ಬಳ್ಳಾರಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ .,

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ  .,

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 05: ಕರ್ನಾಟಕ ರಾಜ್ಯ  ಗ್ರಾಮೀಣ/ನಗರ ಅಂಗವಿಕಲರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ತಾಲೂಕು ಸಂಚಾಲನ ಸಮಿತಿಯು ಪುನರ್ವಸತಿ ಕಾರ್ಯಕರ್ತರಿಗೆ ಕಳೆದ ನಾಲ್ಕು ತಿಂಗಳಿಂದ ನೀಡದ ಗೌರವ ಧನವನ್ನು ಕೂಡಲೇ ಬಿಡುಗಡೆಗೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಿದರು. 


ಈ ಸಂದರ್ಭದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಉಸ್ಮಾನ್ ಬಾಷ ಮಾತನಾಡಿ ಕಳೆದ ನಾಲ್ಕು ತಿಂಗಳಿಂದ ಗೌರವ ಧನ ನೀಡದಿರುವುದು ಸಮಂಜಸವಲ್ಲ, ಬಾಳ ಬಂಡಿ ತಳ್ಳುವಲ್ಲಿ ಈ  ಗೌರವಧನವೇ ಆಧಾರವಾಗಿದೆ ಅಂತಹದರಲ್ಲಿ ನಾಲ್ಕು ತಿಂಗಳಿಂದ ಗೌರಧನ ದೊರೆಯದೆ , ಕರೋನಾ ಹಾವಳಿಗೆ ಸಿಲುಕಿ ಬದುಕು ದುಸ್ತರವಾಗಿದೆ.ಯಾವುದೇ ಸರಕಾರದ ಸಹಾಯವಿಲ್ಲದಿರುವುದು ಜೀವನವನ್ನು ಇನ್ನಷ್ಟು ಅಳಿವಿನಂಚಿಗೆ ತಳ್ಳುವಂತಾಗಿದೆ ಇದರ ಮದ್ಯೆ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವುದು ಬರೆಯ ಮೇಲೆ ಎಳೆದಂತಾಗುತ್ತಿದೆ ಹಾಗಾಗಿ ಕೂಡಲೇ ಸಂಭಂಧಿಸಿದ ಅಧಿಕಾರಿಗಳು ಗೌರವಧನವನ್ನು ನೀಡಿ ಪುನರ್ವಸತಿ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಪಂಚಾಯತಿಯ ವ್ಯವಸ್ಥಾಪಕ ಬಿ.ವಿ.ರಮೇಶ ಅವರಿಗೆ ಮನವಿ ನೀಡಿದರು. 

ಈ ಸಂಧರ್ಭದಲ್ಲಿ ಪುನರ್ವಸತಿ ಕಾರ್ಯಕರ್ತರಾದ ಪಿ.ಭೀಮಪ್ಪ, ಯು.ಪಕ್ಕೀರ​‍್ಪ, ಬಿ.ಹನುಮಂತಪ್ಪ, ಬಿ.ಕವಿತ,ನಗರ ಪುನರ್ವಸತಿಯ ಜಿ.ಎಂ.ಉಮಾಪತಿ, ವಿವಿಧ್ಧೋದೇಶ ಪುನರ್ವಸತಿಯ  ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