ಸೂಕ್ತ ಫಲಾನುಭವಿಗಳಿಗೆ ಮನೆ ಸಿಗುವಂತೆ ಒತ್ತಾಯಿಸಿ ಮನವಿ
ಶಿಗ್ಗಾವಿ 09: ತಾಲೂಕಿನ ತಡಸ ಗ್ರಾಮದ ವ್ಯಾಪ್ತಿಯಲ್ಲಿ 2021-2022ರಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಾನೂನು ಬಾಹಿರವಾಗಿ ಕೃತ್ಯಗಳಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಗಳ ಇದ್ದರು ಅವರ ವಿರುದ್ಧ ಸುಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ತಾಲೂಕ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಂತೋಷಗೌಡ ಪಾಟೀಲ ನೇತೃತ್ವದಲ್ಲಿ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಅವರು ನಿರಂತರವಾಗಿ ಸುರಿದ ಮಳೆಯಿಂದ ತಡಸ ಗ್ರಾಮದಲ್ಲಿ ಹಲವಾರು ಮನೆಗಳು ಬಿದ್ದಿವೆ ಆದರೆ ಸಂಬಧ ಪಟ್ಟ ಅಧಿಕಾರಿಗಳು ಸರಿಯಾದ ಆಯ್ಕೆಯ ಪ್ರಕ್ರಿಯ ಮಾಡದೆ ಮತ್ತು ಸರಕಾರದ ನಿಯಮಾವಳಿಗಳನ್ನು ಅನುಸರಿಸದೆ ಗಾಳಿಗೆ ತೂರಿ ಅನರ್ಹ ಪಲಾನುಭವಿಗಳು ಮತ್ತು ಈ ಹಿಂದೆ ಪರಿಹಾರದ ಹಣ ಮಂಜುರಾದ ಆಸ್ತಿಗಳಿಗೆ ಪುನಃ ಆಯ್ಕೆ ಮಾಡಿರುವದು ಕಂಡು ಬಂದಿದೆ. ಮತ್ತು ಕಾಲಿ ಇರುವ ಆಸ್ತಿಗಳಿಗೆ ಮತ್ತು ಈ ಮೊದಲೆ ಪಾಳು ಬಿದ್ದಿರುವ ಮನೆಗಳಿಗೆ ಮತ್ತು ವಾಸವಿರದ ಮನೆಗಳಿಗೆ ಈ ಹಿಂದೆ ಮಂಜುರಾದ ಆಸ್ತಿಗಳಿಗೆ ಮನೆಬಿದ್ದ ಪರಿಹಾರವನ್ನು ಬೆಕಾಬಿಟ್ಟಿ ಹಂಚಿಕೆ ಮಾಡಲಾಗಿದೆ. ಈ ಕೃತ್ಯದಿಂದ ಅರ್ಹ ಪಲಾನುಭವಿಗಳಿಗೆ ಸೌಲಭ್ಯದಿಂದ ವಚಿಂತರಾಗುವಂತೆ ಮಾಡಿದೆ,ಅಲ್ಲೆ ಇಗಾಗಲೆ ಬೀಳದೆ ಇರುವ ಮನೆಗಳಿಗೆ ಪರಿಹಾರವನ್ನು ಸಹ ನೀಡಲಾಗಿದೆ.
ಅನರ್ಹ ಪಲಾನುಭವಿಗಳ ಆಸ್ತಿಗಳನ್ನು ಶಿಘ್ರವಾಗಿ ಸ್ಥಾನಿಕವಾಗಿ ಅವಲೋಕಿಸುವದು ಜೊತೆಗೆ ಅನರ್ಹ ಪಲಾನುಭವಿಗಳ ಆಯ್ಕೆಯ ಪ್ರಕ್ರಿಯಲ್ಲಿ ಸಹಕರಿಸಿದ ಎಲ್ಲಾ ತಪ್ಪಿತಸ್ಥ ವ್ಯಕ್ತಿಗಳಿಗೆ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು. ಮಂಜುರಾದ ಹಣವನ್ನು ಸರಕಾರಕ್ಕೆ ಬರಾಯಿಸಿಕೊಂಡು ಅವರ ವಿರುದ್ದ ಯೋಗ್ಯ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಇನ್ನು ಊಗ್ರ ಸ್ವರೂಪದ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಕೈಗೊಳ್ಳಲಾಗುವುದು ಇದರಿಂದ ಆಗುವ ಎಲ್ಲ ರೀತಿಯ ಅನಾಹುತಗಳಿಗೆ ತಾವುಗಳೆ ಜವಾಬ್ದಾರರಾಗಿರುತ್ತಿರಿ ಎಂದರು.
ಈ ಸಂದರ್ಭದಲ್ಲಿ ಶಂಕರ ಬಡಿಗೇರ, ಈರಣ್ಣ ಸಮ್ಮಗೊಂಡ, ಆಸೀಮ ಕಲಘಟಗಿ, ಮಂಜುನಾಥ ಬಡಿಗೇರ, ಗೌಸ ಜವಳಿ, ರಜಾಕ ಮಕಾನದಾರ, ಗಂಗಾಧರ ಬೆಂಡಲಗಟ್ಟಿ, ನಾಗಪ್ಪ ಚವ್ಹಾಣ, ಅಶೋಕ ಶಿಗ್ಗಟ್ಟಿ, ಚಂದ್ರ್ಪ ಶಿಗ್ಗಟ್ಟಿ ಉಪಸ್ಥಿತರಿದ್ದರು.