ನಗರಾಭಿವೃದ್ಧಿಗೆ ಸಹಕರಿಸುವಂತೆ ಮನವಿ
ಬಳ್ಳಾರಿ 13: ನಗರವನ್ನು ಸಮಗ್ರವಾಗಿ ಅಭಿವೃಧ್ಧಿಪಡಿಸುವಂತೆ ಹಾಗೂ ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರಗಳನ್ನು ಕಡಿಮೆ ಮಾಡುವಂತೆ ಯುವಸೇನ ಸೊಶಿಯಲ್ ಆ್ಯಕ್ಷನ್ ಕ್ಲಬ್ ಮನವಿ ಮಾಡಿದೆ. ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಆಯುಕ್ತರಿಗೆ ಸಂಘದ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ನಗರವು ಈ ಹಿಂದಿನ ಪಾಲಿಕೆಯ ಯಾವ ಆಯುಕ್ತರುಗಳಿಂದ ಅಭಿವೃದ್ಧಿ ಹೊಂದಿರುವುದಿಲ್ಲ. ಬಳ್ಳಾರಿ ನಗರದಲ್ಲಿ ವಿದ್ಯುತ್ ದೀಪಗಳು ಹಳೆ ಪದ್ದತಿಯ ಮಕ್ರ್ಯೂರಿ ಬಲ್ಬ್ಗಳು / ದೀಪಗಳು ಇವೆ. ಕಳೆದ ನಾಲ್ಕು ವರ್ಷಗಳಿಂದ ವಿದ್ಯುತ್ ದೀಪಗಳನ್ನು ಸೋಡಿಯಂ ಬಲ್ಬ್ಗಳನ್ನು ಹಾಕುವಂತೆ ಸಾಕಷ್ಟು ಸಲ ಮನವಿ ಮಾಡಿಕೊಂಡಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಸ್ಪಂಧನೆ ನೀಡಿಲ್ಲ.
ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಾಮುಖ್ಯತೆ ನೀಡಿ ಇದರ ಜೊತೆಗೆ ಒಳಚರಂಡಿ ಮತ್ತು ರಸ್ತೆಗಳು ಮುಂತಾದ ಎಲ್ಲಾ ವಿಷಯಗಳಲ್ಲಿ ಅಭಿವೃಧ್ಧಿಪಡಿಸುವಂತೆ ಹಾಗೂ ಕಂದಾಯ ಇಲಾಖೆಯಲ್ಲಿ ಫಾರಂ-2 ನೀಡುವುದರಲ್ಲಿ ವಿಳಂಬವಾಗುತ್ತಿದೆ. ಇದರಿಂದ ಪಾಲಿಕೆಯಲ್ಲಿ ಭ್ರಷ್ಟಚಾರವು ಜಾಸ್ತಿಯಾಗುತ್ತಿದೆ.
ನಗರವನ್ನು ಅಭಿವೃಧ್ಧಿ ಮಾಡುವುದರಲ್ಲಿ ಪ್ರಾಮುಖ್ಯತೆ ನೀಡುವಂತೆ ಹಾಗೂ ಪಾಲಿಕೆಯಲ್ಲಿ ನಡಯುತ್ತಿರುವ ಭ್ರಷ್ಟಚಾರವನ್ನು ನಿರ್ಮೂಲನೆ ಮಾಡುವಂತೆ ಈ ಮೂಲಕ ತಮ್ಮಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಮೇಕಲ ಈಶ್ವರರೆಡ್ಡಿ ಸಾಮಾಜಿಕ ಕಾರ್ಯಕರ್ತರು ಮತ್ತು ಯುವಸೇನ ಸೊಶಿಯಲ್ ಆ್ಯಕ್ಷನ್ ಕ್ಲಬ್ ಅಧ್ಯಕ್ಷರು ಕಾರ್ಯಕರ್ತರಾದ ಎಸ್.ಕೃಷ್ಣ, ಜಿ.ಎಂ. ಭಾಷ, ಅಲುವೇಲ್ ಸುರೇಶ್, ಸಲಾವುದ್ದೀನ್.ಎಸ್.ಆರ್. ಎಂ.ಕೆ.ಜಗನ್ನಾಥ, ಪಿ.ನಾರಾಯಣ, ಶಿವಾನಂದ, ಕೆ.ವೆಂಕಟೇಶ, ತೇಜುಪಾಟೀಲ್, ಎಂ. ಅಭಿಷೇಕ್ ಮತ್ತು ಇತರರು ಇದ್ದರು