ಬಳ್ಳಾರಿ

ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಮನವಿ

ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ 

ಬಳ್ಳಾರಿ 1: ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ತಮ್ಮ ದ್ವೇಷವನ್ನು ಮುಂದುವರೆಸುವುದರ ಭಾಗವಾಗಿ, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಸುಳ್ಳು ಅರೋಪಗಳನ್ನು ಹೊರಿಸುವ ಮತ್ತು ಅವುಗಳನ್ನು ಪ್ರಚೋದಿಸುವ ಕೆಲಸವನ್ನು ಮುಂದುವರೆಯುತ್ತಿದ್ದು, ಇವುಗಳಿಗೆ ಸಂವಿಧಾನ ಬದ್ಧ ರಕ್ಷಣೆ ನೀಡಲು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಇಂದು ಭಾರತ ಕಮ್ಯುನಿಷ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿತು.  

ಈ ಸಂದರ್ಭದಲ್ಲಿ ಮಾತನಾಡಿ ಜಿಲ್ಲಾ ಕಾರ್ಯದರ್ಶಿ ಜೆ.ಸತ್ಯಬಾಬು ಅವರು, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಸುಳ್ಳು ಅರೋಪಗಳನ್ನು ನಿಜವೆಂದು ಬಿಂಬಿಸುವ ಮೂಲಕ ಕಾನೂನುಗಳನ್ನು ಕೈಗೆತ್ತಿಕೊಂಡು ದಾಳಿ ನಡೆಸುವ ದುಷ್ಕೃತ್ಯದಲ್ಲಿ ತೊಡಗಿವೆ. ಇಂತಹ ಶಕ್ತಿಗಳಿಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಭಯವಿಲ್ಲದೇ ಇರುವುದರಿಂದ, ಕಾನೂನುಬದ್ದವಾಗಿ ವ್ಯವಹರಿಸದೇ, ತಾವೇ ಶಾಸಕಾಂಗ ಮತ್ತು ತಾವುಗಳೇ ಕಾಯಾಂರ್ಗ ಹಾಗೂ ಕೊನೆಗೆ ತಾವೇ ನ್ಯಾಯಾಂಗ ಎಂಬಂತೆ ವರ್ತಿಸಿ, ತಾವೇ ತೀರ​‍್ು ನೀಡಿ ಶಿಕ್ಷಿಸುವ ಪುಂಡಾಟಿಕೆಯ ಗುಂಪುಗಳು ಹೆಚ್ಚುತ್ತಿವೆ ಎಂದರು. 

ಅನೇಕ ಸಂದರ್ಭಗಳಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ, ಈ ರೀತಿಯ ಸುಳ್ಳು ಅರೋಪಗಳನ್ನು ಸೃಷ್ಷಿಸುವ ತಂಡಗಳು ಕೋಮುವಾದಿ ಹಿಂಸಾಚಾರಕ್ಕೆ ಪ್ರಚೋದಿಸುತ್ತಿವೆ. ಇಂತಹ ಘಟನೆಗಳಲ್ಲಿ ಕೋಮುವಾದಿ ದುಷ್ಕೃತ್ಯಗಳನ್ನು ಎಸಗುತ್ತಿರುವವರು ತಪ್ಪಿಸಿಕೊಂಡು, ಸಂತ್ರಸ್ತರು ಮತ್ತು ಅವರನ್ನು ಬೆಂಬಲಿಸುವವರನ್ನು, ಸುಳ್ಳು ಕೇಸುಗಳಲ್ಲಿ ಕರಾಳ ಕಾನೂನುಗಳ ಅಡಿಯಲ್ಲಿ ಸಿಲುಕಿಸುವ ಕೆಲಸ ನಡೆಯುತ್ತಿದೆ. ಸಂವಿಧಾನ ಬದ್ದವಾಗಿ ನಡೆದುಕೊಳ್ಳ ಬೇಕಾದ ಸರ್ಕಾರ, ಸ್ಥಳೀಯ ಆಡಳಿತ, ಪೊಲೀಸ್ ಇಲಾಖೆಯೂ ಸಹ ಸ್ಥಳೀಯ ಒತ್ತಡಗಳಿಗೆ ಒಳಗಾಗಿ ನಡೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಗಲಭೆ ಸೃಷ್ಟಿಸಲೆಂದು ಇರುವ ಈ ಗುಂಪುಗಳು, ಮುಖ್ಯವಾಗಿ, ಇತ್ತೀಚಿನ ದಿನಗಳಲ್ಲಿ ತುಮಕೂರು, ಕೋಲಾರ, ಕೊಡಗು, ಮಂಗಳೂರು ಜಿಲ್ಲೆಗಳಲ್ಲಿ  ಇಂತಹ ಪ್ರಕರಣಗಳನ್ನು ನಡೆಸಿವೆ. ಇವು ನಡೆದ ಊರಿನ ಶಾಂತಿ-ಸೌರ್ಹದತೆಯನ್ನು ದಮನಿಸುತ್ತಿವೆ. ಕಾನೂನು ಕೈಗೆತ್ತಿಕೊಳ್ಳುತ್ತಿರುವ ಈ ಗುಂಪುಗಳನ್ನು ನಿಯಂತ್ರಿಸಬೇಕು ಹಾಗೂ ಅಲ್ಪಸಂಖ್ಯಾತರ ಮೇಲಿನ ಇಂತಹ ಧ್ವೇಷಮಯ ದಾಳಿಗಳನ್ನು ಸಂವಿಧಾನ ಮೇಲಿನ ದಾಳಿ ಎಂದು ಪರಿಗಣಿಸುವಂತೆ ಸಿಪಿಐ (ಎಂ) ಅಗ್ರಹಪೂರ್ವಕವಾಗಿ ಒತ್ತಾಯಿಸುತ್ತದೆ ಎಂದರು. 

