ಚರಂಡಿ ಸ್ವಚ್ಛಗೊಳಿಸುವಂತೆ ಮನವಿ
ಹಗರಿಬೊಮ್ಮನಹಳ್ಳಿ 25: ತಾಲೂಕಿನ ಉಪನಾಯಕನ ಹಳ್ಳಿಯ ಬೊಮ್ಮ ಸಮುದ್ರ ವಾರ್ಡ್ನಲ್ಲಿನ ಚರಂಡಿಯನ್ನು ಸ್ವಚ್ಛಗೊಳಿಸುವಂತೆ ಕರ್ನಾಟಕ ರಕ್ಷಣಾ ಸೇನೆಯ ಗ್ರಾಮ ಘಟಕವು ಪಂಚಾಯತಿ ಅಭಿವೃಧ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷ ಎಂ.ದುಡ್ಡಬಸಪ್ಪ ಮಾತನಾಡಿ ಗ್ರಾಮದ ಬೊಮ್ಮ ಸಮುದ್ರ ಒಣಿಯಲ್ಲಿನ ಚರಂಡಿಯು ಕೊಳಚೆ ನೀರಿನಿಂದ ತುಂಬಿದ್ದು ದುರ್ವಾಸನೆ ಬೀರುತ್ತಿದೆ, ಸದ್ಯ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಇತ್ತ ಚಿತ್ತ ಹರಿಸಿ ಕೂಡಲೇ ಚರಂಡಿಯ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ತಿಳಿಸಿದರು.
ಈ ಸಂಧರ್ಭಧಲ್ಲಿ ಕರಸೇ ತಾಲೂಕಾಧ್ಯಕ್ಷ ಶಿವುಕುಮಾರ,ಕಾರ್ಯದರ್ಶಿ ವಿಶ್ವನಾಥ್, ಬಿ.ಬಸವರಜ್,ಹಾಲೇಶ್,ರಮೇಶ್,ಮಂಜುನಾಥ್ ಸ್ವಾಮಿ, ಅಂಬರೀಶ್ ಸೇರಿದಂತೆ ಕರಸೇ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.