ಬಳ್ಳಾರಿ

ಕಬ್ಬಿಣ, ವಿದ್ಯುತ್ ಸ್ಥಾವರ ಸ್ಥಾಪಿಸಲು ಸರ್ಕಾರಕ್ಕೆ ವಿವಿಧ ಸಂಘ ಸಂಸ್ಥೆಗಳಿಂದ ಮನವಿ

ಕಬ್ಬಿಣ, ವಿದ್ಯುತ್ ಸ್ಥಾವರ ಸ್ಥಾಪಿಸಲು ಸರ್ಕಾರಕ್ಕೆ ವಿವಿಧ ಸಂಘ ಸಂಸ್ಥೆಗಳಿಂದ ಮನವಿ


ಬಳ್ಳಾರಿ 30: ಕರ್ನಾಟಕ ರಾಜ್ಯ ರೈತ ಸಂಘ ಬಳ್ಳಾರಿ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿಪತ್ರವನ್ನು ಸಲ್ಲಿಸಿ ಮೇಽಽ ರಿಸೋರ್ಸಸ್ ಪೆಲೆಟ್ಸ್‌ ಕಾನ್ನಂಟ್ರೇಟ್ಸ್‌ ಪ್ರೈ, ಲಿ., ಕಂಪನಿಯು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸೋಮಲಾಪುರ ಗ್ರಾಮದ ಹತಿರ 117 ಎಕರೆ ಪ್ರದೇಶದಲ್ಲಿ 3.2 ಎಂ.ಟಿ.ಪಿ.ಎ ಸಾಮರ್ಥ್ಯದ ಪೆಲೆಟ್ಸ್‌ ಪ್ಲಾಂಟ್ ಮತ್ತು 3.6 ಎಂ.ಟಿ.ಪಿ.ಎ ಪೆಲೆಟ್ಸ್‌ ಕಮ್ ಬೆನಿಫಿಸಿಯೇಷನ್ ಪ್ಲಾಂಟ್ ಸ್ಥಾಪಿಸಲು ಯೋಜಿಸಿರುತ್ತಾರೆ. ಈ ಸ್ಥಾವರನ್ನು ಸ್ಥಾಪಿಸಲು ನಮ್ಮ ಸಂಘಟನೆಯು ಸಂಪೂರ್ಣವಾಗಿ ಒಪ್ಪಿಕೊಂಡಿರುತ್ತವೆ ಎಂದು ರಾಜ್ಯ ರೈತ ಸಂಘದ ಮುಖಂಡರುಗಳು ಹೇಳಿದರು.  


ಕೋರೋನಾ ಸಾಂಕ್ರಾಮಿಕ ರೋಗವು ಎರಡು ಮೂರು ಅಲೆಗಳಲ್ಲಿ ಜನ ಜೀವನದ ಮೇಲೆ ಅಪ್ಪಳಿಸಿ ಜನಜೀವನವನ್ನು ದುಸ್ತರಗೊಳಿಸಿ ಜೀವನ ನಡೆಸಲು ಸಂಕಷ್ಟ ತಂದೊಡ್ಡಿದೆ. ಇದರಿಂದ ಜನರ ಆರ್ಥಿಕ ಮಟ್ಟವು ಕುಸಿದು ಹಸಿವು ಬಡತನಕ್ಕೆ ದೂಡಿದೆ. ಆದ್ದರಿಂದ ಇಂತ ಕೈಗಾರಿಕೆಗಳನ್ನು ಆರಂಭಿಸಿದಲ್ಲಿ ಜನರಿಗೆ ಇತರೆ ಕಾರ್ಮಿಕರಿಗೆ ದಿನಗೂಲಿ ಕೆಲಸಗಾರರಿಗೆ ಉದ್ಯೋಗ ದೊರೆತು ಆರ್ಥಿಕವಾಗಿ ಸ್ವಲ್ಪ ನಿರಾಳರಾಗುತ್ತಾರೆಂಬ ಕಾರಣದಿಂದ ನಮ್ಮ ಸಂಘ ಮತ್ತು ಇತರೆ ಹದಿನೇಳು ಸಂಘಟನೆಗಳು ಸೇರಿ ಸ್ಥಾವರವನ್ನು ಸ್ಥಾಪಿಸಲು ನಮ್ಮ ಯಾವುದೇ ಅಭ್ಯಂತರ ಇಲ್ಲವೆಂದು ಸದರಿ ಮೇಲ್ಕಂಡ ಕಂಪನಿಗೆ ಸಂಪೂರ್ಣ ನಮ್ಮ ಒಪ್ಪಿಗೆ ಇರುತ್ತದೆ ಸರ್ಕಾರ ಶೀಘ್ರವಾಗಿ ಇದಕ್ಕೆ ಅನುಮೋದನೆ ನೀಡಬೇಕೆಂದು ಮನವಿಯನ್ನು ಸಲ್ಲಿಸಿದರು.   

ವಿವಿಧ ಸಂಘಗಳ ಸಂಸ್ಥೆಗಳ ನೇತೃತ್ವವಹಿಸಿದ್ದ ಪಿ ರಾಜು, ಎಂ ಶಿವಲಿಂಗಪ್ಪ, ಸತೀಶ್, ಆನಂದ್, ಸಿದ್ದಪ್ಪಚೌವ್ಹಾಣ್, ಕಾಡಪ್ಪ, ಉಜ್ಜೀನಯ್ಯ, ಧರ್ಮನಾಯಕ್ ಸೇರಿದಂತೆ ನೂರಾರು ಜನರಿದ್ದರು. 


ಸುದ್ದಿ ಓದಿ