ಬಳ್ಳಾರಿ

ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಮನವಿ

ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಮನವಿ

ಲೋಕದರ್ಶನ ವರದಿ 

ಬಳ್ಳಾರಿ 29: ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಬಿ.ಎಸ್‌.ಯಡಿಯೂರ​‍್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆಯಿಂದಾಗಿ ಯಡಿಯೂರ​‍್ಪರನ್ನು ಸಿಎಂ ಸ್ಥಾನದಿಂದ ಇಳಿಸಿ ನೂತನವಾಗಿ ಬಸವರಾಜ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಗಳಾಗಿ ಬುಧವಾರವಷ್ಟೇ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಸಿಎಂ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಕುರುಬ ಸಮುದಾಯಕ್ಕೂ ಪ್ರಾಶಸ್ತ್ಯ ನೀಡಬೇಕು. ರಾಜ್ಯದಲ್ಲಿ ಕುರುಬ ಸಮುದಾಯದವೂ ದೊಡ್ಡ ಸಮುದಾಯವಾಗಿದೆ. ಕುರುಬ ಸಮುದಾಯದ ಕೆ.ಎಸ್‌.ಈಶ್ವರ​‍್ಪ ಅವರು ಸಹ ಮಾಜಿ ಸಿಎಂ ಯಡಿಯೂರ​‍್ಪ ಅವರೊಂದಿಗೆ ಬಿಜೆಪಿ ಪಕ್ಷವನ್ನು ಬಲಪಡಿಸುವಲ್ಲಿ ಶ್ರಮಿಸಿದ್ದಾರೆ. ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಈಶ್ವರ​‍್ಪನವರು ಪಕ್ಷವನ್ನು ಎಂದೂ ಬಿಟ್ಟಿಲ್ಲ. ಕೆಲವರು ಪಕ್ಷದಿಂದ ಹೊರಬಂದು ಹೊಸ ಪಕ್ಷ ಕಟ್ಟಿ ವಾಪಸ್ ಬಂದರು. ಇನ್ನು ಕೆಲವರು ಬೇರೆ ಪಕ್ಷ ಸೇರಿ ವಾಪಸ್ ಬಿಜೆಪಿಗೆ ಬಂದರೂ, ಈಶ್ವರ​‍್ಪನವರು ಮಾತ್ರ ಮಾತೃಪಕ್ಷಕ್ಕೆ ಎಂದೂ ದ್ರೋಹ ಬಗೆದಿಲ್ಲ. ಪಕ್ಷವನ್ನು ನಂಬಿಕೊಂಡಿರುವುದರಿಂದ ಬೇರೆ ಪಕ್ಷದ ಕದ ತಟ್ಟದೆ ಸುಮಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲೇ ಉಳಿಯುವ ಮೂಲಕ ಪಕ್ಷ ನಿಷ್ಠೆಯನ್ನು ಮೆರೆದಿದ್ದಾರೆ. ಹಾಗಾಗಿ ಈಶ್ವರ​‍್ಪನವರನ್ನು ಉಪ-ಮುಖ್ಯಮಂತ್ರಿಗಳನ್ನಾಗಿ ಹಾಗೂ ನೂತನ ಸಚಿವ ಸಂಪುಟದಲ್ಲಿ ಕುರುಬ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಸಮುದಾಯಕ್ಕೆ ಐದು ಸಚಿವ ಸ್ಥಾನಗಳನ್ನು ನೀಡಬೇಕು ಎಂಬುದು ಸಂಘದ ಒತ್ತಾಯವಾಗಿದೆ. 


ಸುದ್ದಿ ಓದಿ