ಅಗ್ರಿಗೋಲ್ಡ್ ಠೇವಣಿ ವಂಚಿತರಿಗೆ ಪರಿಹಾರ ಒದಗಿಸಲು ಒತ್ತಾಯ
ಬಳ್ಳಾರಿ 15: ಅಗ್ರಿಗೋಲ್ಡ್ ಠೇವಣಿ ವಂಚಿತರಿಗೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿ ದಿ. 15ರಂದು ಅಗ್ರಿಗೋಲ್ಡ್ ಗ್ರಾಹಕರ ಮತ್ತು ಏಜೆಂಟರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಟಿಯುಸಿ ಅಧ್ಯಕ್ಷ ಹೆಚ್.ಎ.ಆದಿಮೂರ್ತಿ, ಅಗ್ರಿಗೋಲ್ಡ್ ಅಗ್ರಿಗೋಲ್ಡ್ ಗ್ರಾಹಕರ ಮತ್ತು ಏಜೆಂಟರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಕೆ.ಗುರುಮೂರ್ತಿ, ಎಐವೈಎಫ್ನ ಕಟ್ಟೇಬಸಪ್ಪ ಮಾತನಾಡುತ್ತಾ, ಅಗ್ರಿಗೋಲ್ಡ್ ಸಂಸ್ಥೆ0ುು ರಾಷ್ಟ್ರದ ಎಂಟು ರಾಜ್ಯಗಳಲ್ಲಿನ ಸರಿ ಸುಮಾರು 32ಲಕ್ಷ ಖಾತೆ0ುುಳ್ಳ ಗ್ರಾಹಕರಿಗೆ 6,385 ಕೋಟಿ ಹಣವನ್ನು ಪಾವತಿಸಬೇಕಿದ್ದು, ಕರ್ನಾಟಕ ರಾಜ್ಯದುದ್ದಗಲಕ್ಕೂ ಸರಿ ಸುಮಾರು 8.5 ಲಕ್ಷದಷ್ಟು ಗ್ರಾಹಕರಿಂದ ಅಂದಾಜು 1,700 ಕೋಟಿ ಹಣ ಠೇವಣಿ0ಾಗಿ ಸಂಗ್ರಹಿಸಿದ ಈ ಸಂಸ್ಥೆ0ುು, ಈ ಎಲ್ಲಾ ಜನಸಾಮಾನ್ಯರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಸರಿಸುಮಾರು 20 ಲಕ್ಷ ಗ್ರಾಹಕರನ್ನು ಹೊಂದಿರುವ ಆಂದ್ರ್ರದೇಶದ ಸರ್ಕಾರವು ಈಗಾಗಲೆ ರೂ. 905 ಕೋಟಿಗಳನ್ನು ಬಿಡುಗಡೆಮಾಡಿ ರೂ. 20,000/-ಕ್ಕಿಂತ ಒಳಗಿರುವ ಠೇವಣಿದಾರರಿಗೆ ಹಂಚಿಕೆ ಮಾಡಿ ಸರಿಸುಮಾರು 10.40 ಲಕ್ಷ ಜನರಿಗೆ ನ್ಯಾಯಒದಗಿಸಿದೆ. ಗ್ರಾಹಕರ ಸಂಖ್ಯೆ ವಿಷಯದಲ್ಲಿ 2ನೇ ಸ್ಥಾನದಲ್ಲಿರುವ ನಮ್ಮ ರಾಜ್ಯದಲ್ಲಿಯ ಸರ್ಕಾರದ ವತಿಯಿಂದ ಕನಿಷ್ಟ ರೂ. 20,000/-ಕ್ಕಿಂತ ಕಡಿಮೆ ಇರುವ ಬಡ ಕೆಳ ಮಧ್ಯಮ ವರ್ಗದ ಗ್ರಾಹಕರಿಗೆ ಘನ ರಾಜ್ಯ ಸರ್ಕಾರವು ಸಹಾಯ ಹಸ್ತ ನೀಡಬೇಕಿದೆ. ನಮ್ಮ ರಾಜ್ಯಕ್ಕೆ ಸಂಬಂದಿಸಿದ ಪ್ರಕರಣವು ಉಡುಪಿ ಜಿಲ್ಲಾ ನ್ಯಾಯಾಲದಲ್ಲಿ ಬಾಕಿಯಿದ್ದು, ವಿಳಂಬವಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಕಳೆದ 6 ವರ್ಷದಿಂದ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ನೊಂದು ಬೆಂದಿರುವ ಬಡ ಗ್ರಾಹಕರಿಗೆ ಮತ್ತು ಏಜೆಂಟರಿಗೆ ಸಹಾಯ ಮಾಡಲು ಆಂಧ್ರದ ಸರ್ಕಾರದ ಮಾದರಿಯಲ್ಲಿ ನಮ್ಮ ರಾಜ್ಯ ಸರ್ಕಾರವು ಮುಂದಾಗಬೇಕಿದೆ ಎಂದರು.
