ಕಂಪ್ಲಿ ತಾಲೂಕನ್ನು ಬಳ್ಳಾರಿ ಜಿಲ್ಲೆಯಲ್ಲಿಯೇ ಉಳಿಸಿ ತಹಸೀಲ್ದಾರಗೆ ಮನವಿ
ಲೋಕದರ್ಶನ ವರದಿ
ಕಂಪ್ಲಿ 31: ಕಂಪ್ಲಿ ತಾಲೂಕನ್ನು ಬಳ್ಳಾರಿ ಜಿಲ್ಲೆಯಲ್ಲಿಯೇ ಉಳಿಸಬೇಕು ಎಂದು ಎಮ್ಮಿಗನೂರು ಹಿತರಕ್ಷಣಾ ಹೋರಾಟ ಸಮಿತಿ ಮುಖಂಡರು ತಹಸೀಲ್ದಾರ್ ಗೌಸಿಯಾಬೇಗಂ ಅವರಿಗೆ ಮಂಗಳವಾರ ಮನವಿ ಪತ್ರಸಲ್ಲಿಸಿ, ನಂತರ ಬೇರಿ್ಗ ಮಹೇಶಗೌಡ ಮಾತನಾಡಿ ಎಮ್ಮಿಗನೂರಿನ ಗ್ರಾಮಸ್ಥರ ಗಮನಕ್ಕೆ ತಾರದೆ, ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸಲು, ಕಂಪ್ಲಿಯ ಹೋರಾಟ ಸಮಿತಿಯು ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದು ಎಮ್ಮಿಗನೂರು ಗ್ರಾಮಸ್ಥರಿಗೆ ಅಸಮಾಧಾನ ತಂದಿದೆ. ಎಮ್ಮಿಗನೂರು ಗ್ರಾಮಾಡಳಿತದ ಸರ್ವ ಸದಸ್ಯರು ಹಾಗೂ ಎಮ್ಮಿಗನೂರು ಹಿತರಕ್ಷಣಾ ಹೋರಾಟ ಸಮಿತಿಯವರು ಪೂರ್ವಭಾವಿ ಸಭೆ ನಡೆಸಿ, ಕಂಪ್ಲಿ ತಾಲೂಕನ್ನು ಬಳ್ಳಾರಿ ಜಿಲ್ಲೆಯಲ್ಲಿಯೇ ಉಳಿಸುವಈ ಹಿನ್ನಲೆಯಲ್ಲಿ ಕಂಪ್ಲಿ ತಾಲೂಕು ಬಳ್ಳಾರಿ ಜಿಲ್ಲೆಯಲ್ಲಿಯೇ ಯಥಾಸ್ಥಿತಿ ಮುಂದುವರೆಯಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವಲ್ಲಿ ಹೋರಾಟ ಸಮಿತಿ ಸದಸ್ಯರಾದ ಜಿ.ನಾಗರೆಡ್ಡಿ, ಎನ್.ಸೂಗಪ್ಪ, ಎಚ್.ಜಡೆಪ್ಪ, ಆದಿಮನೆ ಜಡೆಪ್ಪ, ಖಾಸಿಂಸಾಬ್, ಎಸ್.ರಾಮಪ್ಪ ಎಚ್.ರಾಮಾಂಜಿನಿ, ಎಂ.ಇಮಾಂಸಾಬ್, ಎಚ್.ಎಂ.ಜಡೆಸ್ವಾಮಿ, ಬಿ.ಮಲ್ಲಿಕಾರ್ಜುನ, ಮಹಾಬಲಿ ಸೇರಿ ಇತರರಿದ್ದರು.