ಮತಾಂತರದ ನೆಪವೊಡ್ಡಿ, ಕೈಸ್ತರ ಧಾರ್ಮಿಕ ಅರಾಧನಾ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ, ಈ ದಾಳಿಗಳಲ್ಲಿ ಹಿಂಸೆಗೆ ಒಳಗಾದ ಬಹುತೇಕ ಜನರು, ಅದಿವಾಸಿಗಳು ಮತ್ತು ದಲಿತರಾಗಿದ್ದಾರೆ. ಗೋರಕ್ಷಣೆ, ಲವ್ ಜಿಹಾದ್‌ಗಳೆಂಬ ದುಷ್ಕೃತ್ಯದ ಹೆಸರಲ್ಲಿ ಮುಸ್ಲಿಂ, ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲಿನ ಹಿಂಸಾಚಾರ ಪ್ರಕರಣಗಳು ಮುಂದುವರೆಯುತ್ತಿವೆ. ಮಸೀದಿಗಳನ್ನು ಹಾಳುಗೆಡವುತ್ತಿದ್ದಾರೆ, ಬೀದಿ ಬದಿ ವ್ಯಾಪಾರಿಗಳನ್ನು ಬೆದರಿಸಲಾಗುತ್ತಿದೆ, ಶಿಕ್ಷಣ ಸಂಸ್ಥೆಗಳಲ್ಲಿ ಸಹ ಹೊಸ, ಹೊಸ ಸಮಸ್ಯೆಗಳನ್ನು ಬೇಕೆಂದೇ ಸೃಷ್ಟಿಸಲಾಗುತ್ತಿದೆ. ಅಲ್ಲದೇ ಸೌರ್ಹಾದತೆಯ ಕೇಂದ್ರಗಳಾಗಬೇಕಾದ ಇವುಗಳನ್ನು ಕೋಮು ವಿಭಜನೆ ತರುವ , ಪರಸ್ಪರ ನಂಬಿಕೆ, ವಿಶ್ವಾಸಗಳು ಇಲ್ಲದಂತ ಪರಿವರ್ತಿಸಿ ನಿರ್ಮಾಣಮಾಡುವ ಕೇಂದ್ರಗಳನ್ನಾಗಿಸುತ್ತಿವೆ. ಇಂತಹ ಪ್ರಯತ್ನಗಳನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ತಡೆಯಬೇಕಾಗಿದೆ ಎಂದು ತಿಳಿಸಿದರು. 

ದೇಶದ ಅಲ್ಪಸಂಖ್ಯಾತರ ಆರ್ಥಿಕ-ಸಾಮಾಜಿಕ ಮತ್ತು ಶೈಕ್ಷಣಿಕ, ರಾಜಕೀಯ ಪರಿಸ್ಥಿತಿಗಳ ಕುರಿತು ಭಾರತ ಸರ್ಕಾರ ನೇಮಿಸಿದ್ದ ಡಾ. ರಾಜೇಂದ್ರ ಸಾಚಾರ್ ಸಮಿತಿಯು ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಸ್ಥಿತಿ ಅತೀ ದಾರುಣವಾಗಿದೆ ಎಂಬುದನ್ನು ದಾಖಲೆಗಳ ಸಮೇತ ತನ್ನ ವರದಿಯಲ್ಲಿ ತಿಳಿಸಿದೆ, ಇದರ ಸುಧಾರಣೆಗೆ ಕೆಲಸ ಮಾಡಬೇಕಾದ ಸರ್ಕಾರ, ಮುಸ್ಲಿಂ ಅಲ್ಪಸಂಖ್ಯಾತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿರುವುದನ್ನು ಸಿಪಿಐ (ಎಂ) ಖಂಡಿಸುತ್ತದೆ. ಇದನ್ನು ಮುಂದುವರೆಸಲು ರಾಜ್ಯ ಸರ್ಕಾರವನ್ನು ಅಗ್ರಹಿಸುತ್ತದೆ. ಮಾತ್ರವಲ್ಲಾ, ತಮ್ಮ ಸರ್ಕಾರ ಅಲ್ಪಸಂಖ್ಯಾತರು, ದಲಿತರು ಮತ್ತಿತರರ ಆಹಾರದ ಹಾಗೂ ಬದುಕುವ ಹಕ್ಕುಗಳ ಮೇಲೆ ಮತ್ತು ರಾಜ್ಯದ ಎಲ್ಲಾ ಹೈನುಗಾರರು, ಹೈನೋದ್ಯಮ ಹಾಗೂ ಮಾಂಸೋದ್ಯಮದ ಮೇಲೆ ದಾಳಿ ನಡೆಸಲು ಕಾರ​‍್ೋರೇಟ್ ಕಂಪನಿಗಳಿಗೆ ಅವಕಾಶ ನೀಡುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020ನ್ನು ಜಾರಿಗೊಳಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಇದರಿಂದ ಉದ್ಯೋಗ ಕಳೆದುಕೊಂಡ ಮತ್ತು ಆರ್ಥಿಕ ನಷ್ಠ ಹೊಂದಿದ ಲಕ್ಷಾಂತರ ಖುರೇಷಿಗಳಿಗೆ ಯಾವುದೇ ಪರಿಹಾರಗಳನ್ನು ನೀಡಿರುವುದಿಲ್ಲ. ತಕ್ಷಣವೇ ಪರಿಹಾರ ನೀಡಲು ಒತ್ತಾಯಿಸಿದರು.  

