ರಾಯಣ್ಣ ಅಭಿಮಾನಿ ಬಳಗದಿಂದ ಅಪ್ಪು ಪುಣ್ಯಸ್ಮರಣೆ
ಲೋಕದರ್ಶನ ವರದಿ
ಮುಂಡಗೋಡ: ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ತಾಲೂಕು ಘಟಕದವರು ಬಂಕಾಪುರ ರಸ್ತೆಯ ಸಂಗೊಳ್ಳಿ ರಾಯಣ್ಣ ಕಾರ್ಯಾಲಯದಲ್ಲಿ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ ಅವರ ಪ್ರಥಮ ಪುಣ್ಯ ಸ್ಮರಣೆ ನಿಮಿತ್ತ ಶನಿವಾರ ಸಂಜೆ ಅಪ್ಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ವೇಳೆ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಪ್ರಮುಖರಾದ ಅಯ್ಯಪ್ಪ ಭಜಂತ್ರಿ, ಮಂಜುನಾಥ ಕುರುಬರ, ಭುವನ ಕುರಿ, ಮೈಲಾರಿ ಕುರುಬರ, ಮಂಜುನಾಥ ಹಡಪದ, ಕೃಷ್ಣ ಕುಂದರಗಿ, ರೇವಣಸಿದ್ದ ಭಜಂತ್ರಿ, ಗುಡ್ಡಪ್ಪ ಸುಣಗಾರ ಮುಂತಾದವರು ಉಪಸ್ಥಿತರಿದ್ದರು.