ಹಗರಿಬೊಮ್ಮನಹಳ್ಳಿ

ಅಪ್ಪು ಜನ್ಮದಿನ: ನೆಹರು ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಅಪ್ಪು ಜನ್ಮದಿನ: ನೆಹರು ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ.ಮಾ.19 : ಪಟ್ಟಣದ ಹಳೇ ಊರಿನ ನೆಹರು ನಗರದಲ್ಲಿ ಕರುನಾಡಿನ ಹೆಮ್ಮೆಯ ನಟ ಕರ್ನಾಟಕ ರತ್ನ ದಿ. ಪುನೀತ್ ರಾಜ್‌ಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರುಗಿದವು. 

ನಿವೃತ್ತ ಗ್ರಾ.ಪಂ.ಅಭಿವೃಧ್ಧಿ ಅಧಿಕಾರಿ ಈ.ಕೆ.ಮೂರ್ತಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ ಅನಾಥ ಮಕ್ಕಳ, ವೃಧ್ಯಾಪರ, ನಿರ್ಗತಿಕರ, ನಿಸ್ಸಾಹಯಕರ ಪಾಲಿಗೆ ದೇವರ ರೂಪದಲ್ಲಿ ಕಾರ್ಯಗಳನ್ನು ಮಾಡುತ್ತಾ ಹಾಗೂ ಯಾವುದೇ ಫಲಾಪೇಕ್ಷೆ ಇಲ್ಲದೇ ನಿಷ್ಕಲ್ಮಷ ಹೃದಯ ಶ್ರೀಮಂತಿಕೆ ಹೊಂದಿರುವ ಪುನಿತ್ ರಾಜ್‌ಕುಮಾರ್ ಕಡೆಯವರೆಗೆ ಜನಮಾನಸದಲ್ಲಿ ಉಳಿಯುವಂತಹ ವ್ಯೆಕ್ತಿಯಾಗಿದ್ದಾರೆ, ಪ್ರತಿಯೊಂದು ಚಲನಚಿತ್ರದ ಸಂಭಾವನೆಯಲ್ಲಿ ಅರ್ದದಷ್ಟು ಹಣವನ್ನು ಬಡವರ ಉದ್ಧಾರಕ್ಕಾಗಿ ವ್ಯಯಿಸುವ ಮಹಾನ್ ವ್ಯಕ್ತಿ ಇಂದು ನಮ್ಮನ್ನಗಲಿ ಇಂದಿಗೆ ಒಂದೂವರೆ ವರ್ಷ ಕಳೆದಿದೆ. ಆದರೆ ಅವರ ಸಮಾಜ ಮುಖಿ ಕಾರ್ಯಗಳು ಇಂದಿಗೂ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಅಂತಹ ವ್ಯಕ್ತಿಯ ಜನ್ಮ ದಿನದ ಪ್ರಯುಕ್ತ ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಸಂತಸದ ವಿಷಯ, ಪ್ರಸ್ತುತ ದಿನಗಳಲ್ಲಿ  ಸಣ್ಣ ಸಹಾಯ ಮಾಡಿ ಉದ್ದಗಲಕ್ಕೂ ಪ್ರಚಾರ ಗಿಟ್ಟಿಸಿಕೊಳ್ಳುವವರ ಮದ್ಯೆ ಇಂತಹ ಮಾಹಾನ್ ನಾಯಕ ಮಾಡಿರುವ ಉಪಕಾರಗಳ ಪಟ್ಟಿ ಲೆಕ್ಕವಿಡುವುದು ಆಗದ ರೀತಿಯಲ್ಲಿ ಸಹಾಯವನ್ನು ಮಾಡಿದ್ದಾರೆ ಇಂತಹ ವ್ಯಕ್ತಿಯ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ರೂಢಿಸಿಕೊಳ್ಳುವಂತೆ ತಿಳಿಸಿದರು. 

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿಯ ಅಧ್ಯಕ್ಷ ಮಜ್ಗಿ ವೀರೇಶ್ ಮಾತನಾಡಿ ನಾಡು ಕಂಡ ಸರಳ ಸಜ್ಜನಿಕೆಯ ನಟ ಎಂದರೆ ಅದು ಅಪ್ಪು ಎಕೆಂದರೆ ಸರಕಾರಿ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡಿ  ಫೆಸ್ಬುಕ್ ವಾಟ್ಸಪ್‌ಗಳಲ್ಲಿ ಹರಿ ಬಿಟ್ಟು ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುವ ಇಂದಿನ ದಿನಗಳಲ್ಲಿ ಬಡವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಅಪ್ಪು ಇಂದಿಗೂ ಅಜರಾಮರ ಅವರ ಆದರ್ಶಗಳು ನಾವೆಲ್ಲರೂ ಪಾಲಿಸಿದರೆ ಅವರ ಜನ್ಮ ದಿನ ಆಚರಣೆ ಸಾರ್ಥಕವಾಗಲಿದೆ ಎಂದರು. 

ಡಿ.ಉಮೇಶ್, ನೃತ್ಯ ಶಿಕ್ಷಕ ರಿಯಾಜ್, ತೇಜು, ಗುಂಡ, ನಗರದ ನಿವಾಸಿಗಳು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಜಯಸೂರ್ಯ ಮಾಡಿದರು. 


ಸುದ್ದಿ ಓದಿ