ಭಾರತ ಕಮ್ಯುನಿಷ್ಟ್‌ ಪಕ್ಷ (ಮಾರ್ಕ್ಸ್‌ವಾದಿ) ಹಕ್ಕೊತ್ತಾಯಗಳಾದ ಅಲ್ಪಸಂಖ್ಯಾತರ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕು. ಅವರ ಮೇಲಿನ ಕೋಮು ಹಿಂಸಾಚಾರವನ್ನು ನಿಲ್ಲಿಸಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಕೋಮು ಹಿಂಸಾಚಾರವನ್ನು ಸೃಷ್ಟಿಸುವ ಪುಂಡಾಟಿಕೆಯ ಗುಂಪುಗಳ ಮೇಲೆ ಹದ್ದಿನ ಕಣ್ಣಿಟ್ಟು ಅವುಗಳ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಕಠಿಣವಾಗಿ ಕ್ರಮ ವಹಿಸಬೇಕು. ಕೋಮು-ದ್ವೇಷದ ಹಿಂಸಾಚಾರದಲ್ಲಿ ಹಿಂಸೆಗೊಳಗಾದ ಎಲ್ಲರಿಗೂ ಸೂಕ್ತ ಪರಿಹಾರ ಮತ್ತು ಪ್ರಾಣ ಕಳೆದುಕೊಂಡ ಕುಟುಂಬಗಳ ಸದಸ್ಯರಿಗೆ ಸರಕಾರಿ ಉದ್ಯೋಗ ಒದಗಿಸಬೇಕು. ಡಾ. ರಾಜೇಂದ್ರ ಸಾಚಾರ್ ಸಮಿತಿಯ ಶಿಫಾರಸ್ಸಿನಂತೆ ಅಲ್ಪಸಂಖ್ಯಾತರ ಆರ್ಥಿಕ-ಸಾಮಾಜಿಕ, ಮತ್ತು ಶೈಕ್ಷಣಿಕ, ಅಭಿವೃದ್ದಿಗೆ ಸರ್ಕಾರ ಸಮಗ್ರ ಯೋಜನೆ ರೂಪಿಸಬೇಕು. ರಾಜ್ಯ ಸರ್ಕಾರ ನಿಲ್ಲಿಸಿರುವ ವಿಧ್ಯಾರ್ಥಿ ವೇತನವನ್ನು ಪುನರಾರಂಭಿಸಬೇಕು. ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020ನ್ನು ಕೂಡಲೇ ವಾಪಾಸು ಪಡೆಯಬೇಕು. ಇದರಿಂದಾಗಿ ಉದ್ಯೋಗ ಕಳೆದುಕೊಂಡ ಹಾಗೂ ಆರ್ಥಿಕ ನಷ್ಠ ಹೊಂದಿದ ಖುರೇಷಿಗಳಿಗೆ ತಲಾ ಕನಿಷ್ಠ ಲಕ್ಷ ರೂ. ಗಳ ಪರಿಹಾರ ಮತ್ತು ಹೊಸ ಉದ್ಯೋಗದಲ್ಲಿ ತೊಡಗಲು ಸಹಾಯ ಧನದ ಆರ್ಥಿಕ ನೆರವನ್ನು ಪ್ರಕಟಿಸಲು ಒತ್ತಾಯಿಸಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಜೆ.ಚಂದ್ರಕುಮಾರಿ, ಎ.ಮಲ್ಲಮ್ಮ ತಾಲ್ಲೂಕು ಸಮಿತಿ ಸದಸ್ಯರಾದ ಪಿ.ಆರ್‌.ವೆಂಕಟೇಶ್, ರಂಗನಾಥ್, ಶಂಕರಗೌಡ, ರಾಣಿ ಎಲಿಜೆಬೆತ್, ಈರಮ್ಮ, ಯು.ಎರಿ​‍್ರಸ್ವಾಮಿ, ಅರುಣ, ನವೀನ್, ವೆಂಕಟೇಶ್ ಗೋಟೂರ್, ರಾಮಾಂಜಿನಿ ರೂಪನಗುಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