ಬಳ್ಳಾರಿ

ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಮೀರ್ ಅಹಮದ್ ಖಾನ್ ಅವರಿಗೆ ಮನವಿ

ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಮೀರ್ ಅಹಮದ್ ಖಾನ್ ಅವರಿಗೆ ಮನವಿ

ಲೋಕದರ್ಶನ ವರದಿ

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಬರುವ ಕಾರಿಗನೂರಿನ ಗಣಿ ಪ್ರದೇಶದಲ್ಲಿರುವ ಶಿಕಾರಿ ಕಾಲೋನಿಯ ಎಸ್.ಟಿ. ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯದ 43 ಕುಟುಂಬಗಳ ಫಲಾನುಭವಿಗಳಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃಧ್ದಿ ನಿಗಮ ನಿಯಮಿತ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವಸತಿ ಇಲಾಖೆ ಯಿಂದ ದಿನಾಂಕ : 09.10.2022 ರಂದು ಮನೆ ಮಂಜೂರಾತಿ ಮತ್ತು ಕಾಮಗಾರಿ ಮಾಡಲು ಆದೇಶ ಪತ್ರಗಳನ್ನು ವಿತರಿಸಲಾಗಿದೆ. ಸುಮಾರು ಒಂದು ವರ್ಷ ಕಳೆದರೂ ಫಲಾನುಭವಿಗಳಿಗೆ ವಸತಿ ಇಲಾಖೆಯಿಂದ ಬ್ಯಾಂಕ್ ಖಾತೆಗೆ ಬಿಡಿಕಾಸು ಬಂದಿರುವುದಿಲ್ಲ. ಹಕ್ಕಿಪಿಕ್ಕಿ ಅಲೆಮಾರಿಗಳ ಸ್ಥಿತಿ ಕಂಗಾಲಾಗಿರುತ್ತದೆ. ಆದ್ದರಿಂದ ವಸತಿ ಇಲಾಖೆಯಿಂದ ಮನೆ ಮಂಜೂರಾತಿ ಮತ್ತು ಕಾಮಗಾರಿಕೆಯ ಮೊತ್ತವನ್ನು 43 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ, ಮತ್ತು ನಗರದ ಸುತ್ತ ಮುತ್ತಲಿನ ಹೊರವಲಯದಲ್ಲಿ ಗುಡಾರ ಟೆಂಟ್ಗಳಲ್ಲಿ ಸುಮಾರು 300 ರಿಂದ 350 ಕುಟುಂಬಗಳು ಸುಮಾರು ವರ್ಷಗಳಿಂದ ನಿವೇಶನ ಇಲ್ಲದೆ, ಮನೆಯಿಲ್ಲದೇ, ಇತರೆ ಅತೀ ನಿರ್ಗತಿಕರಾಗಿ ಬಡಕುಟುಂಬದ ಅಲೆಮಾರಿಗಳು ವಾಸವಾಗಿರುತ್ತಾರೆ. ಇವರಿಗೆ ನಿವೇಶನ ಮತ್ತು ಮನೆಗಳನ್ನು ನೀಡುವಂತೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಸಹ ಸರ್ಕಾರದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದಯಮಾಡಿ ಈ ಅಲೆಮಾರಿ ಕುಟುಂಭಗಳಿಗೆ ನಿವೇಶನ ಮಂಜೂರು ಮಾಡಿ, ಹಕ್ಕು ಪತ್ರಗಳನ್ನು ವಿತರಿಸಿ, ಮನೆ ನಿರ್ಮಿಸಿಕೊಡುವಂತೆ ವಿಜಯನಗರ ಜಿಲ್ಲೆಯ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ವಿಜಯನಗರ ಜಿಲ್ಲಾ ಅಲೆಮಾರಿ, ಅರೆಅಲೆಮಾರಿ ಮತ್ತು ವಿಮುಕ್ತ  ಬುಡಕಟ್ಟುಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಣ್ಣ ಮಾರೆಪ್ಪ ರವರು ಮತ್ತು ಒಕ್ಕೂಟದ ಸರ್ವ ಸದಸ್ಯರು ತಮ್ಮಲ್ಲಿ ತುಂಬು ಹೃದಯ ಪೂರಕವಾಗಿ ಮತ್ತೊಮ್ಮೆ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ. 

ವಿಜಯನಗರ ಜಿಲ್ಲೆಯ, ಹೊಸಪೇಟೆ ತಾಲೂಕು, ಕಾರಿಗನೂರಿನ ಅಲೆಮಾರಿ ಹಕ್ಕಿ ಪಿಕ್ಕಿ ಕಾಲೋನಿಗೆ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹಮದ್ ಖಾನ್, ಹಾಗೂ ವಿಜಯನಗರ ಜಿಲ್ಲೆಯ ಶಾಸಕ ಹೆಚ್.ಆರ್.ಗವಿಯಪ್ಪ, ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್, ವಿಜಯನಗರ ಜಿಲ್ಲಾಧಿಕಾರಿಗಳು, ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾತನಾಡಿದಾಗ ಗಣಿ ಬಾದ್ಯತೆ ಹಣದಲ್ಲಿ  ಸುಮಾರು 1193ಕೋಟಿ ಹಣವಿದೆ ಈ ಹಣದಲ್ಲಿ ಈ ಅಲೆಮಾರಿ ಹಕ್ಕಿ ಪಿಕ್ಕಿ ಜನಾಂಗದವರಿಗೆ 43 ಕುಟುಂಬಗಳಿಗೆ ಮನೆಗಳನ್ನು 3 ತಿಂಗಳಲ್ಲಿ ಕಟ್ಟಿಕೊಡುತ್ತೇವೆ ಇನ್ನು ಉಳಿದ 28 ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರಗಳನ್ನು ನೀಡುತ್ತೇವೆ ಎಂದು ಬಿ.ಜೆಡ್.ಜಮೀರ್ ಅಹಮದ್ ಖಾನ್ ಸಚಿವರು ಹೇಳಿ ಬರವಸೆ ನೀಡಿದರು.

ಈ ಸಂದರ್ಭದಲ್ಲಿ ಸಣ್ಣ ಮಾರೆಪ್ಪ ಅಧ್ಯಕ್ಷ, ಸಿದ್ದು ಬೆಳಗಲ್ ಉಪಾಧ್ಯಕ್ಷ, ರಮೇಶ ಜಿಲ್ಲಾ ಉಪಾಧ್ಯಕ್ಷ, ಕಿನ್ನೂರು ಶೇಕಪ್ಪ ಜಿಲ್ಲಾ ಉಪಾಧ್ಯಕ್ಷ, ಪಕ್ಕೀರಪ್ಪ ಬಾದಿಗಿ ಜಿಲ್ಲಾ ಸಹ ಕಾರ್ಯದಶರ್ಿ, ರಾಜಕುಮಾರ ಜಿಲ್ಲಾ ಸದಸ್ಯ ಮತ್ತು ಸ್ಥಳಿಯ ಮುಖಂಡರಾದ ಸಣ್ಣ ಬಾಬು, ಮಾರುತಿ, ಇನ್ನು ಮುಂತಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