ರೈತರ ಬೆಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ತಹಶೀಲ್ದಾರಗೆ ಮನವಿ
ತಾಳಿಕೋಟಿ 28: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹತ್ತಿರ ಇರುವ ಸೋಲಾದ ಕಂಪನಿಯವರು ರೈತರಿಂದ ಪಡೆದುಕೊಂಡು ಜಮೀನುಗಳಲ್ಲಿ ತಡಗೋಡೆ(ಕಂಪೌಂಡ್) ನಿಮರ್ಿಸಿದ್ದು ಇದರಿಂದ ಮಳೆನೀರು ಹರಿದುಹೋಗದೆ ಅಲ್ಲಿಯೇ ಸಂಗ್ರಹವಾಗಿ ಜಲಾವೃತಗೊಂಡಿರುವುದರಿಂದ ಸುತ್ತಮುತ್ತಲಿನ ಜಮೀನುಗಳು ನೀರು ಬಸಿದು ಅಪಾರ ಪ್ರಮಾಣದ ಬೆಳೆಗಳು ನಾಶವಾಗುತ್ತಿವೆ. ಇದಕ್ಕೆ ಕಂಪನಿಯು ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸಂತ್ರಸ್ತ ರೈತರು ತಹಶೀಲ್ದಾರ ಶ್ರೀಧರ ಗೋಟೂರ ಅವರಿಗೆ ಮನವಿ ಸಲ್ಲಿಸಿದರು. ಸೋಲಾರ ಕಂಪನಿಯವರು ತಾಳಿಕೋಟಿ ಹಾಗೂ ಬೊಮ್ಮನಹಳ್ಳಿ ಗ್ರಾಮದ ರೈತರಿಂದ ಸುಮಾರು 280 ಎಕರೆ ಜಮೀನನ್ನು ಲೀಜ್ ಮೇಲೆ ಪಡೆದುಕೊಂಡು ಸುತ್ತಮುತ್ತಲಿನ ರೈತರ ಸಮ್ಮತಿ ಪಡೆಯದೆ ಕೆಲವು ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ಸವರ್ೇ ಮಾಡಿಸಿ ಸುತ್ತಲೂ ಕಂಪೌಂಡ್ ಹಾಕಿಸಿದ್ದಾರೆ. ಕಂಪನಿಗೆ ಸಂಬಂಧಿಸಿದ ಜಮೀನುಗಳಲ್ಲಿ ಕನಿಷ್ಟ 2 ಮೀಟರ್ ಎತ್ತರದವರೆಗೆ ಹುಲ್ಲು ಬೆಳೆದಿರುವದರಿಂದ ನೀರು ಮುುಂದೆ ಸಾಗಲು ಅವಕಾಶವಿಲ್ಲದೆ ಅಲ್ಲಿಯೇ ಜಲಾವೃತಗೊಂಡು ಬೆಳೆಗಳು ಹಾಳಾಗುತ್ತಿದೆ ಹಾಗು ಜಮೀನುಗಳಲ್ಲಿ ಬಿತ್ತಲು ಸಾಧ್ಯವಾಗುತ್ತಿಲ್ಲ ಮತ್ತು ಜಮೀನುಗಳಿಗೆ ಹೋಗಲು ರಸ್ತೆಯು ಇಲ್ಲದಂತಾಗಿದೆ. ಇದರಿಂದ ರೈತರಿಗೆ ಅಪಾರ ಹಾನಿಯಾಗಿತ್ತಿದೆ ಕಾರಣ ಕಂಪನಿಯವರು ನಮಗೆ ಎಕರೆಗೆ ಕನಿಷ್ಟ ರೂ 20,000 ಸಾವಿರ ಪರಿಹಾರ ನೀಡಬೆಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಮಯದಲ್ಲಿ ರೈತರಾದ ಶಾಂತಪ್ಪ ದೋರ್ನಳ್ಳಿ, ಯಂದಣ್ಣ ದೋರ್ನಳ್ಳಿ, ರಮೇಶ ಮಸರಕಲ್ಲ, ಖಾಸಿಮ್ಸಾಬ ಅವಟಿ, ಈರಪ್ಪ ಆದವಾನಿ, ಯಂಕಣ್ಣ ಮಸರಕಲ್ಲ, ಹರಿಶ್ಚಂದ್ರ ಮಸರಕಲ್ಲ, ಮಲ್ಲಣ್ಣ ದೋರನಹಳ್ಳಿ, ಮಾಳಪ್ಪ ಪೂಗಣಗೇರಿ, ಶರಣಪ್ಪ ದೋರನಹಳ್ಳಿ, ಶಿವಣ್ಣ ಮಸರಕಲ್ಲ, ಎಸ್ ಎಸ್ ಮಸರಕಲ್ಲ, ಆರ್ ಎಸ್ ಮಸರಕಲ್ಲ ಇದ್ದರು.
ತಾಳಿಕೊಟಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಹತ್ತಿರ ಇರುವ ಸೋಲಾರ ಕಂಪನಿಯವರ ತಪ್ಪಿನಿಂದಾಗಿ ಸುತ್ತ ಮುತ್ತಲಿರುವ ರೈತರ ಜಮೀನಿನಲ್ಲಿರುವ ಬೆಳೆಗಳಿಗೆ ಅಪಾರ ಹಾನಿಯಾಗಿದ್ದು ಕಂಪನಿಯವರು ಪ್ರತಿ ಎಕರೆಗೆ 20 ಸಾವಿರ ಪರಿಹಾರ ನಿಡಬೆಕೆಂದು ಒತ್ತಾಯಿಸಿ ತಾಳಿಕೋಟಿ ತಹಶೀಲ್ದಾರ ಶ್ರೀಧರ ಗೋಟೂರ ಅವರಿಗೆ ಮನವಿಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಶಾಂತಪ್ಪ ದೋರನಹಳ್ಳಿ, ರಮೇಶ ಮಸರಕಲ್ಲ, ಖಾಸಿಮಸಾಬ ಅವಟಿ, ಈರಪ್ಪ ಆದವಾನಿ, ಯಂಕಣ್ಣ ದೋರನಹಳ್ಳಿ ಇದ್ದರು.