿನಲ್ಲೂ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. 


ಇದೇ ವೇಳೆ ಅಪ್ಪು ಅವರ ಹುಟ್ಟು ಹಬ್ಬಕ್ಕೆ  ಹಾಗೂ ಜೇಮ್ಸ್‌ ಚಿತ್ರದ ಬಿಡುಗಡೆಗೆ ಹಗಲಿರುಳು ಎನ್ನದೇ ಊಟ ನೀರು ಬಿಟ್ಟು ಕಾತರದಿಂದ ಕಾಯುತ್ತಿದ್ದ ಸಾವಿರಾರು ಅಭಿಮಾನಿ ದೇವರುಗಳಿಗೆ ಹೆಚ್‌.ಎನ್‌. ಎಫ್‌. ಇಮಾಮ್ ನಿಯಾಜಿ ರವರು ಆಹಾರದ ಪೊಟ್ಟಣ, ಕುಡಿಯುವ ನೀರಿನ ಬಾಟಲ್ ಗಳನ್ನು ಹಂಚುವ ಮೂಲಕ ಅಭಿಮಾನಿಗ ಹಸಿವಿಗೆ ಅಸರೆಯಾದರು, 


ಇದೇ ಸಂದರ್ಭದಲ್ಲಿ ಅಪ್ಪು ಅವರ ಮೇಲಿನ ಅಭಿಮಾನಿಗಳ ಪ್ರೀತಿ, ಅಭಿಮಾನವನ್ನು ಕಂಡು ಮೂಖ ವಿಸ್ಮಿತರಾದ ಇಮಾಮ್ ನಿಯಾಜಿ ರವರು ಮಾತನಾಡಿ ಅಪ್ಪು ರವರ ಅಗಲಿಕೆ ಇಡೀ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ, ಇವರು ಕೇವಲ ಸಿನಿಮಾ ರಂಗಕ್ಕೆ ಸೀಮಿತವಾಗದೇ ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದು, ಅವರ ಜೀವನ ಶೈಲಿಯು ನಾವು ಮತ್ತಷ್ಟು ಸಮಾಜ ಸೇವೆ ಮಾಡಲು ಸ್ಪೂರ್ತಿ ಹಾಗು ಮಾರ್ಗದರ್ಶನವಾಗಿದೆ ಹಾಗು ್ಖ ಡಾ.  ಪುನೀತ್ ರಾಜಕುಮಾರ​‍್ಖ‌  ರವರು ಎಂದಿಗೂ ನಮಗೆ ಅಜರಾಮರ ಎಂದು ಹೇಳಿ ಭಾವುಕರಾದರು. 


ಸುದ್ದಿ ಓದಿ