ಈಗಾಗಲೇ ಅಗ್ರಿಗೋಲ್ಡ್ ಕಂಪನಿಯಲ್ಲಿ ಕಟ್ಟಿದ ಕರ್ನಾಟಕ ರಾಜ್ಯದ ಗ್ರಾಹಕರಿಗೆ ಹಣ ಬರುವುದು ವಿಳಂಬವಾಗುವುದೆಂದು ಅಗ್ರಿಗೋಲ್ಡ್ ಏಜೆಂಟರ ಮೇಲೆ ಹಣ ಹಿಂದಿರುಗಿಸಿ ಕೊಡಿ ಎಂದು ಕಿರುಕುಳ, ಹಲ್ಲೆಗಳು ನಡೆಯುತ್ತಿವೆ. ಈ ಕಿರುಕುಳ ತಾಳಲಾರದೇ ಈಗಾಗಲೇ ಕರ್ನಾಟಕದಲ್ಲಿ ಸುಮಾರು 100ಕ್ಕೂ ಹೆಚ್ಚು ಏಜೆಂಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿಯೂ 25,000ಕ್ಕೂ ಹೆಚ್ಚು ಖಾತೆಗಳಿದ್ದು, 80 ಕೋಟಿಗೂ ಅಧಿಕ ಹಣ ಪಾವತಿ ಮಾಡಬೇಕಾಗಿರುತ್ತದೆ. ಅದಕ್ಕಾಗಿ ಇದೀಗ ನಮಗೂ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಆದಕಾರಣ ನೆರೆಯ ಅಂಧ್ರ ಸರ್ಕಾರವೇ ಅಲ್ಲಿನ 10.40 ಲಕ್ಷ ಅಗ್ರಿಗೋಲ್ಡ್ ಗ್ರಾಹಕರಿಗೆ ಹಣ ಪಾವತಿ ಮಾಡಿರುತ್ತದೆ. ಇದೇರೀತಿ ಕರ್ನಾಟಕ ಸರ್ಕಾರವೂ ಸಣ್ಣ ಸಣ್ಣ ಮೊತ್ತವಿರುವ ಗ್ರಾಹಕರಿಗೆ ಹಣ ಪಾವತಿ ಮಾಡಲು ಮುಂದಾದಾಗ ಮಾತ್ರ ಏಜೆಂಟರ ಮೇಲೆ ನಡೆಯುವ ಹಲ್ಲೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ತಾವು ಜನಪರ ಕಾಳಜಿಯಳ್ಳವರಾಗಿದ್ದು ನೊಂದ ಅಗ್ರಿಗೋಲ್ಡ್ ಕಂಪನಿ ವಂಚಿತರಿಗೆ ಸಹಾಯ ಮಾಡುವಂತೆ ತಮ್ಮಲ್ಲಿ ನಾವು ಬೇಡಿಕೊಳ್ಳುತ್ತಿದ್ದೇವೆ. ತಮ್ಮ ಈ ಸಹಾಯಕ್ಕೆ ರಾಜ್ಯದಲ್ಲಿರುವ ಸರಿಸುಮಾರು 8.5 ಲಕ್ಷ ವಂಚಿತ ಬಡ ಗ್ರಾಹಕರ ಕುಟುಂಬಗಳು ಚಿರಋಣಿಯಾಗಿರುತ್ತವೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈರಣ್ಣ, ಶೇಷಗಿರಿರಾವ್, ಕೃಷ್ಣಮೂರ್ತಿ, ವಿ.ಮುದುಕಪ್ಪ, ಉಮಾ ಮಹೇಶ್ವರ, ಸುಮಂಗಳಮ್ಮ, ನಾಗವೇಣಿ, ಆರುಣಶ್ರೀ ಹೊಸಪೇಟೆ, ನಾಗಲಕ್ಷ್ಮಿ, ಜ್ಯೋತಿ, ರಾಜಶೇಖರ, ಸೋಮಶೇಖರ, ಆನಂದ ಮುಂತಾದವರು ಉಪಸ್ಥಿತರಿದ್ದರು.