ಪ್ರಸಾದ ಸೇವೆಗೆ ಶ್ರೀಶೈಲ ಜಗದ್ಗುರುಗಳ ಮೆಚ್ಚುಗೆ
ತಾಳಿಕೋಟಿ: ಲೋಕಕಲ್ಯಾಣ ಹಾಗೂ ಧರ್ಮ ಜಾಗೃತಿಗಾಗಿ ಯಡೂರದಿಂದ ಶ್ರೀಶೈಲದವರೆಗೆ ಪಾದಯಾತ್ರೆ ನಡೆಸುತ್ತಿರುವ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾಽ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಮ್ಮ ಭಕ್ತಾಧಿಗಳಿಗೆ ಎಬಿಡಿ ಫೌಂಡೇಶನ್ದಿಂದ ಆಯೋಜಿಸಿದ ವಿಶೇಷ ಪ್ರಸಾದ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಳಿಕೋಟಿಯಿಂದ ಹುಣಸಗಿಗೆ ಹೋಗುವ ಮಾರ್ಗಮಧ್ಯ ಬ.ಸಾಲವಾಡಗಿ ಗ್ರಾಮದಲ್ಲಿ ಹಮ್ಮಿಕೊಂಡ ಧರ್ಮಜಾಗೃತಿ ಪಾದಯಾತ್ರೆಯ ಧರ್ಮಸಭೆಯಲ್ಲಿ ಬಾಗವಹಿಸಿದ ಎಲ್ಲ ಭಕ್ತಾಧಿಗಳಿಗೆ ಎಬಿಡಿ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಆನಂದಗೌಡ ದೊಡಮನಿ ಅವರು ವಿಶೇಷ ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದರು. ಇದರ ವಿವರವನ್ನು ಪಡೆದ ಜಗದ್ಗುರುಗಳು ಆನಂದಗೌಡರ ಸಮಾಜಸೇವಾ ಕಾರ್ಯಗಳು ಅದರಲ್ಲೂ ಅನ್ನಪ್ರಸಾದ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಅನುಪಸ್ಥಿತಿಯಲ್ಲಿ ಅವರ ಸಹೋದರ ಸಂತೋಷಗೌಡ ದೊಡಮನಿ ಅವರನ್ನು ವೇದಿಕೆಗೆ ಕರೆದು ಸನ್ಮಾನಿಸಿ ಆಶೀರ್ವಾದ ನೀಡಿದರು.
ಈ ಸಂದರ್ಭದಲ್ಲಿ ಎಬಿಡಿ ಫೌಂಡೇಶನ್ದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.