ಪೋಷಕರ ಪತ್ತೆಗೆ ಮನವಿ
ಬಳ್ಳಾರಿ 13: ಸಂಡೂರು ತಾಲೂಕಿನ ಲಿಂಗದಳ್ಳಿ ಗ್ರಾಮದ ಊರು ಹೊರಗಿನ ಹಳ್ಳ ಪಕ್ಕದಲ್ಲಿ ಯಾರೋ ನವಜಾತ ಹೆಣ್ಣು ಶಿಶುವನ್ನು ಬಿಟ್ಟುಹೋಗಿದ್ದು, ಸಂಡೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೇ 28ರಂದು ಬೆಳಗ್ಗೆ ಮಗುವನ್ನು ರಕ್ಷಿಸಿ ಅಮೂಲ್ಯ(ಜಿ) ವಿಶೇಷ ದತ್ತು ಸಂಸ್ಥೆ, ಬಳ್ಳಾರಿ ಸಂಸ್ಥೆಗೆ ಒಪ್ಪಿಸಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರು: ಸಾನ್ವಿ(ಅಧೀಕ್ಷಕರು, ಅಮೂಲ್ಯ(ಜಿ)ವಿಶೇಷ ದತ್ತು ಸಂಸ್ಥೆ, ಬಳ್ಳಾರಿ ರವರು ಇಟ್ಟಿರುವ ಹೆಸರು), ಹೆಣ್ಣು ಮಗು, ತಂದೆ-ತಾಯಿಯ ಹೆಸರು ಗೊತ್ತಿಲ್ಲ. ಮಗು ಸಿಕ್ಕಿದಾಗ 1 ದಿನದ ವಯಸ್ಸು, ಚಹರೆ ಗುರುತು: ದುಂಡು ಮುಖ, ಬಿಳಿ ಬಣ್ಣ. ಮಗುವಿನ ಪೋಷಕರ ಬಗ್ಗೆ ಮಾಹಿತಿ ಸಿಕ್ಕಲ್ಲಿ. ಅಧೀಕ್ಷಕರು, ಅಮೂಲ್ಯ(ಜಿ) ವಿಶೇಷ ದತ್ತು ಸಂಸ್ಥೆ, ಬಳ್ಳಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಕಂಟೋನ್ಮೆಂಟ್ ಬಳ್ಳಾರಿ, ದೂರವಾಣಿ ಸಂಖ್ಯೆ: 08392-297101, ಇವರಿಗೆ ಅಥವಾ ಈ ಮೇಲ್: ಣ62@ರಡಿಣಚಿ@ರಟಚಿಟ.ಛಿಠಟ ಗೆ ಮಾಹಿತಿ ನೀಡಲು ಕೋರಲಾಗಿದೆ