ಮನರಂಜನೆ

ಅಪ್ಪು ಪುಣ್ಯಸ್ಮರಣೆ: ಸಾವಿರಾರು ಅಭಿಮಾನಿಗಳಿಗೆ ಭೋಜನ

ಅಪ್ಪು ಪುಣ್ಯಸ್ಮರಣೆ: ಸಾವಿರಾರು ಅಭಿಮಾನಿಗಳಿಗೆ ಭೋಜನ

ಬೆಂಗಳೂರು, ನ. 09: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಧಿವಶರಾದ 12ನೇ ದಿನವಾದ ಇಂದು ನಗರದ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ದೊಡ್ಮನೆ ಕುಟುಂಬದಿಂದ ವ್ಯವಸ್ಥೆ ಮಾಡಿದ್ದ ಈ ಅನ್ನಸಂತರ್ಪಣೆಯಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಭೋಜನ ಮಾಡಿದ್ದಾರೆ. 

ಬೆಳಗ್ಗೆ 11.30 ರಿಂದ ನಿರಂತರವಾಗಿ ಜನಸಾಗರ ಹರಿದು ಬಂದಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ 20 ಸಾವಿರಕ್ಕೂ ಹೆಚ್ಚು ಮಂದಿ ಭೋಜನ ಸ್ವೀಕರಿಸಿದ್ದಾರೆ.

ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಒಂದು ಬಾರಿಗೆ ಐದು ಸಾವಿರ ಜನರು ಊಟಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.  ಒಟ್ಟು ಎರಡು ಗೇಟ್ ಗಳಲ್ಲಿ 24 ಕೋಣೆಗಳಲ್ಲಿ ಐದು ಸಾವಿರ ಕುರ್ಚಿ ಹಾಗೂ ಟೇಬಲ್ ಗಳನ್ನು ಹಾಕಿ, ಮಾಂಸಾಹಾರ ಮತ್ತು ಸಸ್ಯಾಹಾರ  ಸಿದ್ಧಪಡಿಸಲಾಗಿತ್ತು.

ಚಾಮರಾಜಪೇಟೆಯ ಡಿ ಎಲ್ ಎಫ್ ಕ್ಯಾಟರಿಂಗ್ ಅಡುಗೆ ತಯಾರಿಯ ಜವಾಬ್ದಾರಿ ವಹಿಸಿಕೊಂಡಿದ್ದು, 600 ಮಂದಿ ನುರಿತ ಬಾಣಸಿಗರು ಮಾಂಸಾಹಾರಿಗಳಿಗಾಗಿ ಅಕ್ಕಿ ಪೇಣಿ ಪಾಯಸ, ಚಿಕನ್ ಚಾಪ್ಸ್, ಕಬಾಬ್ ಮೊಟ್ಟೆ, ಅನ್ನ ರಸಂ, ಘೀ ರೈಸ್ ತಯಾರಿಸಿದ್ದರೆ, ಸಸ್ಯಾಹಾರಿಗಳಿಗಾಗಿ ಅಕ್ಕಿ ಪೇಣಿ ಪಾಯಸ, ಘೀರೈಸ್ ಕುರ್ಮ, ಬೇಬಿಕಾರ್ನ್ ಲಾಲಿಪಪ್, ಆಲೂ ಕಬಾಬ್, ಮಸಾಲೆ ವಡೆ, ಅನ್ನ ಸಾಂಬಾರ್ ತಯಾರಿಸಲಾಗಿತ್ತು.  

ಸುದ್ದಿ ಓದಿ